ಸಿದ್ದರಾಮಯ್ಯ : ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ : ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ

ನಮಸ್ಕಾರ ಗೆಳೆಯರೇ ಇಂದು ಹನ್ನೊಂದು ನವೆಂಬರ್ 2025 ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರೈತರನ್ನು ಉದ್ದೇಶಿಸಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುವ ಸಂದರ್ಭದಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇದಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಏನು ಮಾತನಾಡಿದ್ದಾರೆ ಎಂಬ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

 

ಬೆಳೆ ಪರಿಹಾರ ಹಣ ಈ ದಿನ ಬಿಡುಗಡೆ..?

ಹೌದು ಗೆಳೆಯರೇ 11 ನವೆಂಬರ್ 2025 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ವರ್ಷ ಅತಿ ಹೆಚ್ಚು ಮಳೆಯಿಂದ ತುಂಬಾ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶ ಆಗಿವೆ ಹಾಗೂ ತುಂಬಾ ರೈತರು ತೋಟಗಾರಿಕೆ ಬೆಳೆಗಳು ಕೂಡ ನಷ್ಟ ಉಂಟಾಗಿದೆ.

ಅಂತಹ ರೈತರಿಗೆ ನಮ್ಮ ಸರಕಾರ ಪರಿಹಾರ ನೀಡಲು ಯಾವಾಗಲೂ ಮುಂದೆ ಇರುತ್ತೆ ಎಂದು ಮಾಹಿತಿ ನೀಡಿದ್ದಾರೆ

WhatsApp Group Join Now
Telegram Group Join Now       
ಸಿದ್ದರಾಮಯ್ಯ
ಸಿದ್ದರಾಮಯ್ಯ

 

ಮುಂದುವರೆದು ಈಗ ಜಯಂತಿ ಸಮೀಕ್ಷೆ ಬಳಿಕ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿರುವಂತ ಅಥವಾ ಬೆಳೆ ನಷ್ಟ ಉಂಟಾದಂತಹ ರೈತರ ಖಾತೆಗೆ ನವೆಂಬರ್ ತಿಂಗಳ ಅಂತ್ಯದ ಒಳಗಡೆ ಪ್ರತಿಯೊಬ್ಬರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು

ಮುಂದುವರೆದು ಕೃಷಿ ಮತ್ತು ತೋಟಗಾರಿಕೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಜಂಟಿ ಸಭೆ ಮಾಡಿ ರೈತರಿಗೆ ನೀರಾವರಿ ನಿರ್ವಹಣೆ ಹಾಗೂ ವೈಜ್ಞಾನಿಕ ಬಿತ್ತನೆ ಬೀಜಗಳ ಬಗ್ಗೆ ಮತ್ತು ಹೆಚ್ಚು ಇಳುವರಿ ನೀಡುವ ಹೊಸ ಸ್ಥಳೀಯ ಬಗ್ಗೆ ರೈತರಿಗೆ ಸೂಕ್ತ ಜ್ಞಾನ ಹಂಚಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಅದೇ ರೀತಿ ಈ ಬಗ್ಗೆ ಜಂಟಿ ಸಭೆ ಕರೆಯಲಾಗುತ್ತದೆ ಇದರಲ್ಲಿ ಮುಸುಕಿನ ಜೋಳ ಹಾಗೂ ಈರುಳ್ಳಿ ಮುಂತಾದ ಬೆಳೆಗಳು ರೈತರು ಬಿತ್ತನೆ ಮಾಡುವುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಹಾಗಾಗಿ ರೈತರಿಗೆ ಬೇಕಾಗುವಂತ ಎಲ್ಲಾ ರಸಗೊಬ್ಬರಗಳು ಹಾಗೂ ಬೀಜ ಮತ್ತು ಇತರೆ ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗಿದೆ ಮತ್ತು ರೈತರಿಗೆ ಯಾವುದೇ ರೀತಿ ಯೂರಿಯಾ ಗೊಬ್ಬರದ ತೊಂದರೆಯಾಗದಂತೆ ಹೆಚ್ಚು ಸಂಗ್ರಹ ಮಾಡಿಕೊಳ್ಳಲಾಗಿದೆ ಹಾಗಾಗಿ ರೈತರು ಇಂಗಾರು ಬೆಳೆಗಳನ್ನು  ನಿಂಚಿಂತೆಯಾಗಿ ಬೆಳೆಯಬಹುದು ಎಂದು ಮಾಹಿತಿ ತಿಳಿಸಿದ್ದಾರೆ

ಮುಂದುವರೆದು ಮುಂದುವರೆದು ಕುರಿಗಾಯಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಕಳ್ಳ ಕಾಕರಿಂದ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮತ್ತು ನಮ್ಮ ಜಿಲ್ಲೆಯಲ್ಲಿ ದಿನೇ ದಿನೇ ಹಾಲನ್ನು ಉತ್ಪಾದನೆ ಹೆಚ್ಚಾಗುತ್ತಿರುವ ಬಗ್ಗೆ ಅಂಕಿ ಅಂಶಗಳನ್ನು ಮುಂದಿಟ್ಟು ಉತ್ಪಾದನೆ ಹೆಚ್ಚಾದಂತೆ ಹಾಗೆ ಮಾರುಕಟ್ಟೆ ವಿಸ್ತರಣೆ ಮಾಡುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಮಾರ್ಗಸೂಚಿ ನೀಡಿದ್ದಾರೆ ಹಾಗೂ ಹಾಲಿನ ಮಾರಾಟ ಹೆಚ್ಚಾಗುವಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ

ಇನ್ನು ಹಲವಾರು ವಿಷಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದ್ದಾರೆ, ಇಲ್ಲಿ ಖುಷಿಪಡುವ ವಿಷಯವೇನೆಂದರೆ ಬೆಳೆ ಪರಿಹಾರ ರೈತರ ಖಾತೆಗೆ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ..

WhatsApp Group Join Now
Telegram Group Join Now       

 

ಬೆಳೆ ಪರಿಹಾರ ಹಣ ಈಗಾಗಲೇ ಬಿಡುಗಡೆ ಆಗಿದೆಯಾ..?

ಹೌದು ಸ್ನೇಹಿತರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ಟೋಬರ್ ತಿಂಗಳಿನಲ್ಲಿ ಸುಮಾರು 2000 ಕೋಟಿ ರೂಪಾಯಿ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ ಅದೇ ರೀತಿ ಇದೀಗ ಅನೇಕ ಜಿಲ್ಲೆಯ ರೈತರ ಖಾತೆಗೆ ಬೆಳೆ ಪರಿಹಾರ ಹಣವು ಕೂಡ ಜಮಾ ಆಗುತ್ತಿದೆ..

ಹೌದು ಗೆಳೆಯರೇ ಈಗಾಗಲೇ ಯಾದಗಿರಿ, ದಾರವಾಡ, ಕಲಬುರ್ಗಿ, ಬೀದರ್ ಹಾಗೂ ವಿಜಯಪುರ ಸೇರಿ ಸುಮಾರು 9 ಜಿಲ್ಲೆಯ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಪ್ರಾರಂಭವಾಗಿದೆ. ಹಾಗೂ ಉಳಿದ ರೈತರ ಖಾತೆಗೆ 30 ನವೆಂಬರ್ 2025 ರ ಒಳಗಡೆ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ

 

ಯಾವ ಜಿಲ್ಲೆಯ ರೈತರ ಖಾತೆಗೆ ಎಷ್ಟು ಬೆಳೆ ಪರಿಹಾರ ಹಣ ಬಿಡುಗಡೆಯಾಗಿದೆ..?

ಧಾರವಾಡ ಜಿಲ್ಲೆ: ಧಾರವಾಡ ಜಿಲ್ಲೆಯ ಸುಮಾರು 65,217 ರೈತರ ಖಾತೆಗೆ ಬರೋಬ್ಬರಿ 63.16 ಕೋಟಿ ರೂಪಾಯಿ ಹಣ ಈಗಾಗಲೇ ಬಿಡುಗಡೆಯಾಗಿದೆ ಹಾಗೂ ಜಲ ರೈತರು ಈಗಾಗಲೇ ಹಣ ಪಡೆದುಕೊಂಡಿದ್ದಾರೆ.

ಯಾದಗಿರಿ: ಯಾದಗಿರಿ ಜಿಲ್ಲೆಯ ಸುಮಾರು 1.8 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಪರಿಹಾರ ಹಣ ಸುಮಾರು 200 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ ಹಾಗೂ ಕೆಲ ರೈತರ ಖಾತೆಗೆ ಜಮಾ ಆಗುತ್ತಿದೆ, ಪ್ರತಿಯೊಬ್ಬ ರೈತರ ಖಾತೆಗೆ ಜಮಾ ಆಗಲು ನವೆಂಬರ್ 30ನೇ ತಾರೀಖಿನವರೆಗೆ ಕಾಲಾವಕಾಶ ನೀಡಲಾಗಿದೆ

ಉಳಿದ ಜಿಲ್ಲೆಗಳಿಗೆ ರೈತರ ಖಾತೆಗೂ ಹಣ ಬಿಡುಗಡೆ: ಹೌದು ಸ್ನೇಹಿತರೆ ಕಲಬುರಗಿ ಜಿಲ್ಲೆಯ ರೈತರಿಗೆ ಸುಮಾರು 667.73 ಕೋಟಿ ಅನುಮೋದನೆ ಮಾಡಲಾಗಿದೆ ಹಾಗೂ ವಿಜಯಪುರ ಮತ್ತು ಬೀದರ್ ಜಿಲ್ಲೆಯ ರೈತರ ಖಾತೆಗೆ ಈಗಾಗಲೇ ಹಣ ಬಿಡುಗಡೆಯ ಪ್ರಕ್ರಿಯೆ ಆರಂಭವಾಗಿದೆ ಒಟ್ಟು ಒಂಬತ್ತು ಜಿಲ್ಲೆಗಳಿಗೆ ಸುಮಾರು 2000 ಕೋಟಿ ರೂಪಾಯಿ ಹಣ ಜಮಾ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ

ವಿಶೇಷ ಸೂಚನೆ: ಪ್ರತಿಯೊಬ್ಬರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗಲು 30 ನವೆಂಬರ್ 2025 ರವರೆಗೆ ಕಾಲಾವಕಾಶ ನೀಡಲಾಗಿದೆ ಹಾಗಾಗಿ ರೈತರು ಹಣ ಬರುವವರೆಗೂ ತಾಳ್ಮೆಯಿಂದ ಕಾಯಬೇಕು ಮತ್ತು ಯಾವುದೇ ರೀತಿ ಸಂದೇಹ ಅಥವಾ ಹಣ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ಜಾಲತಾಣಕ್ಕೆ ಅಥವಾ ನಿಮ್ಮ ಗ್ರಾಮ ಲೆಕ್ಕೀಗಾಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ

ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಭೇಟಿ ನೀಡಬಹುದು

KEA Recruitment: 2882 SDA, FDA ಹಾಗೂ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ.! ಈ ರೀತಿ ಅರ್ಜಿ ಸಲ್ಲಿಸಿ

 

Leave a Comment

?>