SSLC RESULT 2025 Live : ಮೇ 2 ಅಥವಾ 3ರಂದು ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ..!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ತಮಗೆ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ್ದ 2025 ನೇ ಸಾಲಿನ 10ನೇ ತರಗತಿ ಪರೀಕ್ಷೆ 1 ರ ಫಲಿತಾಂಶ ಮೇ 2 ಅಥವಾ 3ರಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ವೀಕ್ಷಿಸಿ

ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ಈ ಪರೀಕ್ಷೆ ನಡೆದಿದ್ದವು ಈಗಾಗಲೇ ಮೌಲ್ಯಮಾಪನ ಕಾರ್ಯ ಸಹ ಮುಕ್ತಾಯಗೊಂಡಿದೆ. ಅಂಕಗಳ ಡಿಜಿಟಲೀಕರಣ ಸಹಿತ ಕೆಲವು ಸಣ್ಣಪುಟ್ಟ ಕಾರ್ಯಗಳು ಉಳಿದುಕೊಂಡಿವೆ ಎಂದು ಪರಿಚಯ ಮಂಡಳಿಯ ಮೂಲ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು 8.96 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ನೋಂದಾಯಿಸಿಕೊಂಡಿದ್ದಾರೆ.
ಎಸ್ ಎಸ್ ಎಲ್ ಸಿ ರಿಸಲ್ಟ್ ಬಿಡುಗಡೆ ತಕ್ಷಣ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈ ರೀತಿ ರಿಸಲ್ಟ್ ಚೆಕ್ ಮಾಡಿ
(SSLC RESULT 2025 Live) SSLC ಫಲಿತಾಂಶ ನೋಡುವ ವಿಧಾನ
- ಮೊದಲನೆಯದಾಗಿ ಮಂಡಳಿಯ https://karresults.nic.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ಒಂದಾಯಿಸಿಕೊಳ್ಳಿ.
- ಹಾಗೂ ನಿಮ್ಮ ಜನ್ಮ ದಿನಾಂಕವನ್ನು ಸಹ ನೋಂದಾಯಿಸಿ.
- ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ನಿಮ್ಮ ಫಲಿತಾಂಶದ ವಿವರಣೆ ತೆರೆಯುತ್ತದೆ.
2 thoughts on “SSLC RESULT 2025 Live : ಮೇ 2 ಅಥವಾ 3ರಂದು ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ..!”