ಕರ್ನಾಟಕದ 31 ಜಿಲ್ಲೆಯ ರೈತರ ಖಾತೆಗೆ 324 ಕೋಟಿ ರೂಪಾಯಿಗಳ ಬೆಳೆ ಪರಿಹಾರ ಹಣ ಬಿಡುಗಡೆ.! ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ ಕರ್ನಾಟಕದ ರೈತರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು. ಹೌದು ಗೆಳೆಯರೇ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಯಾದ ಮಳೆಯಿಂದ ತುಂಬಾ ರೈತರು ಬೆಳೆದ ಬೆಳೆಗಳು ಹಾನಿಗೆ ಒಳಗಾಗಿದ್ದಾರೆ ಅಂತ ರೈತರಿಗೆ ಇದೀಗ ರಾಜ್ಯ ಸರ್ಕಾರ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..
ಬೆಳೆ ಪರಿಹಾರ ಹಣ..?
ಹೌದು ಗೆಳೆಯರೇ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಇದರಿಂದ ರೈತರ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಹೇಳಬಹುದು ಇದರ ಜೊತೆಗೆ ತುಂಬಾ ರೈತರ ಬದುಕಿನ ಮೇಲೆ ಗಂಭೀರ ಪರಿಸ್ಥಿತಿ ಉಂಟುಮಾಡಿದೆ, ಇದರ ಜೊತೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ನಾಶವಾಗಿವೆ ಹಾಗೂ ತೋಟಗಾರಿಕೆ ಬೆಳೆ ಮತ್ತು ಅಡಿಕೆ ಹಾಗೂ ಇತರೆ ಬೆಳೆಗಳ ಇಳುವರಿಗು ಕೂಡ ಕಡಿಮೆಯಾಗಿದೆ ಹಾಗಾಗಿ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಇದೀಗ ಬೆಳೆ ಪರಿಹಾರ ಹಣ ನೀಡುತ್ತಿದೆ

ಕರ್ನಾಟಕದ 31 ಜಿಲ್ಲೆಯ ರೈತರ ಬ್ಯಾಂಕ್ ಖಾತೆಗೆ ಸುಮಾರು 324 ಕೋಟಿ ರೂಪಾಯಿ ಬೆಳೆ ಪರಿಹಾರ ಹಣ ಬಿಡುಗಡೆ..?
ಹೌದು ಗೆಳೆಯರೇ ಮುಂಗಾರು ಹಾಗೂ ಅತಿವೃಷ್ಟಿಯಿಂದ ತುಂಬಾ ರೈತರ ಬೆಳೆ ಹಾನಿಗೊಳದಾಗಿದೆ ಹಾಗಾಗಿ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲು ಸುಮಾರು 2000 ಕೋಟಿ ರೂಪಾಯಿ ಮೀಸಲು ಇಟ್ಟಿದೆ. ಇದರಲ್ಲಿ ಇದೀಗ ಕರ್ನಾಟಕದ 31 ಜಿಲ್ಲೆಗಳ ರೈತರ ಖಾತೆಗೆ ಎಸ್ ಡಿ ಆರ್ ಎಫ್ ಅಡಿಯಲ್ಲಿ 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ, ಹಾಗಾಗಿ ರೈತರ ಖಾತೆಗೆ ಬೆಳೆ ಪರಿಹಾರ ಹಣ ಈಗಾಗಲೇ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದೆ
ಹೌದು ಗೆಳೆಯರೇ ಗುಲ್ಬರ್ಗ, ಬೀದರ್, ಗದಗ, ಬೆಳಗಾವಿ ಹಾಗೂ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ರೈತರ ಖಾತೆಗೆ ಹಣ ಜಮಾ ಆಗುವ ಪ್ರಕ್ರಿಯೆ ಆರಂಭವಾಗಿದೆ ಹಾಗೂ ಉಳಿದ ಜಿಲ್ಲೆಯ ರೈತರ ಖಾತೆಗೂ ಕೂಡ ಹಣ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಪ್ರತಿಯೊಬ್ಬರ ರೈತರ ಖಾತೆಗೆ ಹಣ ಜಮಾ ಆಗಲು ಕನಿಷ್ಠ 15 ದಿನ ಅಂದರೆ ನವೆಂಬರ್ 30ರ ಒಳಗಡೆ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ರೈತರಲ್ಲಿ ತಾಳ್ಮೆಯಿಂದ ಕಾಯಬೇಕು
ಬೆಳೆ ಪರಿಹಾರ ಹಣ ಎಷ್ಟು ಸಿಗುತ್ತೆ..?
ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ರೈತರಿಗೆ ಈ ವರ್ಷ ಹೆಚ್ಚುವರಿಯಾಗಿ ರೈತರ ಖಾತೆಗೆ 8500 ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ. ಆದರಿಂದ ರೈತರ ಖಾತೆಗೆ ಎಷ್ಟು ಎಕರೆಗೆ ಎಷ್ಟು ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಕೆಳಗಡೆ ತಿಳಿಸಿದ್ದೇವೆ
- ಒಣಭೂಮಿ ಅಥವಾ ಮಳೆ ಆಶ್ರಿತ ಬೆಳೆಗಳಿಗೆ ಸುಮಾರು ₹17,000 ವರೆಗೆ ಬೆಳೆ ಪರಿಹಾರ ಹಣ ಸಿಗುತ್ತೆ (2 ಹೆಕ್ಟರ್ ಭೂಪ್ರದೇಶದ)
- ನೀರಾವರಿ ಬೆಳೆಗಳಿಗೆ ಸುಮಾರು ₹25,500 ವರೆಗೆ ಬೆಳೆ ಪರಿಹಾರ ಹಣ ಸಿಗುತ್ತೆ (2 ಹೆಕ್ಟರ್ ಭೂಪ್ರದೇಶದ)
- ತೋಟಗಾರಿಕೆ ಮತ್ತು ದೀರ್ಘಕಾಲಿಕ ಬೆಳೆಗಳಿಗೆ ಸುಮಾರು ₹31,000 ರಿಂದ ₹45,000 ವರೆಗೆ ಬೆಳೆ ಪರಿಹಾರ ಹಣ ಸಿಗುತ್ತೆ (2 ಹೆಕ್ಟರ್ ಭೂಪ್ರದೇಶದ)
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು









