Bele Parihara Payment 2025: ಎರಡು ಕಂತಿನ ಬೆಳೆ ಪರಿಹಾರ ರೈತರಿಗೆ ಒಟ್ಟಿಗೆ ಜಮಾ.! ಹಣ ಬೇಕಾದರೆ ಈ ಕೆಲಸ ಮಾಡಿ
ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ.! ಹೌದು ಗೆಳೆಯರೇ 2025 ಮತ್ತು 26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅತಿಯಾದ ಮಳೆಯಿಂದ ಅಥವಾ ಅತಿವೃಷ್ಟಿಯಿಂದ ರೈತರು ಬೆಳೆದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇತ್ತೀಚಿಗೆ ಎರಡು ಕಂತಿನ ಹಣ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ
ಆದರೆ ನಮ್ಮ ಕಂದಾಯ ಸಚಿವರು ಮಾಹಿತಿ ನೀಡಿರುವ ಪ್ರಕಾರ ಕೆಲ ತಾಂತ್ರಿಕ ಸಮಸ್ಯೆಯಿಂದ ಸುಮಾರು 44,000 ಕ್ಕಿಂತ ಹೆಚ್ಚಿನ ರೈತರಿಗೆ ಇನ್ನು ಕೂಡ ಹಣ ಜಮಾ ಆಗಿಲ್ಲ ಇದರ ಜೊತೆಗೆ ಕೆಲ ರೈತರಿಗೆ ಬೆಳೆ ಪರಿಹಾರ ಹಣ ತುಂಬಾ ಕಡಿಮೆ ಬಂದಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಬೆಳೆ ಪರಿಹಾರ ಹಣ ಬಾರದೆ ಹೋದರೆ ಏನು ಮಾಡಬೇಕು ಹಾಗೂ ಬೆಳೆ ಪರಿಹಾರ ಕಡಿಮೆ ಬಂದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ರೈತರ ಖಾತೆಗೆ ಎರಡು ಕಂತಿನ ಬೆಳೆ ಪರಿಹಾರ ಹಣ ಒಟ್ಟಿಗೆ ಜಮಾ..?
ಹೌದು ಗೆಳೆಯರೆ ಇತ್ತೀಚಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡರು ಸದನದಲ್ಲಿ ಮಾಹಿತಿ ತಿಳಿಸಿದ್ದಾರೆ ಅವರು ನೀಡಿರುವ ಮಾಹಿತಿಯ ಪ್ರಕಾರ ರೈತರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗಾಗಲೇ ಕರ್ನಾಟಕದ ರಾಜ್ಯದ ರೈತರ ಎಲ್ಲಾ ಖಾತೆಗಳಿಗೂ ಕೂಡ ಎರಡು ಕಂತಿನ ಹಣ ಬಿಡುಗಡೆಯಾಗಿದೆ ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಇನ್ನೂ 44,000 ಕ್ಕಿಂತ ಹೆಚ್ಚಿನ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಇದಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಭೈರೇಗೌಡರು ಮಹತ್ವದ ಘೋಷಣೆ ನೀಡಿದ್ದಾರೆ

ಯಾವ ರೈತರ ಖಾತೆಗೆ ಇನ್ನೂ ಎರಡು ಕಂಚಿನ ಹಣ ಜಮಾ ಆಗಿಲ್ಲ ಅಂತವರಿಗೆ ಒಟ್ಟಿಗೆ ಎರಡು ಕಂತಿನ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.
ಆದ್ದರಿಂದ ನಿಮಗೆ ಇನ್ನೂ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ ಕೆಳಗಡೆ ನೀಡಿದ ಎಲ್ಲಾ ನಿಯಮಗಳು ಮತ್ತು ರೂಲ್ಸ್ ಪಾಲಿಸಬೇಕು. ಅಂದರೆ ಮಾತ್ರ ನಿಮಗೆ ಹಣ ಬರುತ್ತೆ
ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಬೇಕು..?
FID ಸರಿಯಾಗಿ ಇರಬೇಕು: ಹೌದು ಗೆಳೆಯರೇ ರೈತರ ಜಮೀನು ಖಾತೆಗೆ ಕೆಲವೊಂದು ತಪ್ಪಾದ fid ಕ್ರಿಯೇಟ್ ಆಗಿದೆ ಆದ್ದರಿಂದ ತುಂಬಾ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಹಾಗಾಗಿ ನಿಮ್ಮ ಜಮೀನಿಗೆ ಸರಿಯಾದ fid ಕ್ರಿಯೇಟ್ ಆಗಿಲ್ಲವೆಂದರೆ ನಿಮಗೆ ಹಣ ಬರುವುದಿಲ್ಲ ಹಾಗಾಗಿ ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಕೃಷಿ ಇಲಾಖೆಗೆ ಅಥವಾ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ fid ಸರಿ ಮಾಡಿಕೊಳ್ಳಿ
ನಿಮ್ಮ ಜಮೀನಿಗೆ ಇನ್ನು ಎಫ್ ಐಡಿ ಕ್ರಿಯೇಟ್ ಆಗಿಲ್ಲವೆಂದರೆ ಕೂಡಲೇ ಎಫ್ ಐ ಡಿ ಕ್ರಿಯೇಟ್ ಮಾಡಿ ಎಲ್ಲ ದಾಖಲಾತಿಗಳನ್ನು ನಿಮ್ಮ ಹತ್ತಿರದ ಕೃಷಿ ಕೇಂದ್ರಕ್ಕೆ ಅಥವಾ ನಿಮ್ಮ ಗ್ರಾಮದ ಕುಲಕರ್ಣಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ
ದಾಖಲಾತಿಗಳನ್ನು ಸರಿಪಡಿಸಿ: ಹೌದು ಗೆಳೆಯರೇ ತುಂಬಾ ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗದೇ ಇರಲು ಪ್ರಮುಖ ಕಾರಣವೇನೆಂದರೆ ಅದು ರೈತರ ದಾಖಲಾತಿಗಳಲ್ಲಿ ಹೆಸರು ಸರಿಯಾಗಿ ಇಲ್ಲ ಅದರ ಜೊತೆಗೆ ರೈತರ ದಾಖಲಾತಿಗಳು ಸರಿ ಇಲ್ಲ ಹಾಗಾಗಿ ರೈತರು fid ಮತ್ತು ರೈತರ ಜಮೀನು ದಾಖಲಾತಿ ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಮುಂತಾದ ದಾಖಲೆಗಳಲ್ಲಿ ರೈತರ ಹೆಸರು ಒಂದೇ ಆಗಿರಬೇಕು ಅಂದರೆ ಮಾತ್ರ ಹಣ ಬರುತ್ತೆ
ಬ್ಯಾಂಕ್ ಖಾತೆ: ಹೌದು ಗೆಳೆಯರೇ ಇದರ ಜೊತೆಗೆ ರೈತರು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ekyc ಮಾಡಿಸಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಅಂದ್ರೆ ಮಾತ್ರ ರೈತರಿಗೆ ಹಣ ಬರುತ್ತೆ ಹಾಗೂ ರೈತರು ತಮ್ಮ ಜಮೀನು ದಾಖಲಾತಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಕಡ್ಡಾಯವಾಗಿ ekyc ಪೂರ್ಣಗೊಳಿಸಿರಬೇಕು
ಬೆಳೆ ಪರಿಹಾರ ಹಣ ಬಂದಿಲ್ಲ ಮತ್ತು ಪರಿಹಾರ ಹಣ ಕಡಿಮೆ ಬಂದಿದೆ ಏನು ಮಾಡಬೇಕು..?
ಹೌದು ಗೆಳೆಯರೇ ತುಂಬಾ ರೈತರಿಗೆ ಬೆಳೆ ಪರಿಹಾರ ಹಣ ಕಡಿಮೆ ಬಂದಿದೆ ಹಾಗೂ ಇನ್ನೂ ಹಲವಾರು ರೈತರ ಖಾತೆಗೆ 2ನೇ ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ರೈತರು ಏನು ಮಾಡಬೇಕು ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಅಂತ ರೈತರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ
ಹೌದು ಗೆಳೆಯರೆ ನಿಮಗೆ ಬೆಳೆ ಪರಿಹಾರ ಹಣ ಇನ್ನು ಜಮಾ ಆಗಿಲ್ಲ ಅಂದರೆ ಮೇಲೆ ಹೇಳಿದ ಎಲ್ಲಾ ನಿಯಮಗಳನ್ನು ಪಾಲಿಸಿ ಖಂಡಿತವಾಗಲು ಜಮಾ ಆಗುತ್ತೆ ಒಂದು ವೇಳೆ ಹಣ ಜಮಾ ಆಗುತ್ತಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ನಿಮ್ಮ ಗ್ರಾಮದ ಕುಲಕರಣಿ ಅಥವಾ ಗ್ರಾಮ ಲೆಕ್ಕದ ಅಧಿಕಾರಿಗಳನ್ನು ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಒಂದು ವೇಳೆ ನಿಮಗೆ ಬೆಳೆ ಪರಿಹಾರ ಹಣ ಕಡಿಮೆ ಬಂದಿದೆ ಎಂದರೆ ಕೂಡಲೇ ನೀವು ನಿಮ್ಮ ಗ್ರಾಮದ ಕುಲಕರಣಿ ಅಥವಾ ಗ್ರಾಮ ಲೆಕ್ಕೀಗ ಅಧಿಕಾರಿಗಳನ್ನು ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಕಡಿಮೆ ಬಂದಿದೆ. ಹಾಗೂ ನಿಮ್ಮ ಜಮೀನಿನಲ್ಲಿ ಎಷ್ಟು ಬೆಳೆ ನಾಶ ಆಗಿದೆ ಎಂಬ ಜಿಪಿಎಸ್ ಫೋಟೋ ತೆಗೆದುಕೊಂಡು ಸಾಕ್ಷಿ ಸಮೇತ ತೋರಿಸಿ ಆವಾಗ ನಿಮಗೆ ಸರಿಯಾದ ಮೊತ್ತದಲ್ಲಿ ಬೆಳೆ ಪರಿಹಾರ ಜಮಾ ಆಗುತ್ತದೆ ಒಂದು ವೇಳೆ ಯಾವುದೇ ರೀತಿ ಅಕ್ರಮವಾದರೆ ನೀವು ಕೂಡಲೇ ಸಂಬಂಧಪಟ್ಟ ಇಲಾಖೆಯ ಮೇಲೆ ಅಧಿಕಾರಿಗಳಿಗೆ ದೂರು ನೀಡಿ ಅಂದರೆ ಮಾತ್ರ ನಿಮಗೆ ಸರಿಯಾದ ಪ್ರಮಾಣದಲ್ಲಿ ಬೆಳೆ ಪರಿಹಾರ ಸಿಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು









