ಅನ್ನಭಾಗ್ಯ ಯೋಜನೆ: ಇನ್ಮುಂದೆ 5 ಕೆ.ಜಿ ಆಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ – ಕೆ. ಹೆಚ್. ಮುನಿಯಪ್ಪ
ನಮಸ್ಕಾರ ಗೆಳೆಯರೇ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಇದೀಗ ಪಡಿತರ ಅಕ್ಕಿ ಜೊತೆಗೆ ಜನರಿಗೆ ಅಗತ್ಯವಾಗಿ ಬೇಕಾಗಿರುವಂತ ಎಲ್ಲಾ ಆಹಾರ ಧಾನ್ಯಗಳನ್ನು (ಪೌಷ್ಟಿಕ ಆಹಾರದ ಕಿಟ್) ಇಂದಿರ ಆಹಾರ ಕಿಟ್ ಮೂಲಕ ವಿತರಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಾಗಿದೆ ಎಂದು ಕೆ ಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಷಯವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಅನ್ನಭಾಗ್ಯ ಯೋಜನೆಯಡಿ ಇಂದಿರಾ ಆಹಾರ ಕಿಟ್ ವಿತರಣೆ..?
ಹೌದು ಗೆಳೆಯರೇ ನಮ್ಮ ರಾಜ್ಯದ ಆಹಾರ ಸಚಿವರಾದಂತ ಕೆ. ಹೆಚ್. ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ. ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ ಇನ್ನು ಮುಂದೆ ರಾಜ್ಯ ಸರ್ಕಾರದಿಂದ ನೀಡುತ್ತಿರುವ 5 ಕೆ.ಜಿ ಅಕ್ಕಿ ಬದಲಾಗಿ ಪಡಿತರ ಚೀಟಿ ಹೊಂದಿದಂತ ಫಲಾನುಭವಿಗಳಿಗೆ (ಪೌಷ್ಟಿಕ ಆಹಾರದ ಕಿಟ್) ಇಂದಿರಾ ಆಹಾರ ಕಿಟ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ..

ಕೆ. ಹೆಚ್. ಮುನಿಯಪ್ಪ ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ ಪ್ರಸ್ತುತ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ನೀಡುತ್ತಿರುವ 5 ಕೆ.ಜಿ ಹೊರತಾಗಿ ಹೆಚ್ಚುವರಿಯಾಗಿ ಐದು ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿದೆ.
ಇದರಿಂದ ಸಾಕಷ್ಟು ಫಲಾನುಭವಿಗಳು ಅಕ್ಕಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಹಾಗಾಗಿ ಇದನ್ನು ಹರೆ ಕಟ್ಟುವ ಉದ್ದೇಶದಿಂದ ನಾವು ಇನ್ನು ಮುಂದೆ ಹೆಚ್ಚುವರಿ ಆಗಿ ನೀಡುತ್ತಿರುವ 5 ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ರಾಜ್ಯ ಸರ್ಕಾರ ಬರೋಬರಿ ₹6,119.52 ಕೋಟಿ ರೂಪಾಯಿ ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಮಾಹಿತಿ ತಿಳಿಸಿದ್ದಾರೆ..
ಇಂದಿರಾ ಆಹಾರ ಕಿಟ್ ನಲ್ಲಿ ಯಾವ ವಸ್ತುಗಳು ಜನರಿಗೆ ಸಿಗಲಿದೆ..?
- 1 K.G ತೊಗರಿ ಬೇಳೆ
- 1 K.G ಸಕ್ಕರೆ
- 1 K.G ಉಪ್ಪು
- 1 ಲೀಟರ್ ಅಡುಗೆ ಎಣ್ಣೆ
ಮೇಲೆ ತಿಳಿಸಿದ ಎಲ್ಲಾ ವಸ್ತುಗಳು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡಲಿರುವ ಇಂದಿರಾ ಆಹಾರ ಕಿಟ್ ನಲ್ಲಿ ಈ ಎಲ್ಲಾ ಸಾಮಗ್ರಿಗಳು ಸಿಗುತ್ತವೆ. ಯಾವ ರೀತಿ ಈ ಇಂದಿರಾ ಆಹಾರಕ್ಕೆ ವಿತರಣೆ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಆಹಾರ ಇಲಾಖೆಯ ಸಚಿವರಾದ ಕೆ. ಹೆಚ್. ಮುನಿಯಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವ ರೀತಿ ಜನರಿಗೆ ಇಂದಿರ ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ..?
ಕೆ. ಹೆಚ್ ಮುನಿಯಪ್ಪನವರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ಅವರು ಮಾಹಿತಿ ತಿಳಿಸಿರುವ ಪ್ರಕಾರ ಪಡಿತರ ಚೀಟಿಯಲ್ಲಿ ಒಬ್ಬರು ಅಥವಾ ಇಬ್ಬರು ಸದಸ್ಯರು ಇದ್ದಾರೆ ಅಂತವರಿಗೆ ಅರ್ಧ ಅರ್ಧ ಕೆಜಿ ವಸ್ತುಗಳನ್ನು ಒಳಗೊಂಡ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ.
ಅದೇ ರೀತಿ ಪಡಿತರ ಚೀಟಿಯಲ್ಲಿ ಮೂರು ಅಥವಾ ನಾಲ್ಕು ಜನ ಸದಸ್ಯರು ಬಂದಿದ್ದರೆ ಅಂತ ಕುಟುಂಬಗಳಿಗೆ 1 k.G ಆಹಾರ ಸಾಮಗ್ರಿಗಳ ಒಳಗೊಂಡ ಇಂದಿರಾ ಆಹಾರಕ್ಕೆ ವಿತರಣೆ ಮಾಡಲಾಗುತ್ತದೆ.
ಅದೇ ರೀತಿ ಐದು ಜನ ಅಥವಾ ಅದಕ್ಕಿಂತ ಹೆಚ್ಚು ಜನರು ಹೊಂದಿದಂತ ಪಡಿತರ ಚೀಟಿ ಕುಟುಂಬಗಳಿಗೆ 1.5ಕೆಜಿ ಸಾಮರ್ಥ್ಯದ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ
ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ.! ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು.?