anna bhagya yojana: ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್.! ಪ್ರತಿ ಸದಸ್ಯರಿಗೆ ಸಿಗಲಿದೆ 15 KG ಅಕ್ಕಿ, ಇಲ್ಲಿದೆ ಮಾಹಿತಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ರೇಷನ್ ಕಾರ್ಡ್ ಹೊಂದಿದಂತ ಸದಸ್ಯರಿಗೆ ಅಥವಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು.! ಹೌದು ಸ್ನೇಹಿತರೆ, ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿ ನೀಡುವುದಾಗಿ ಆಹಾರ ಇಲಾಖೆಯ ಸಚಿವರದಂತ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ
ಅನ್ನಭಾಗ್ಯ ಯೋಜನೆ (anna bhagya yojana)..?
ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ 5 ಗ್ಯಾರಂಟಿ ಘೋಷಣೆ ಮಾಡಿತ್ತು ಈ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯು ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ.! ಈ ಯೋಜನೆಯ ಮೂಲಕ ಬಿಪಿಎಲ್ ಹಾಗೂ ಅಂತೋದಯ ರೇಷನ್ ಕಾರ್ಡ್ ಹೊಂದಿದಂತಹ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು

ಆದರೆ ಅಕ್ಕಿಯ ಅಭಾವದಿಂದ ಕಾಂಗ್ರೆಸ್ ಪಕ್ಷವು 5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣವನ್ನು ರೇಷನ್ ಕಾರ್ಡ್ ನಲ್ಲಿ ಇರುವ ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುತ್ತಾ ಇಲ್ಲಿವರೆಗೂ ಬಂದಿದೆ.! ಕಳೆದ ನಾಲ್ಕು ತಿಂಗಳಿಂದ ಕೆಲವರಿಗೆ ಅಕ್ಕಿ ಹಣ ಜಮಾ ಆಗಿಲ್ಲ ಹಾಗಾಗಿ ಸರ್ಕಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ ಇನ್ನು ಮುಂದೆ ಹಣದ ಬದಲಾಗಿ ಅಕ್ಕಿ ನೀಡುವುದಾಗಿ ಭರವಸೆ ಘೋಷಣೆ ಮಾಡಿದೆ
ಪಿಎಂ ಕಿಸಾನ್ ಯೋಜನೆಯ ₹2000 ಹಣ ಪಡೆಯಲು ತಕ್ಷಣ ಈ ಕೆಲಸ ಮಾಡಿ ಇಲ್ಲಿದೆ ನೋಡಿ ಮಾಹಿತಿ
ಪ್ರತಿ ಸದಸ್ಯರಿಗೆ 15 KG ಅಕ್ಕಿ ನೀಡಲು ತೀರ್ಮಾನ (anna bhagya yojana).?
ಹೌದು ಸ್ನೇಹಿತರೆ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅಕ್ಕಿಯ ಬದಲು ಇಲ್ಲಿವರೆಗೂ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಾ ಬಂದಿದೆ.! ಆದರೆ ಕಳೆದ ಐದು ತಿಂಗಳಿಂದ ಕೆಲವರಿಗೆ ಅಕ್ಕಿ ಹಣ ಜಮಾ ಆಗಿಲ್ಲ ಹಾಗೂ ಕೆಲವರಿಗೆ ಮೂರು ತಿಂಗಳಿಂದ ಅಕ್ಕಿ ಹಣ ಜಮಾ ಆಗಿಲ್ಲ.! ಆದ್ದರಿಂದ ರಾಜ್ಯದ ಜನತೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಜಿಯೋ ಹೊಸ ರಿಚಾರ್ಜ್ ಆಫರ್ ಕೇವಲ 448 ರೂಪಾಯಿಗೆ 84 ದಿನಗಳ ವ್ಯಾಲಿಡಿಟಿ ಸಿಗುತ್ತೆ ಇಲ್ಲಿದೆ ನೋಡಿ ಮಾಹಿತಿ
ಈ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರವು ಇನ್ನು ಮುಂದೆ ಅಕ್ಕಿ ಹಣವನ್ನು ರದ್ದು ಮಾಡಿ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದು ಅದೇ ರೀತಿ ಈ ಒಂದು ಆದೇಶವನ್ನು ಮಾರ್ಚ್ ತಿಂಗಳಿಂದ ಅಂದರೆ ಈ ತಿಂಗಳಿನಿಂದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಸರಕಾರ ಆದೇಶ ಮಾಡಿದೆ ಮತ್ತು ಉಳಿದ ಅಕ್ಕಿ ಹಣವನ್ನು ಹಾಗೂ ಪೆಂಡಿಂಗ್ ಇರುವ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ

ಹೌದು ಸ್ನೇಹಿತರೆ ಅಕ್ಕಿ ಹಣದ ಬದಲಾಗಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳಲ್ಲಿ ನಿರ್ಧಾರ ಕೈಗೊಂಡಿದೆ ಹಾಗಾಗಿ ಫೆಬ್ರವರಿ ತಿಂಗಳಿನ ಅಕ್ಕಿ ಹಣದ ಬದಲಾಗಿ.! ಈ ತಿಂಗಳು ಅಂದರೆ ಮಾರ್ಚ್ ತಿಂಗಳಿನಲ್ಲಿ ಫೆಬ್ರವರಿ ತಿಂಗಳ 5 ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು ಪ್ರತಿಯೊಬ್ಬ ಸದಸ್ಯರಿಗೆ 15 ಕೆಜಿ ಅಕ್ಕಿ ನೀಡುವುದಾಗಿ ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕೆಳಗಡೆ ಪೋಸ್ಟರ್ ನೀವು ನೋಡಬಹುದು
ಹೌದು ಸ್ನೇಹಿತರೆ ಫೆಬ್ರವರಿ ತಿಂಗಳ ಅಕ್ಕಿ ಹಣ ಜನರ ಖಾತೆಗೆ ವರ್ಗಾವಣೆ ಮಾಡುವುದಿಲ್ಲ ಅದರ ಬದಲಾಗಿ ಫೆಬ್ರುವರಿ ತಿಂಗಳ 5 ಕೆಜಿ ಅಕ್ಕಿಯನ್ನು ಈ ಮಾರ್ಚ್ ತಿಂಗಳಲ್ಲಿ ನೀಡಲಾಗುತ್ತದೆ ಹಾಗಾಗಿ ಮಾರ್ಚ್ ತಿಂಗಳ 10 ಕೆಜಿ ಅಕ್ಕಿ ಜೊತೆಗೆ ಫೆಬ್ರವರಿ ತಿಂಗಳ 5 ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು 15 ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ ಮತ್ತು ಮುಂದೆ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಯಥಾಪ್ರಕಾರ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
4 thoughts on “anna bhagya yojana: ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್.! ಪ್ರತಿ ಸದಸ್ಯರಿಗೆ ಸಿಗಲಿದೆ 15 KG ಅಕ್ಕಿ, ಇಲ್ಲಿದೆ ಮಾಹಿತಿ”