Bele Parihara Amount Release: ಬೆಳೆ ಪರಿಹಾರ ಹಣ (Money) ಪಡೆಯಲು ರೈತರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು.! ಅಂದರೆ ಮಾತ್ರ ಪರಿಹಾರ ಹಣ ಸಿಗುತ್ತೆ
ನಮಸ್ಕಾರ ಗೆಳೆಯರೇ, ರೈತರು ಕಡ್ಡಾಯವಾಗಿ ಬೆಳೆ ಪರಿಹಾರ ಹಣ ಪಡೆಯಲು ಕೆಲವೊಂದು ಕೆಲಸ ಮಾಡಬೇಕಾಗುತ್ತದೆ, ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ರೈತರು ಬೆಳೆ ಪರಿಹಾರ ಹಣ ಪಡೆಯಲು ಏನು ಮಾಡಬೇಕು ಹಾಗೂ ಬೆಳೆ ಪರಿಹಾರ ಹಣ ಯಾವಾಗ ಬಿಡುಗಡೆಯಾಗುತ್ತೆ ಮತ್ತು ಇತರ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಆದಷ್ಟು ರೈತರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಬೆಳೆ ಪರಿಹಾರ ಹಣ (Bele Parihara Amount Release) ಯಾವಾಗ ಬಿಡುಗಡೆ..?
ಹೌದು ಸ್ನೇಹಿತರೆ ಈ ವರ್ಷ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಯಾದ ಮಳೆಯಿಂದ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಸಾಕಷ್ಟು ರೈತರು ಬೆಳೆದ ಬೆಳೆ ಹಾನಿ ಉಂಟಾಗಿದೆ ಇದರಿಂದ ರಾಜ್ಯ ಸರ್ಕಾರ ಬೆಳೆ ಹಾನಿ ಉಂಟಾದ ರೈತರಿಗೆ ಪರಿಹಾರ ನೀಡಲು ಸುಮಾರು ₹2,000 ಕೋಟಿ ರೂಪಾಯಿ ಹಣವನ್ನು ಮೀಸಲಾಗಿ ಇಟ್ಟಿದೆ ಇದರ ಜೊತೆಗೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಕ್ಕೆ 370 ಕೋಟಿ ರೂಪಾಯಿ ಬೆಳೆ ಪರಿಹಾರ ಹಣ ನೀಡಲು ಬಿಡುಗಡೆ ಮಾಡಿದೆ.

ಹಾಗಾಗಿ ರೈತರ ಖಾತೆಗೆ ಶೀಘ್ರದಲ್ಲಿ ಅಂದರೆ ನವೆಂಬರ್ 15ನೇ ತಾರೀಖಿನ ಒಳಗಡೆ ಪ್ರತಿಯೊಬ್ಬ ರೈತರ ಖಾತೆಗೆ ಬೆಳೆ ಪರಿಹಾರ ಜಮಾ ಆಗುತ್ತೆ,.! ಹೌದು ಗೆಳೆಯರೇ ಈ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಭರವಸೆ ನೀಡಿದ್ದಾರೆ.
ಇದರ ಜೊತೆಗೆ ಈಶ್ವರ ಖಂಡ್ರೆ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೀದರ್ ರೈತರಿಗೆ ಅಕ್ಟೋಬರ್ 30ನೇ ತಾರೀಖಿನಿಂದ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲು ಪ್ರಾರಂಭ ಮಾಡಿದ್ದೇವೆ. ಹಾಗಾಗಿ ಇನ್ನೂ ರೈತರ ಖಾತೆಗೆ 10 ಅಥವಾ 15 ದಿನಗಳ ಒಳಗಡೆ ಹಣ ಜಮಾ ಆಗಲಿದೆ ಎಂದು ಮಾಹಿತಿ ತಿಳಿಸಿದ್ದಾರೆ
ರೈತರಿಗೆ ಎಷ್ಟು (Bele Parihara Amount Release) ಬೆಳೆ ಪರಿಹಾರ ಹಣ ಸಿಗುತ್ತೆ.?
ಸ್ನೇಹಿತರ ರಾಜ್ಯ ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಹೆಚ್ಚುವರಿಯಾಗಿ 8,700 ವರೆಗೆ ಬೆಳೆ ಪರಿಹಾರ ಹಣ ನೀಡುತ್ತಿದೆ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ರೈತರಿಗೆ ಕೆಳಗಿನ ರೀತಿಯಲ್ಲಿ ಬೆಳೆ ಪರಿಹಾರ ಹಣ ಸಿಗುತ್ತೆ
- ಮಳೆಯಾರ್ಶಿತ ಬೆಳೆಗಳಿಗೆ – ಪ್ರತಿ ಹೆಕ್ಟೇರ್ ಗೆ ₹17,000/- ವರೆಗೆ ಬೆಳೆ ಪರಿಹಾರ ಹಣ ಸಿಗುತ್ತೆ
- ನೀರಾವರಿ ಪ್ರದೇಶದ ಬೆಳೆಗಳಿಗೆ – ₹25,500 ವರೆಗೆ ಪ್ರತಿ ಹೆಕ್ಟೇರ್ ಗೆ ಬೆಳೆ ಪರಿಹಾರ ಹಣ ಸಿಗುತ್ತೆ
- ದೀರ್ಘಕಾಲಿನ ಬೆಳೆಗಳಿಗೆ:l – ಪ್ರತಿ ಹೆಕ್ಟೇರ್ ಗೆ ₹31,000/- ವರೆಗೆ ಬೆಳೆ ಪರಿಹಾರ ಹಣ ಸಿಗುತ್ತೆ
ಬೆಳೆ ಪರಿಹಾರ ಹಣ ಪಡೆಯಲು (Bele Parihara Amount Release) ರೈತರು ಈ ಕೆಲಸ ತಪ್ಪದೇ ಮಾಡಬೇಕು..?
ಬ್ಯಾಂಕ್ ಖಾತೆ ಸರಿಪಡಿಸಿ: ಹೌದು ಗೆಳೆಯರೆ ಬೆಳೆ ಪರಿಹಾರ ಹಣ ಪಡೆಯಲು ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ e-kyc ಪ್ರಕ್ರಿಯ ಪೂರ್ಣಗೊಳಿಸಬೇಕು ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇದರ ಜೊತೆಗೆ ಕಡ್ಡಾಯವಾಗಿ ರೈತರು NPCI ಮ್ಯಾಪಿಂಗ್ ಮಾಡಿಸಬೇಕು ಅಂದರೆ ಮಾತ್ರ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗುತ್ತದೆ
ಜಮೀನು ದಾಖಲಾತಿ ಸರಿಪಡಿಸಿ: ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ರೈತರ ಜಮೀನಿನ ಎಲ್ಲಾ ದಾಖಲಾತಿಗಳು ಸರಿಯಾಗಿರಬೇಕು ಅಂದರೆ ರೈತರ ಜಮೀನು ಪತ್ರದಲ್ಲಿ ಇರುವ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಮತ್ತು ಬ್ಯಾಂಕ್ ಖಾತೆಯ ಹೆಸರು ಒಂದೇ ಆಗಿರಬೇಕು ಅಂದರೆ ಮಾತ್ರ ಬೆಳೆ ಪರಿಹಾರ ಸಿಗುತ್ತೆ
FID ಕ್ರಿಯೇಟ್ ಮಾಡಿಸಿ: ರೈತರು ಕಡ್ಡಾಯವಾಗಿ ತಮ್ಮ ಜಮೀನು ಪತ್ರಕ್ಕೆ ಅಥವಾ ಜಮೀನು ದಾಖಲಾತಿಗೆ FID ಕ್ರಿಯೇಟ್ ಮಾಡಿರಬೇಕು ಅಂದರೆ ಮಾತ್ರ ಬೆಲೆ ಪರಿಹಾರ ಸಿಗುತ್ತೆ
ವಿಶೇಷ ಸೂಚನೆ: ಬೆಳೆ ಪರಿಹಾರ ಹಣದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಊರಿನ ಅಥವಾ ನಿಮ್ಮ ಗ್ರಾಮದ ಗ್ರಾಮ ಲೆಕ್ಕಿಗ ಅಧಿಕಾರಿಯನ್ನು ಭೇಟಿ ನೀಡಿ ಅಥವಾ ಕುಲಕರಣಿ ಅಥವಾ ಕೃಷಿ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮತ್ತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು









