crop insurance: ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮಾ.! ಈ ರೀತಿ ಹಣದ ಸ್ಟೇಟಸ್ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಯೋಗದೊಂದಿಗೆ NDRF ಮಾರ್ಗಸೂಚಿ ಪ್ರಕಾರ ಕೆಲ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರದ ಹಣ ಬಿಡುಗಡೆ ಮಾಡಲಾಗಿತ್ತು ಈ ಒಂದು ಲೇಖನಯ ಮೂಲಕ ಯಾವ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗಿದೆ ಹಾಗೂ ಎಷ್ಟು ಬೆಳೆ ಪರಿಹಾರ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಹಾಗೂ ಬೆಳೆ ಪರಿಹಾರ ಹಣ ಜಮಾ ಆದ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡಬೇಕು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಬೆಳೆ ಹಾನಿ ಪರಿಹಾರ (crop insurance)..?
ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆದಂತಹ ಅಕಾಲಿಕ ಮಳೆಯಿಂದ ಹಾಗೂ ಪ್ರಕೃತಿ ವಿಕೋಪಗಳಿಂದ ರೈತರ ಬೆಳೆ ಹಾನಿ ಉಂಟಾಗಿದೆ ಇದರಿಂದ ಕೃಷಿ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ರೈತರ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆಯನ್ನು ಮಾಡಿದ್ದಾರೆ ಹಾಗೂ ಬೆಳೆ ನಷ್ಟ ಉಂಟಾದಂತಹ ರೈತರ ಖಾತೆಗೆ ಇದೀಗ NDRF ಮಾರ್ಗಸೂಚಿ ಅಡಿಯಲ್ಲಿ ಬೆಳೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಇದೀಗ ಬಿಡುಗಡೆ ಮಾಡಿದೆ

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಬೆಳೆ ಪರಿಹಾರ ಹಣ ಬಿಡುಗಡೆಗಾಗಿ ಸುಮಾರು 560 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಮೊದಲನೇ ಕಂತಿನ ರೂಪದಲ್ಲಿ ಸಾಕಷ್ಟು ರೈತರ ಖಾತೆಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದ್ದು ಈಗ ಪೆಂಡಿಂಗ್ ಇರುವಂತಹ ರೈತರ ಖಾತೆಗೆ ಸುಮಾರು 48.45 ಕೋಟಿ ಬೆಲೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರ ಇದೀಗ ಜಮಾ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ
ಯಾವ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ (crop insurance)..?
ಸ್ನೇಹಿತರೆ ಕಂದಾಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಧಾರವಾಡ ಜಿಲ್ಲೆಯ ರೈತರಿಗೆ ಸುಮಾರು 48.55 ಕೋಟಿ ರೂಪಾಯಿ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.! ಈ ಬೆಳೆ ಪರಿಹಾರ ಹಣ ಸುಮಾರು 69,573 ರೈತರ ಖಾತೆಗೆ ನೇರವಾಗಿ ರಾಜ್ಯ ಸರ್ಕಾರ ಇದೀಗ ಬಿಡುಗಡೆ ಮಾಡಿದೆ ಎಂದು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ದಿವ್ಯ ಪ್ರಭು ಅವರು ಮಾಹಿತಿ ಹಂಚಿಕೊಂಡಿದ್ದಾರೆ.!
ಹೌದು ಸ್ನೇಹಿತರೆ ಪ್ರಸ್ತುತ ಧಾರವಾಡ ಜಿಲ್ಲೆಯ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು ಇದಕ್ಕಾಗಿ ರಾಜ್ಯ ಸರ್ಕಾರ 48.45 ಕೋಟಿ ಬೆಲೆ ಹನಿ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ.! ಮತ್ತು ತಾಲೂಕು ವಾರು ಅಂಕಿ ಅಂಶಗಳು ನೋಡುವುದಾದರೆ ಧಾರವಾಡ ಜಿಲ್ಲೆಯ ಬೆಳೆ ಪರಿಹಾರ ಹಣ ಪಡೆದಂತ ರೈತರ ಅಂಕಿ ಅಂಶ ಈ ರೀತಿಯಾಗಿದೆ ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದೋಳ, ನವಗುಂದ, ಅಣ್ಣಿಗೇರಿ, ಸೇರಿ ಒಟ್ಟು ಏಳು ತಾಲೂಕಿನ 69,573 ರೈತರ ಖಾತೆಗೆ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾಹಿತಿ ಹಂಚಿಕೊಂಡಿದ್ದಾರೆ
ಬೆಳೆ ಪರಿಹಾರದ ಹಣ ಚೆಕ್ ಮಾಡುವುದು ಹೇಗೆ..?
- ಸ್ನೇಹಿತರೆ ಬೆಳೆ ಪರಿಹಾರದ ಹಣ ಚೆಕ್ ಮಾಡಲು ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ karnataka DBT status ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
- ನಂತರ ಜಮೀನಿನ ಮಾಲೀಕ ಅಥವಾ ಬೆಳೆ ಪರಿಹಾರ ಹಣ ಜಮಾ ಆದಂತ ವ್ಯಕ್ತಿಯ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ
- ನಂತರ ಈ ಒಂದು ಆಪ್ ಓಪನ್ ಮಾಡಿದ ತಕ್ಷಣ payment status ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ
- ನಂತರ ಅಲ್ಲಿ ನಿಮಗೆ crop insurance ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಅಲ್ಲಿ ಇಲ್ಲಿವರೆಗೂ ಎಷ್ಟು ಕಂತಿನ ಬೆಳೆ ಪರಿಹಾರ ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ನೋಡಲು ಸಿಗುತ್ತದೆ.! ಮತ್ತು ಈ ರೀತಿಯಾಗಿ ಬೆಳೆ ಪರಿಹಾರ ಹಣ ಜಮಾದ ಬಗ್ಗೆ ಸ್ಟೇಟಸ್ ಚೆಕ್ ಮಾಡಬಹುದು
ಒಂದು ವೇಳೆ ನೀವು ಧಾರವಾಡ ಜಿಲ್ಲೆಯ ರೈತರಾಗಿದ್ದರೆ ನಿಮಗೆ ಇನ್ನೂ ಬೆಳೆ ಪರಿಹಾರ ಹಣ ಜಮಾ ಆಗಿಲ್ಲವೆಂದರೆ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಕುಲಕರಣಿ ಅಥವಾ ಗ್ರಾಮ ಲೆಕ್ಕೀಗ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಚನೆಗಳು ಇತರ ಹಲವಾರು ಉಪಯುಕ್ತ ಮಾಹಿತಿಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜಾಯಿನ್ ಆಗಬಹುದು