bele parihara 2025-26: ಬೆಳೆ ಪರಿಹಾರ ಹಣ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡಿ
ನಮಸ್ಕಾರ ಗೆಳೆಯರೇ ಈ ವರ್ಷ ಅಂದರೆ ಪ್ರಸ್ತುತ 2025 ಮತ್ತು 26 ನೇ ಸಾಲಿನಲ್ಲಿ ನಮ್ಮ ಕರ್ನಾಟಕದ ವಿವಿಧ ಭಾಗಗಳಲ್ಲಿ ಅತಿಯಾದ ಮಳೆಯಿಂದ ರೈತರು ಬೆಳೆದ ಬೆಳೆಗಳು ನಷ್ಟ ಉಂಟಾಗಿವೆ. ಹಾಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ NDRF ಮೂಲಕ ರೈತರಿಗೆ ಇದೀಗ ಬೆಳೆ ಪರಿಹಾರ ಹಣ ಬಿಡುಗಡೆ,
ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಯಾವ ಭಾಗದ ರೈತರಿಗೆ ಇದೀಗ ಬೆಳೆ ಪರಿಹಾರ ಹಣ ಬಿಡುಗಡೆಯಾಗಿದೆ ಹಾಗೂ ಕರ್ನಾಟಕ ರೈತರು ಬೆಳೆ ಪರಿಹಾರ ಹಣ ಪಡೆಯಲು ಏನು ಮಾಡಬೇಕು ಎಂಬ ಸಂಕ್ಷಿಪ್ತ ಮಾಹಿತಿಯನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನೆಯನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ರೈತರಿಗೆ ಶೇರ್ ಮಾಡಿ
ಬೆಳೆ ಪರಿಹಾರ ಹಣ ಬಿಡುಗಡೆ (bele parihara 2025-26).?
ಹೌದು ಸ್ನೇಹಿತರೆ ಪ್ರಸ್ತುತ ನಮ್ಮ ಕರ್ನಾಟಕ ರಾಜ್ಯದಲ್ಲಿ 2025 ಮತ್ತು 26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಸಾಕಷ್ಟು ರೈತರು ಬೆಳೆದ ಬೆಳೆಗಳು ಹಾನಿ ಒಳಗಾಗಿವೆ. ಹಾಗಾಗಿ ರೈತರಿಗೆ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ ಇದೀಗ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗುತ್ತಿದೆ.

ಹೌದು ಸ್ನೇಹಿತರೆ ಬೀದರ್ ಜಿಲ್ಲೆಯ ರೈತರಿಗೆ ಇದೀಗ ಬೆಳೆ ಪರಿಹಾರ ಹಣ ಅಕ್ಟೋಬರ್ 30 ನೇ ತಾರೀಖಿನಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಗದಗ ಜಿಲ್ಲೆಯಲ್ಲಿಯೂ ಕೂಡ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ.
ಹೌದು ಸ್ನೇಹಿತರೆ ಗದಗ್ ಜಿಲ್ಲೆಯಲ್ಲಿ ಬೆಳೆ ಹಾನಿ ಆದಂತಹ ರೈತರ ಖಾತೆಗೆ ಸುಮಾರು 91 ಕೋಟಿ ರೂಪಾಯಿ ಪರಿಹಾರ ಹಣವನ್ನು ಗದಗ್ ಜಿಲ್ಲೆಯ ಉಸ್ತುವಾರಿ ಸಚಿವ ಕೆ ಹೆಚ್ ಪಾಟೀಲ್ ಅವರು DBT ಮೂಲಕ ರೈತರ ಖಾತೆಗೆ ಬಿಡುಗಡೆ ಮಾಡುವುದರ ಮೂಲಕ ಇಂದು ಚಾಲನೆ ನೀಡಿದ್ದಾರೆ. ಹೌದು ಸ್ನೇಹಿತರೆ ಇಂದಿನಿಂದ ಗದಗ ಹಾಗೂ ಬೀದರ್ ಜಿಲ್ಲೆಯಲ್ಲಿರುವ ಎಲ್ಲಾ ರೈತರ ಖಾತೆಗೆ DBT ಮೂಲಕ ಹಣ ಬಿಡುಗಡೆ ಪ್ರಾರಂಭವಾಗಿದ್ದು ಇನ್ನೂ 15 ದಿನಗಳ ಒಳಗಡೆ ರೈತರ ಖಾತೆಗೆ ಹಣ ಜಮಾ ಆಗಲಿದೆ.
ಉಳಿದ ರೈತರಿಗೆ ಬೆಳೆ ಪರಿಹಾರ ಹಣ ಯಾವಾಗ ಆಗುತ್ತೆ (bele parihara 2025-26)..?
ಸ್ನೇಹಿತರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ತಿಳಿಸಿರುವ ಪ್ರಕಾರ ರೈತರ ಖಾತೆಗೆ ಈಗಾಗಲೇ ಅಂದರೆ ಅಕ್ಟೋಬರ್ 30ನೇ ತಾರೀಖಿನಿಂದ ಹಣ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದೆ ಮತ್ತು ರಾಜ್ಯದ ರೈತರ ಖಾತೆಗೆ ಇನ್ನು 15 ದಿನಗಳ ಒಳಗಡೆ ಅಂದರೆ ನವೆಂಬರ್ 15ನೇ ತಾರೀಖಿನ ಒಳಗಡೆ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾಗಿ ರೈತರು ಹಣ ಬರುವವರೆಗೂ ಕಾಯಬೇಕು ಹಾಗೂ ಹಣ ಪಡೆಯಲು ರೈತರು ಕೆಳಗಡೆ ನೀಡಿದ ಎಲ್ಲಾ ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ
ಬೆಳೆ ಪರಿಹಾರ ಹಣ ಪಡೆಯಲು ರೈತರು ಏನು ಮಾಡಬೇಕು (bele parihara 2025-26).?
ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ಈ ಕೆಳಗಡೆ ನೀಡಿದ ಎಲ್ಲಾ ಮಾರ್ಗಸೂಚಿ ಅಥವಾ ನಿಯಮಗಳನ್ನು ಪಾಲಿಸಬೇಕು..
ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ: ರೈತರು ಬೆಳೆ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇರಬೇಕು ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ e-kyc ಪೂರ್ಣಗೊಳಿಸಬೇಕು ಹಾಗೂ ಆಧಾರ್ ಕಾರ್ಡ್ ಲಿಂಕ್ ಮತ್ತು NPCI (ಆಧಾರ್ ಕಾರ್ಡ್ ಮೂಲಕ ಹಣ ಪಾವತಿ ಆಗುವ ವಿಧಾನ) ಮ್ಯಾಪಿಂಗ್ ಮಾಡಿಸಿರಬೇಕು
ಜಮೀನು ದಾಖಲಾತಿಗಳು ಸರಿಯಾಗಿರಬೇಕು:- ರೈತರು ಬೆಳೆ ಹಾನಿ ಪರಿಹಾರ ಹಣ ಪಡೆಯಲು ಕಡ್ಡಾಯವಾಗಿ ರೈತರು ತಮ್ಮ ಜಮೀನು ದಾಖಲಾತಿಗಳನ್ನು ಸರಿಪಡಿಸಬೇಕು ಅಂದರೆ ಜಮೀನಿಗೆ ಸಂಬಂಧಿಸಿದಂತೆ ಜಮೀನು ದಾಖಲಾತಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಜಮೀನಿನ ಎಲ್ಲಾ ದಾಖಲಾತಿಗಳಲ್ಲಿ ಬೆಳೆ ಪರಿಹಾರ ಹಣ ಪಡೆಯುವ ರೈತರ ಹೆಸರು ಒಂದೇ ಆಗಿರಬೇಕು
FID ಕ್ರಿಯೇಟ್ ಮಾಡಿಸಿ: ರೈತರ ತಮ್ಮ ಜಮೀನು ಪತ್ರಗಳಿಗೆ ಕಡ್ಡಾಯವಾಗಿ FID ಕ್ರಿಯೇಟ್ ಮಾಡಿಸಿರಬೇಕು ಹಾಗೂ ಈಕೆ ವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕು ಅಂದರೆ ಮಾತ್ರ ಬೆಳೆ ಪರಿಹಾರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗುತ್ತೆ
ವಿಶೇಷ ಸೂಚನೆ: ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ, ತಕ್ಷಣ ನೀವು ನಿಮ್ಮ ಹತ್ತಿರದ ಗ್ರಾಮ ಲೆಕ್ಕೀಗ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ಇನ್ನಷ್ಟು ಅಧಿಕೃತ ಮಾಹಿತಿಗಾಗಿ ಬೆಳೆ ಪರಿಹಾರ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಬೆಳೆ ಪರಿಹಾರ ಹಣ ಪಡೆಯಲು ಬಯಸುವಂತಹ ರೈತರಿಗೆ ಶೇರ್ ಮಾಡಿ
ಮತ್ತು ಇತರ ಮಾಹಿತಿಗಳಿಗಾಗಿ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು









