Yuva Nidhi Scheme 2025 – ಯುವನಿಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ.! ಹೊಸ ನಿಯಮ ಬಿಡುಗಡೆ, ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಜನರಿಗೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ ಆ ಪ್ರಮುಖ ಗ್ಯಾರೆಂಟಿಗಳಲ್ಲಿ ಯುವನಿಧಿ ಯೋಜನೆಯು ಕೂಡ ಒಂದಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಈಗ ಯುವನಿಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ಯಾವ ಬದಲಾವಣೆ ಮಾಡುತ್ತಿದೆ ಹಾಗೂ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಏನಿದು ಯುವನಿಧಿ ಯೋಜನೆ (Yuva Nidhi Scheme 2025).?
ನಮ್ಮ ಕರ್ನಾಟಕದಲ್ಲಿ 2023 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಗ್ಯಾರೆಂಟಿಗಳ ಪೈಕಿ ಯುವನಿಧಿ ಯೋಜನೆಯು ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ,

ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಯುವಕರಿಗೆ ಹಾಗೂ ಮಹಿಳೆಯರಿಗೆ ಈ ಒಂದು ಯೋಜನೆಯ ಮೂಲಕ ಪದವಿದಾರರಿಗೆ ಪ್ರತಿ ತಿಂಗಳು 3000 ಹಣ ಹಾಗೂ ಡಿಪ್ಲೋಮೋ, ಐಟಿಐ, ಪಾಸಾದವರಿಗೆ ಪ್ರತಿ ತಿಂಗಳು 1500 ರೂಪಾಯಿ ಹಣ ನೀಡುವ ಯೋಜನೆಯಾಗಿದೆ. ರಾಜ್ಯ ಸರ್ಕಾರ ಈ ಒಂದು ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
ಯುವನಿಧಿ ಯೋಜನೆ ಫಲಾನುಭವಿಗಳಿಗೆ ಸ್ವಯಂ ಘೋಷಣೆ (Yuva Nidhi Scheme 2025).?
ಹೌದು ಗೆಳೆಯರೇ ರಾಜ್ಯ ಸರ್ಕಾರ ಈ ಒಂದು ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಪಡೆಯಲು ಕಡ್ಡಾಯವಾಗಿ ತ್ರೈಮಾಸಿಕ ಅಥವಾ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಅಧಿಕೃತ ಜಾಲತಾಣದಲ್ಲಿ ಅಥವಾ ಸೇವಾ ಸಿಂಧು ಜಾಲತಾಣದ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ.
ಆದರೆ ರಾಜ್ಯ ಸರ್ಕಾರ ಇದೀಗ ಯುವ ನಿಧಿ ಯೋಜನೆ ಫಲಾನುಭವಿಗಳಿಗೆ ಪ್ರತಿ ತಿಂಗಳು ಸ್ವಯಂ ಘೋಷಣೆ ಪ್ರಮಾಣ ಪತ್ರ ಅಪ್ಲೋಡ್ ಮಾಡಲು ಅಥವಾ ದೃಢೀಕರಿಸಬೇಕು ಎಂದು ಆದೇಶ ನೀಡಿದೆ
ಇದರ ಜೊತೆಗೆ ಇವನಿಗೆ ಯೋಜನೆಯಡಿ ಸತತವಾಗಿ ಕಳೆದ ಆರು ತಿಂಗಳಿಂದ ಹಣ ಪಡೆಯುತ್ತಿರುವ ಫಲಾನುಭವಿಗಳು ತರಬೇತಿ ಪಡೆಯಲು www.kaushalkar.com ಜಾಲತಾಣ ಅಥವಾ ಆನ್ಲೈನ್ ಪೋರ್ಟಲ್ ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ ಹಾಗೂ ನೋಂದಾಯಿಸಿಕೊಂಡಂತ ಫಲಾನುಭವಿಗಳಿಗೆ ಯಾವುದೇ ರೀತಿ ಯುವನಿಧಿ ಯೋಜನೆಯ ಮೂಲಕ ನೀಡಲಾಗುತ್ತಿರುವ ಹಣ ನಿಲ್ಲಿಸುವುದಿಲ್ಲವೆಂದು ಜಿಲ್ಲಾ ಉದ್ಯಮ ವಿನಿಮಯ ಕೇಂದ್ರ ಮಾಹಿತಿ ತಿಳಿಸಿದೆ
ಯುವನಿಧಿ ಯೋಜನೆಯ ಫಲಾನುಭವಿಗಳು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ..!
ಹೌದು ಗೆಳೆಯರೇ ನೀವು ಯುವ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದರೆ ಕಡ್ಡಾಯವಾಗಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು, ಹೌದು ಸ್ನೇಹಿತರೆ ಕಳೆದ ಹತ್ತು ವರ್ಷಗಳಿಂದ ನೀವು ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿ ಅಪ್ಡೇಟ್ ಮಾಡಿಸಿಲ್ಲವೆಂದರೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಅಂದರೆ ಮಾತ್ರ ನಿಮಗೆ ಇನ್ನು ಮುಂದೆ ಯೋಜನೆಯ ಹಣ ಜಮಾ ಆಗುತ್ತದೆ.
ಇದರ ಜೊತೆಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ekyc ಪೂರ್ಣಗೊಳಿಸಿ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಮತ್ತು ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಮಾಹಿತಿ ತಿಳಿಸಲಾಗಿದೆ
ಯುವನಿಧಿ ಯೋಜನೆ ಫಲಾನುಭವಿಗಳಿಗೆ ತರಬೇತಿ ಶಿಬಿರ ಆಯೋಜನೆ (Yuva Nidhi Scheme 2025).?
ಹೌದು ಗೆಳೆಯರೆ ಇನ್ನು ಮುಂದೆ ಯುವನಿಧಿ ಯೋಜನೆಯ ಮೂಲಕ ಕಳೆದ ಆರು ತಿಂಗಳಿಂದ ಹಣ ಪಡೆಯುತ್ತಿರುವ ಫಲಾನುಭವಿಗಳಿಗೆ ಉದ್ಯೋಗ ತರಬೇತಿ ಹಾಗೂ ಸ್ವಯಂ ಉದ್ಯೋಗ ಮಾಡುವ ತರಬೇತಿ ಮತ್ತು ಇತರೆ ಉದ್ಯೋಗಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ತರಬೇತಿ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ, ಈ ಮೂಲಕ ರಾಜ್ಯದ ನಿರುದ್ಯೋಗಿ ಉದ್ಯೋಗಿಗಳಿಗೆ ಉದ್ಯೋಗಕ್ಕೆ ಬೇಕಾದ ಸ್ಕಿಲ್ಸ್ ಕಲಿಸಲು ಮುಂದಾಗಿದೆ ಎಂದು ಹೇಳಬಹುದು
ಹೊಸದಾಗಿ ಯುವನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
ಹೊಸದಾಗಿ ಯುವ ನಿಧಿ ಯೋಜನೆಗೆ 2024 ಮತ್ತು 25 ನೇ ಸಾಲಿನಲ್ಲಿ ಪದವಿ ಪಾಸಾದಂತ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮೋ ಪಾಸಾದಂತ ವಿದ್ಯಾರ್ಥಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು, ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ನಿರುದ್ಯೋಗಿ ಆಗಿರಬೇಕು ಹಾಗೂ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರಬಾರದು ಅಂತವರು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಇದರ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಹೆಸರಿನಲ್ಲಿ ಯಾವುದೇ ರೀತಿ ಉದ್ಯೋಗ ಹೊಂದಿರಬಾರದು ಹಾಗೂ esi & pf ಸೌಲಭ್ಯ ಹೊಂದಿರಬಾರದು ಅಂತವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕರ್ನಾಟಕ ಸೇವಾ ಸಿಂಧು ಪೋರ್ಟಲ್ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ
ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
BPL Card Holders: ಬಿಪಿಎಲ್ ಕಾರ್ಡ್ ಹೊಂದಿದವರು ಈ ಒಂದು ತಪ್ಪು ಮಾಡಿದರೆ ಬೀಳಲಿದೆ 4 ಲಕ್ಷದವರೆಗೆ ದಂಡ ಬೀಳುತ್ತೆ









