bele Parihara 2025-26: ಬೆಳೆ ಪರಿಹಾರ ಹಣ ಇನ್ನೂ 15 ದಿನಗಳಲ್ಲಿ ಬಿಡುಗಡೆ.! ಬೆಳೆ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡಿ
ನಮಸ್ಕಾರ ಗೆಳೆಯರೇ ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ರೈತರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಗೆಳೆಯರೇ ಇನ್ನೂ 15 ದಿನಗಳ ಒಳಗಡೆ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ ನಾವು ಈ ಒಂದು ಲೇಖನಿಯ ಮೂಲಕ ರೈತರ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರ ಎಷ್ಟು ಜಮಾ ಆಗುತ್ತದೆ ಹಾಗೂ ಬೆಳೆ ಪರಿಹಾರ ಜಮೆ ಆದ ಸ್ಟೇಟಸ್ ಚೆಕ್ ಮಾಡುವ ವಿವರದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಇನ್ನೂ 15 ದಿನಗಳ ಒಳಗಡೆ ಬೆಳೆ ಪರಿಹಾರ ಹಣ ಬಿಡುಗಡೆ (bele Parihara 2025-26).?
ಹೌದು ಗೆಳೆಯರೇ ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ ರೈತರು ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಗೂ ಭಾಗಶಃ ನಾಶ ಆಗಿದೆ ಎಂದು ಹೇಳಬಹುದು ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಇದೀಗ NDRF ಮೂಲಕ ರೈತರು ಬೆಳೆದ ಬೆಳೆ ಹಾನಿ ಉಂಟಾಗಿದ್ದಕ್ಕೆ ಪರಿಹಾರ ಹಣ ಬಿಡುಗಡೆ ಮಾಡಲು ಸರಕಾರಗಳು ತೀರ್ಮಾನ ಮಾಡಿವೆ

ಈ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ರೈತರ ಖಾತೆಗೆ ಹಣ ಬಿಡುಗಡೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಹಾಗೂ ಧಾರವಾಡ, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಹಾಗೂ ಇತರೆ ಒಂಬತ್ತು ಜಿಲ್ಲೆಗಳ ರೈತರ ಖಾತೆಗೆ ಸುಮಾರು 391 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಇದರ ಜೊತೆಗೆ ಕರ್ನಾಟಕದ ಎಲ್ಲಾ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸುಮಾರು ರೂ.2000 ಕೋಟಿ ರೂಪಾಯಿ ಹಣ ಮೀಸಲು ಇಟ್ಟಿದೆ ಎಂದು ಮಾಹಿತಿ ತಿಳಿಸಿದ್ದಾರೆ, ಇದರ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ರೈತರ ಖಾತೆಗೆ 8,500 ಪರಿಹಾರ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ರೈತರ ಖಾತೆಗೆ ಇನ್ನೂ 15 ದಿನಗಳ ಒಳಗಡೆ ಅಂದರೆ ನವೆಂಬರ್ ತಿಂಗಳ ಅಂತ್ಯದ ಒಳಗಡೆ ಪ್ರತಿಯೊಬ್ಬ ರೈತರ ಖಾತೆಗೆ ಪ್ರಥಮ ಹಂತದ ಬೆಳೆ ಪರಿಹಾರ ಹಣ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು
ರೈತರ ಖಾತೆಗೆ ಎಷ್ಟು ಬೆಳೆ ಪರಿಹಾರ ಹಣ ಜಮಾ ಆಗುತ್ತೆ (bele Parihara 2025-26).?
ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರೈತರ ಬೆಳೆ ಹಾನಿಗೆ ಪರಿಹಾರ ನೀಡುತ್ತದೆ, ಹಾಗಾಗಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿಯಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಅದರ ಅನ್ವಯ ಗರಿಷ್ಠ ಬೆಳೆ ಪರಿಹಾರ ಹಣ ಎಷ್ಟು ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ (ಗಮನಿಸಿ: ಗರಿಷ್ಠ 2 ಹೆಕ್ಟೇರ್ ಭೂ ಪ್ರದೇಶದ ಒಳಗಡೆ ಜಮೀನು ಹೊಂದಿದ ರೈತರಿಗೆ ಮಾತ್ರ ಪರಿಹಾರ ಸಿಗುತ್ತೆ)
ಒಣ ಭೂಮಿ ಅಥವಾ ಮಳೆ ಆಶ್ರಿತ ಬೆಳೆಗಳಿಗೆ: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಜೊತೆಗೂಡಿ ಬರೋಬ್ಬರಿ 2 ಹೆಕ್ಟೇರ್ ಭೂ ಪ್ರದೇಶದ ಒಳಗಿನ ಬೆಳೆ ಹಾನಿಗೆ ಸುಮಾರು 17000 ವರೆಗೆ ರೈತರ ಖಾತೆಗೆ ಪರಿಹಾರ ಹಣ ನೀಡಲಾಗುತ್ತದೆ. ಉದಾಹರಣೆ: ಜೋಳ, ತೊಗರಿ, ರಾಗಿ ಮತ್ತು ಹತ್ತಿ ಮುಂತಾದ ಬೆಳೆಗಳ ಹಾನಿಗೆ ಪರಿಹಾರ ಸಿಗುತ್ತದೆ
ನೀರಾವರಿ ಬೆಳೆಗಳು: ರೈತರು ನೀರಾವರಿ ಭೂ ಪ್ರದೇಶ ಹೊಂದಿದ್ದು ಅದರಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿದ್ದರೆ ಅಂತಹ ಸಂದರ್ಭದಲ್ಲಿ ರೈತರಿಗೆ ಸುಮಾರು ₹25,500 ರೂಪಾಯಿವರೆಗೆ ಪರಿಹಾರ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ
ತೋಟಗಾರಿಕೆ ಅಥವಾ ದೀರ್ಘಕಾಲಿಕ ಬೆಳೆಗಳು: ಉದಾಹರಣೆ: ತೆಂಗು, ಅಡಿಕೆ, ಕಾಳುಮೆಣಸು, ದ್ರಾಕ್ಷಿ ಮುಂತಾದ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದರೆ ಅಂತಹ ರೈತರಿಗೆ ₹31,500 ವರೆಗೆ ಪರಿಹಾರ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ
ಬೆಳೆ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ (bele Parihara 2025-26).?
ಸ್ನೇಹಿತರೆ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಯಾವ ರೀತಿ ಬೆಳೆ ಪರಿಹಾರದ ಹಣದ ಸ್ಟೇಟಸ್ ಚೆಕ್ ಮಾಡಬೇಕು ಎಂಬ ವಿಧಾನವನ್ನು ತಿಳಿದುಕೊಳ್ಳೋಣ
- ಬೆಳೆ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡಲು ಮೊದಲು ರೈತರು “https://parihara.karnataka.gov.in/” ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ನಂತರ ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಿ ನಂತರ ತಾಲೂಕು ಹಾಗೂ ಹೋಬಳಿ ಮತ್ತು ಗ್ರಾಮ ಆಯ್ಕೆ ಮಾಡಿಕೊಳ್ಳಿ
- ನಂತರ ಅಲ್ಲಿ ನೀವು ಪ್ರಸ್ತುತ ವರ್ಷ ಅಂದರೆ 2025-2026 ವರ್ಷ ಆಯ್ಕೆ ಮಾಡಿಕೊಳ್ಳಿ ನಂತರ “ಖರೀಫ್” ಆಯ್ಕೆ ಮಾಡಿಕೊಳ್ಳಿ ನಂತರ ಮಳೆ ಹಾನಿ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ಗೆಟ್ ರಿಪೋರ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ನಿಮಗೆ ತಾಲೂಕು ವಾರು ಪೇಮೆಂಟ್ ರಿಪೋರ್ಟ್ ಸಿಗುತ್ತದೆ ಇದರಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲ ಎಂಬ ಮಾಹಿತಿಯನ್ನು ತುಂಬ ಸುಲಭವಾಗಿ ತಿಳಿದುಕೊಳ್ಳಬಹುದು
ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದರೆ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಇದರಿಂದ ನಿಮಗೆ ನಿಖರ ಹಾಗೂ ಖಚಿತ ಮಾಹಿತಿ ಸಿಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು
PM ಕಿಸಾನ್ 21ನೇ ಕಂತು 2025: ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ









