ಇಂದಿನಿಂದ ಬೆಳೆ ಹಾನಿ ಪರಿಹಾರ ಹಣ ರೈತರ ಖಾತೆಗೆ ಜಮಾ.! ಸಚಿವ ಈಶ್ವರ್ ಖಂಡ್ರೆ | ಸಿಎಂ ಸಿದ್ದರಾಮಯ್ಯ
ಹೌದು ಸ್ನೇಹಿತರೆ ಜಿಲ್ಲೆಯ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಬೆಳೆ ನಷ್ಟ ಉಂಟಾದಂತಹ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಮುಂದಿನ ಹದಿನೈದು ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮಾ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮಾಹಿತಿ ತಿಳಿಸಿದ್ದಾರೆ
ಹೌದು ಸ್ನೇಹಿತರೆ, ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವಂತ ಈಶ್ವರ ಖಂಡ್ರೆ 2025 ಮತ್ತು 2026 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಇದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ರೈತರು ಬೆಳೆದ ಬೆಳೆಗಳು ಹಾನಿ ಉಂಟಾಗಿವೆ.

ಮಹಾರಾಷ್ಟ್ರದಲ್ಲಿ ಅತಿಯಾದ ಮಳೆಯಿಂದ ನಮ್ಮ ರಾಜ್ಯದ ಕೃಷ್ಣಾನದಿ ದಡದಲ್ಲಿ ಹಾಗೂ ಭೀಮ ನದಿ ದಡದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ ಇದರಿಂದ ಸುಮಾರು ಬೀದರ್ ಜಿಲ್ಲೆಯಲ್ಲಿ 1,67,202 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗಿದೆ, ಹಾಗಾಗಿ ಶೀಘ್ರದಲ್ಲೇ ಜಿಲ್ಲಾ ಆಡಳಿತ ಈ ಬಗ್ಗೆ ಸಮೀಕ್ಷೆ ಪೂರ್ಣಗೊಳಿಸಿದೆ ಪರಿಹಾರ ತಂತ್ರಾಂಶವನ್ನು ಬಿಡುಗಡೆ ಮಾಡಿದೆ.
ಇದರ ಆಧಾರದ ಮೇಲೆ ರೈತರಿಗೆ ರೈತರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರದ NDRF & SDRF ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಸುಮಾರು ₹143.43 ಕೋಟಿ ರೂಪಾಯಿ ಮೊತ್ತದ ಬೆಳೆ ಪರಿಹಾರ ಹಣವನ್ನು ವಿತರಿಸಲು ನಿರ್ಧಾರ ಮಾಡಲಾಗಿದೆ
ಈ ಹಿಂದೆ ಅಕ್ಟೋಬರ್ 30ರ ಒಳಗಡೆ ರೈತರ ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ನಾನು ಮಾತು ಕೊಟ್ಟಿದ್ದೆ, ಅದೇ ರೀತಿ ಈಗ ರೈತರ ಖಾತೆಗೆ ಬೆಳೆ ಪರಿಹಾರ ಬಿಡುಗಡೆ ಮಾಡಲು ಕಾರ್ಯ ಶುರುವಾಗಿದ್ದು ಮುಂದಿನ ನಾಲ್ಕರಿಂದ ಐದು ದಿನಗಳ ಒಳಗಡೆ ಎಲ್ಲಾ ರೈತರ ಖಾತೆಗೆ ನೇರವಾಗಿ ಬೆಳೆ ಪರಿಹಾರ ಹಣ ಜಮಾ ಆಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ
ಅಕ್ಟೋಬರ್ 31ನೇ ತಾರೀಕು ಎನ್ ಡಿ ಆರ್ ಎಫ್ ಮಾನದಂಡದ ಪ್ರಕಾರ 143.34 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಮತ್ತು ಈಗಾಗಲೇ 17.25 ಕೋಟಿ ಬೆಲೆ ಪರಿಹಾರ ಬಿಡುಗಡೆ ಮಾಡಲಾಗಿದ್ದು ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ರೈತರ ಎಲ್ಲಾ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.
ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಯಾವಾಗ ಬೆಳೆ ಪರಿಹಾರ ಹಣ ಜಮಾ ಆಗುತ್ತೆ..?
ಈ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟ ಮಾಹಿತಿ ನೀಡಿದ್ದು ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚು ವರೆಯಾಗಿ 8500 ಪರಿಹಾರ ನೀಡುತ್ತಿದೆ, ಮುಂದಿನ 15 ದಿನಗಳ ಒಳಗಡೆ ಎಲ್ಲಾ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗಲಿದೆ ಎಂದು ಮಾಹಿತಿ ತಿಳಿಸಿದ್ದಾರೆ, ಹಾಗಾಗಿ ರೈತರು ಬೆಳೆ ಪರಿಹಾರ ಹಣ ಜಮಾ ಆಗುವರೆಗೂ ಕಾಯಬೇಕು,
ಒಂದು ವೇಳೆ ರೈತರಿಗೆ ಯಾವುದೇ ರೀತಿ ತೊಂದರೆ ಅಥವಾ ಬೆಳೆ ಪರಿಹಾರದ ಹಣದ ಬಗ್ಗೆ ಮಾಹಿತಿ ಬೇಕಾದರೆ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಗ್ರಾಮ ಲೆಕ್ಕೀಗ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಮಾಹಿತಿ ತಿಳಿಸಿದ್ದಾರೆ
ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು









