Gruhalakshmi Pending Amount: ಗೃಹಲಕ್ಷ್ಮಿ ಪೆಂಡಿಂಗ್ ಇರುವ ಎರಡು ಕಂತಿನ ಹಣ ಬಿಡುಗಡೆ, ಈ ರೀತಿ ರೂ.2000 ಜಮಾ ಆಗಿದೆ ಎಂದು ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ಕೆಲವು ತಿಂಗಳ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ 2000 ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸದಸ್ಯ ಸರಕಾರ ಕಡೆಯಿಂದ ಹೊಸ ಅಪ್ಡೇಟ್ ಬಂದಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಬಾಕಿ ಇರುವ ಎಲ್ಲಾ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತೆ ಹಾಗೂ ಎಷ್ಟು ಕಂತಿನ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡಬೇಕು ಎಂದು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಕೊನೆವರೆಗೂ ಓದಿ
ಗೃಹಲಕ್ಷ್ಮಿ ಯೋಜನೆ (Gruhalakshmi Pending Amount)..?
ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಮಹತ್ವಕಾಂಕ್ಷಿ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಯಾಗಿದೆ ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.! ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇಲ್ಲಿವರೆಗೂ ಮಹಿಳೆಯರು 20 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಹಾಗಾಗಿ ಇನ್ನೂ ಎರಡು ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ.
ಬಾಕಿ ಇರುವ ಎಲ್ಲಾ (Gruhalakshmi Pending Amount) ಕಂತಿನ ಹಣ ಈ ತಿಂಗಳಿನಲ್ಲಿ ಬಿಡುಗಡೆ..?
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇನ್ನು ಫೆಬ್ರುವರಿ ಹಾಗೂ ಮಾರ್ಚ್ ತಿಂಗಳ ಹಣ ಜಮಾ ಆಗಿಲ್ಲ ಹಾಗೂ ಮೇ ತಿಂಗಳ ಹಣವು ಕೂಡ ಜಮಾ ಆಗಿಲ್ಲ ಹಾಗಾಗಿ ಮಹಿಳೆಯರು ಪೆಂಡಿಂಗ್ ಇರುವಂತಹ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ

ಕೆಲವು ತಾಂತ್ರಿಕ ಸಮಸ್ಯೆಯಿಂದ ಹಣ ಜಮಾ ಮಾಡುವುದು ವಿಳಂಬವಾಗುತ್ತಿದೆ ಸದ್ಯದಲ್ಲೇ ಅಂದರೆ ಜೂನ್ ಎರಡನೇ ವಾರದಲ್ಲಿ ಅಥವಾ ಜೂನ್ ಮೂರನೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಎರಡು ಕಂತಿನ ಹಣ ಅಂದರೆ ₹4,000 ರೂಪಾಯಿ ಹಣವನ್ನು ಮಹಿಳೆಯರ ಖಾತೆಗೆ ಹಂತ ಹಂತವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ.!
ಹೌದು ಸ್ನೇಹಿತರೆ ಸಾಧ್ಯ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣ ಈಗಾಗಲೇ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಮತ್ತು 21ನೇ ಕಂತಿನ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಇನ್ನೂ 22ನೇ ಕಂತಿನ ಹಣ ವರ್ಗಾವಣೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ನೀವು ಇಲ್ಲಿವರೆಗೂ ಎಷ್ಟು ಕಂಚನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳುವುದು
ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂದು ಚೆಕ್ ಮಾಡುವುದು ಹೇಗೆ..?
ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ನೀವು google play store ಭೇಟಿ ನೀಡಿ ಅಥವಾ Karnataka DBT ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಗೃಹಲಕ್ಷ್ಮಿ ಫಲಾನುಭವಿಯ ಆಧಾರ್ ಕಾರ್ಡ್ ಎಂಟರ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಅಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಗೃಹಲಕ್ಷ್ಮಿ ಸ್ಕೀಮ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಇಲ್ಲಿವರೆಗೂ ಎಷ್ಟು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಆಗಿದೆ ಎಂಬ ಮಾಹಿತಿ ನೋಡಲು ಸಿಗುತ್ತದೆ
ಇದೇ ರೀತಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ಸರಕಾರಿ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ
2 thoughts on “Gruhalakshmi Pending Amount: ಗೃಹಲಕ್ಷ್ಮಿ ಪೆಂಡಿಂಗ್ ಇರುವ ಎರಡು ಕಂತಿನ ಹಣ ಬಿಡುಗಡೆ, ಈ ರೀತಿ ರೂ.2000 ಜಮಾ ಆಗಿದೆ ಎಂದು ಚೆಕ್ ಮಾಡಿ”