krishi Bhagya Yojana: ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ 2025 ಅರ್ಜಿ ಪ್ರಾರಂಭ.! ಕೃಷಿ ಹೊಂಡ ನಿರ್ಮಾಣಕ್ಕೆ ಧನ ಸಹಾಯ ಬೇಗ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರ ಕಡೆಯಿಂದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಾಣ ಹಾಗೂ ಪಾಲ ತಿನ್ನುವುದಕ್ಕೆ ಮತ್ತು ನೀರಾವರಿ ಪಂಪ್ ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ನಿರ್ಮಾಣಕ್ಕೆ ಇದೀಗ ಹೊಸದಾಗಿ ಅರ್ಜಿ ಆರಂಭ ಮಾಡಲಾಗಿದೆ ಆಸಕ್ತಿ ಇರುವಂತಹ ರೈತರು ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ಯೋಜನೆ ಅಡಿಯಲ್ಲಿ ಯಾವ ಲಾಭ ಸಿಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಬ್ಯಾಂಕ್ ಆಫ್ ಬರೋಡ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆರಂಭ ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ
ಕೃಷಿಭಾಗ್ಯ ಯೋಜನೆ ಮುಖ್ಯ ಉದ್ದೇಶ (krishi Bhagya Yojana).?
ಕೃಷಿಭಾಗ್ಯ ಯೋಜನೆ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ.! ಈ ಯೋಜನೆ ಅಡಿಯಲ್ಲಿ ರಾಜ್ಯದ ರೈತರಿಗೆ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ರೈತರಿಗೆ ಬೆಂಬಲಿಸುವ ಉದ್ದೇಶದಿಂದ ಮತ್ತು ರೈತರ ಆದಾಯವನ್ನು ಸುಧಾರಿಸುವ ಹಾಗೂ ಹೆಚ್ಚಿಸುವ ಉದ್ದೇಶದಿಂದ ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ

ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ರೈತರಿಗೆ ಕೃಷಿ ಹೊಂಡ ನಿರ್ಮಾಣ ಹಾಗೂ ಪಾಲಿಥಿನ್ ಹೊದಿಕೆ ಮತ್ತು ನೀರಾವರಿ ಪಂಪ್ ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ನಿರ್ಮಾಣ ಮತ್ತು ತಂತಿ ಬೇಲಿ ಮುಂತಾದ ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಆದ್ದರಿಂದ ಪ್ರಸ್ತುತ ಈ ಯೋಜನೆ ಅಡಿಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ
ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ ರೂ.100 ಗೆ 90 ದಿನ ವ್ಯಾಲಿಡಿಟಿ ಸಿಗುತ್ತೆ ಇಲ್ಲಿದೆ ನೋಡಿ ಮಾಹಿತಿ
ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಸೌಲಭ್ಯಗಳು (krishi Bhagya Yojana).?
ಕೃಷಿ ಹೊಂಡ ನಿರ್ಮಾಣ:- ರೈತರು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಹಾಗೂ ಮಳೆ ನೀರು ಸಂಗ್ರಹಿಸಲು ಕೃಷಿ ಹೊಂಡ ಮಾಡಲು ಸಾಮಾನ್ಯ ರೈತ ವರ್ಗಕ್ಕೆ 80% ಸಬ್ಸಿಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ರೈತರಿಗೆ ಶೇಕಡ 90ರಷ್ಟು ಸಹಾಯಧನ ನೀಡಲಾಗುತ್ತಿದೆ
ಪಾಲಿಥಿನ್ ಹೊದಿಕೆ:- ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ರೈತರು ಕೃಷಿ ಹೊಂಡದಲ್ಲಿ ನೀರು ಇಂಗದಂತೆ ಪಾಲಿಥಿನ್ ಹೊದಿಕೆಯನ್ನು ಅಳವಡಿಸಲು ಸಹಾಯಧನ ನೀಡಲಾಗುತ್ತದೆ
ಸೂಕ್ಷ್ಮ ನೀರಾವರಿ ಘಟಕಗಳು:– ತುಂತುರು ನೀರಾವರಿ ಅಥವಾ ಹನಿ ನೀರಾವರಿ ಘಟಕಗಳ ಅಳವಡಿಕೆಗಾಗಿ ರೈತರಿಗೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಹಾಯಧನ ನೀಡಲಾಗುತ್ತದೆ
ನೀರಾವರಿ ಪಂಪ್ಸೆಟ್ ಗಳು:- ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡದಿಂದ ನೀರು ಎತ್ತಲು ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಡೀಸೆಲ್ ಹಾಗೂ ಪೆಟ್ರೋಲ್ ಅಥವಾ ಸೋಲಾರ್ ಚಾಲಿತ ಪಂಪ್ಸೆಟ್ ಗಳನ್ನು ವಿತರಿಸಲಾಗುತ್ತಿದೆ
ತಂತಿ ಬೇಲಿ:- ತಮ್ಮ ಜಮೀನು ಸುತ್ತಮುತ್ತಲು ಹಾಗೂ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಸಲು ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನ ಸಿಗುತ್ತದೆ
ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು (krishi Bhagya Yojana).?
- ರೈತರ ಪಹಣಿ
- ಅರ್ಜಿದಾರ ಆಧಾರ್ ಕಾರ್ಡ್
- ನೀರು ಬಳಕೆಯ ಪ್ರಮಾಣ ಪತ್ರ
- ಲೇವಣಿ
- ಅರ್ಜಿ ನಮೂನೆ
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ (krishi Bhagya Yojana).?
ಸ್ನೇಹಿತರೆ ನೀವು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಅಥವಾ ನಿಮ್ಮ ಸಮೀಪದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಹೊಸ ಮಾಹಿತಿ ಸಿಗುತ್ತದೆ