PM Kisan Yojana: ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.! ತಪ್ಪದೆ ಮಾಹಿತಿ ನೋಡಿ
ನಮಸ್ಕಾರ ಗೆಳೆಯರೇ ತುಂಬಾ ರೈತರು ಇದೀಗ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ. ಹೌದು ಗೆಳೆಯರೇ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಹೊಸ ಮಾಹಿತಿ ಬಂದಿದೆ ಹಾಗಾಗಿ ನಿಮಗೆ ರೂ.2000 ಹಣ ಬೇಕಾದರೆ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಕೆಲವೊಂದು ರೂಲ್ಸ್ ಪಾಲಿಸಬೇಕು.
ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಹಣ ಬಿಡುಗಡೆ ಹಾಗೂ ಪಿಎಂ ಕಿಸಾನ್ ಯೋಜನೆ ಹಣ ಪಡೆಯಲು ಇರುವ ರೂಲ್ಸ್ ಗಳು ಯಾವುವು ಎಂಬ ಮಾಹಿತಿ ತಿಳಿದುಕೊಳ್ಳೋಣ
ಪಿಎಂ ಕಿಸಾನ್ ಯೋಜನೆ (PM Kisan Yojana).?
ಹೌದು ಗೆಳೆಯರೆ ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಹಾಗೂ ರೈತರಿಗೆ ಬಿತ್ತನೆ ಸಂದರ್ಭದಲ್ಲಿ ಮತ್ತು ರಸಗೊಬ್ಬರ ಚೆಲುವ ಸಂದರ್ಭದಲ್ಲಿ ಮತ್ತು ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ರೈತರಿಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ 2019 ರಲ್ಲಿ ಪ್ರಧಾನ ಮಂತ್ರಿ ಸನ್ಮಾನ್ ಕಿಸಾನ್ ನಿಧಿ ಯೋಜನೆ ಜಾರಿಗೆ ತರಲಾಯಿತು.

ಈ ಒಂದು ಯೋಜನೆಯ ಮೂಲಕ ರೈತರಿಗೆ ಪ್ರತಿ ಕಂತಿಗೆ ರೂ.2000 ಹಣ ವರ್ಷಕ್ಕೆ ಮೂರು ಬಾರಿ ನೀಡಲಾಗುತ್ತದೆ ಅಂದರೆ, ಒಂದು ವರ್ಷಕ್ಕೆ ರೈತರಿಗೆ 6000 ಹಣ ಈ ಒಂದು ಯೋಜನೆಯ ಮೂಲಕ ನೇರವಾಗಿ ರೈತರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿವರೆಗೂ ರೈತರು ಈ ಒಂದು ಯೋಜನೆಯ ಮೂಲಕ ಸುಮಾರು 20 ಕಂತು ಅಂದರೆ 40,000 ಹಣ ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದಾರೆ ಹಾಗಾಗಿ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ
ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಯಾವಾಗ ಬಿಡುಗಡೆ (PM Kisan Yojana).?
ಹೌದು ಸ್ನೇಹಿತರೆ ಈಗಾಗಲೇ ಪಂಜಾಬ್ ಹಾಗೂ ಹರಿಯಾಣ ಮತ್ತು ಹಿಮಾಚಲ ಪ್ರದೇಶ ಮತ್ತು ಜಮ್ಮು ಹಾಗೂ ಕಾಶ್ಮೀರ ರಾಜ್ಯದ ರೈತರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಹಾಗಾಗಿ ನಮ್ಮ ಕರ್ನಾಟಕದ ರಾಜ್ಯದ ರೈತರು ಹಾಗೂ ಇತರೆ ರಾಜ್ಯದ ರೈತರು 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ.
ಕೇಂದ್ರ ಸರಕಾರ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಅಧಿಕೃತ ಮಾಹಿತಿ ನೀಡಲ ಆದರೆ ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿರುವಂತ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರ ಖಾತೆಗೆ ಶೀಘ್ರದಲ್ಲಿ 2000 ಹಣ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ಕೊಂಡಿದ್ದಾರೆ.
ಹೌದು ಗೆಳೆಯರೇ, ನವೆಂಬರ್ ತಿಂಗಳಿನಲ್ಲಿ ಬಿಹಾರ ಚುನಾವಣೆ ಇರುವುದರಿಂದ ನೀತಿ ಸಹಿತ ಜಾರಿಯಲ್ಲಿದೆ, ಆದ್ದರಿಂದ ಚುನಾವಣೆಯ ಉದ್ದೇಶದಿಂದ ಅಥವಾ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವಂಬರ್ ತಿಂಗಳನಲ್ಲಿ ಪಿಎಂ ಕಿಸಾನ್ ಯೋಜನೆಯ ಒಂದು ಕಂತಿನ ಹಣ ಬಿಡುಗಡೆ ಮಾಡಲಾಗುತ್ತಿದೆ ಅದೇ ರೀತಿ ಈ ವರ್ಷವೂ ಕೂಡ ನವೆಂಬರ್ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ರೈತರ ಖಾತೆಗೆ ರೂ.2000 ಹಣ ಜಮಾ ಮಾಡಲಾಗುತ್ತದೆ ಎಂದು ಕೆಲ ಮೂಲಗಳ ಮಾಹಿತಿ ಪ್ರಕಾರ ತಿಳಿದು ಬಂದಿದೆ
ಹಾಗಾಗಿ ಇದು ರೈತರಿಗೆ ಖುಷಿ ಕೊಡುವ ವಿಷಯವನ್ನು ಹೇಳಬಹುದು, ಇದೀಗ ರೈತರು ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಪಡೆಯಲು ಯಾವೆಲ್ಲ ಕೆಲಸ ಅಥವಾ ರೂಲ್ಸ್ ಪಾಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಪಿಎಂ ಕಿಸಾನ್ 21ನೇ ಕಂತಿನ ಹಣ ಪಡೆಯಲು ರೈತರು ಈ ರೂಲ್ಸ್ ಪಾಲಿಸಬೇಕು..?
ರೈತರು ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಪಿಎಂ ಕಿಸಾನ್ ಯೋಜನೆಯ ಮೂಲಕ 20ನೇ ಕಂತಿನ ಹಣ ಜಮಾ ಆಗಿದೆ ಎಂದರೆ ನೀವು ಯಾವುದೇ ಕೆಲಸ ಮಾಡುವ ಅವಶ್ಯಕತೆ ಇಲ್ಲ, ಒಂದು ವೇಳೆ ನಿಮಗೆ 19ನೇ ಕಂತಿನ ಹಾಗೂ 20ನೇ ಕಂತಿನ ಮತ್ತು ಇತರೆ ಕಂತಿನ ಹಣ ಬಾಕಿ ಇದ್ದರೆ ಕಡ್ಡಾಯವಾಗಿ ನೀವು ಕೆಳಗಡೆ ನೀಡಿದ ಎಲ್ಲಾ ನಿಯಮಗಳು ಅಥವಾ ರೂಲ್ಸ್ ಪಾಲಿಸಬೇಕು ಅಂದರೆ ಮಾತ್ರ ಹಣ ಬರುತ್ತೆ
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು: ಹೌದು ಗೆಳೆಯರೇ ಪಿಎಂ ಕಿಸಾನ್ ಯೋಜನೆಯ ಯಾವುದೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಅಂದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು ಇದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ e-kyc ಮಾಡಿಸಬೇಕು ಮತ್ತು ಕಡ್ಡಾಯವಾಗಿ (NPCI) ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಬೇಕು
ರೈತರ ಜಮೀನು ದಾಖಲಾತಿ: ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರ ಜಮೀನು ದಾಖಲಾತಿಗಳು ಸರಿಯಾಗಿರಬೇಕು ಅಂದರೆ ರೈತರ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಆಧಾರ್ ಕಾರ್ಡ್ ನಲ್ಲಿ ರೈತರ ಹೆಸರು ಹಾಗೂ ಜಮೀನಿನ ದಾಖಲಾತಿಯಲ್ಲಿ ರೈತರ ಹೆಸರು ಒಂದೇ ರೀತಿ ಇರಬೇಕು
FID ಕ್ರಿಯೇಟ್ ಮಾಡಿಸಿ: ರೈತರು ಕಡ್ಡಾಯವಾಗಿ ತಮ್ಮ ಜಮೀನು ದಾಖಲಾತಿಗೆ FID ಕ್ರಿಯೇಟ್ ಮಾಡಿಸಿರಬೇಕು ಅಂದರೆ ಮಾತ್ರ ಈ ಯೋಜನೆಯ 21ನೇ ಕಂತಿನ ಹಣ ಹಾಗೂ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ
ಪಿಎಂ ಕಿಸಾನ್ ಅರ್ಜಿ E-kyc: ಹೌದು ಗೆಳೆಯರೆ ಪಿಎಂ ಕಿಸಾನ್ ಯೋಜನೆ ಅರ್ಜಿಯ ಈ ಕೆ ವೈ ಸಿ ಪ್ರಕ್ರಿಯೆ ರೈತರು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು, ಒಂದು ವೇಳೆ ನಿಮ್ಮ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ನಿಮ್ಮ ಗ್ರಾಮದ ಕುಲಕರಣಿ ಅಥವಾ ಗ್ರಾಮ ಲೆಕ್ಕೀಗ ಅಧಿಕಾರಿಯನ್ನು ಭೇಟಿ ಮಾಡಿ
ಸ್ನೇಹಿತರೆ ಪಿ ಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಇತರೆ ನಿಖರ ಮಾಹಿತಿಗಾಗಿ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಒಂದು ವೇಳೆ ನಿಮಗೆ 5 ಅಥವಾ 6 ಕಂತಿನ ಹಣ ಬಾಕಿ ಇದ್ದರೆ ನೀವು ಕೂಡಲೇ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಲೆಕ್ಕಿಗ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು
ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಭೇಟಿ ನೀಡಬಹುದು
ದ್ವಿತೀಯ ಪಿಯುಸಿ’ ಪಾಸ್ ಆಗ್ಬೇಕಂದ್ರೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ









