ಪಡಿತರ ಚೀಟಿ : ಹೊಸ ರೇಷನ್ ಕಾರ್ಡ್ ಅರ್ಜಿ ಈ ದಿನದಿಂದ ಪ್ರಾರಂಭ.! ಪಡಿತರ ಚೀಟಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವಾಗ
ನಮಸ್ಕಾರ ಗೆಳೆಯರೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಬಯಸುವಂಥ ಫಲಾನುಭವಿಗಳಿಗೆ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.! ಹೌದು ಸ್ನೇಹಿತರೆ ಹೊಸ ಪಡಿತರ ಚೀಟಿ ಅರ್ಜಿ ಅಥವಾ ರೇಷನ್ ಕಾರ್ಡ್ ಅರ್ಜಿ ಪ್ರಾರಂಭದ ಬಗ್ಗೆ ಹೊಸ ಮಾಹಿತಿ ನೀಡಲಾಗಿದ್ದು ಈ ಒಂದು ಲೇಖನ ಮೂಲಕ ಹೊಸ ಪಡಿತರ ಚೀಟಿ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವಾಗ ಇದೆ ಎಂಬ ಮಾಹಿತಿ ತಿಳಿದುಕೊಳ್ಳೋಣ
ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿ ಈ ದಿನ ಪ್ರಾರಂಭ..?
ಹೌದು ಸ್ನೇಹಿತರೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮಾಡಲು ಬಯಸುವಂತಹ ಜನರಿಗೆ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದಂತ ಕೆಎಚ್ ಮುನಿಯಪ್ಪನವರು ನಿನ್ನೆ ಅಂದರೆ ಶುಕ್ರವಾರ ಹೊಸ ಆಶ್ವಾಸನೆ ಜನರಿಗೆ ನೀಡಿದ್ದಾರೆ. ಅವರು ಉಡುಪಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಯ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ

ಕೆಎಚ್ ಮುನಿಯಪ್ಪನವರು ಮಾಹಿತಿ ನೀಡಿರುವ ಪ್ರಕಾರ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಇತ್ತೀಚಿಗೆ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 7.70 ಲಕ್ಷ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಗಳು ಅನರ್ಹ ಎಂದು ಗುರುತಿಸಲಾಗಿದೆ ಹಾಗಾಗಿ ಅಂತ ಪಡಿತರ ಚೀಟಿಗಳನ್ನು ರದ್ದುಪಡಿಸಿ ನಂತರ ಆ ರೇಷನ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡುಗಳಾಗಿ ಬದಲಾವಣೆ ಮಾಡಲಾಗುತ್ತದೆ.
ಒಂದು ವೇಳೆ ಪರಿಷ್ಕರಣೆಯ ಸಂದರ್ಭದಲ್ಲಿ ಅರ್ಹ ರೇಷನ್ ಕಾರ್ಡ್ ಗಳ ತಪ್ಪಾಗಿ ಎಪಿಎಲ್ ಕಾರ್ಡ್ ಗಳಾಗಿ ಮಾರ್ಪಟ್ಟರೆ ಅಂತ ಸಂದರ್ಭದಲ್ಲಿ ಫಲಾನುಭವಿಗಳು ಆಹಾರ ಇಲಾಖೆಗೆ ಭೇಟಿ ನೀಡಿ ಒಂದು ದಿನದ ಒಳಗಡೆ ಮತ್ತೆ ಬಿಪಿಎಲ್ ಕಾರ್ಡ್ ಗಳಾಗಿ ಮಾರ್ಪಾಡು ಮಾಡಿಸಿಕೊಳ್ಳಬಹುದು
ನಂತರ ಮುಂದುವರೆದು ಈ ಎಲ್ಲಾ ಪಡಿತರ ಚೀಟಿ ಪರಿಷ್ಕರಣೆ ಪೂರ್ಣಗೊಂಡ ನಂತರ ಬಳಿಕ ಅಕ್ಟೋಬರ್ ಒಂದರಿಂದ ಹೊಸ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ( 01 ಅಕ್ಟೋಬರ್ 2025 ರಿಂದ ) ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವಾಗ..?
ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಬಯಸುವಂಥ ಕುಟುಂಬಗಳಿಗೆ ರಾಜ್ಯ ಸರ್ಕಾರ ಇದೀಗ ದಿನಾಂಕ 30 ಸೆಪ್ಟೆಂಬರ್ 2025 ರವರೆಗೆ ಅಂದರೆ ಇನ್ನು ಕೇವಲ ಮೂರು ದಿನದ ಒಳಗಡೆ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಬಯಸುವವರು ತಿದ್ದುಪಡಿ ಮಾಡಿಸಬಹುದು ಹಾಗಾಗಿ ಆಸಕ್ತಿ ಇರುವವರು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದು
ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ರೇಷನ್ ಕಾರ್ಡ್
- ಸದಸ್ಯರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು
Canara Bank: ಕೆನರಾ ಬ್ಯಾಂಕ್ ನಲ್ಲಿ ಪದವಿ ಪಾಸಾದವರಿಗೆ 3500 ಹುದ್ದೆಗಳು ಖಾಲಿ ಇವೆ.! ಬೇಗ ಅರ್ಜಿ ಸಲ್ಲಿಸಿ