Udyogini scheme 2024: ಈ ಯೋಜನೆಯಲ್ಲಿ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಮತ್ತು ಶೇಕಡ 50ರಷ್ಟು ಸಬ್ಸಿಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ಹಾಗೂ ಆರ್ಥಿಕವಾಗಿ ದುರ್ಬಲವಾದಂತಹ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಸಣ್ಣಪುಟ್ಟ ಕೈಗಾರಿಕೆಗಳಿಗೆ ಮತ್ತು ಸ್ವಂತ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ ಮತ್ತು ಇದರಲ್ಲಿ 1,50,000 ವರೆಗೆ ಸಾಲ ಮನ್ನಾ ಆಗುತ್ತದೆ ಹಾಗಾಗಿ ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನ ಮೂಲಕ ತಿಳಿದುಕೊಳ್ಳೋಣ
ಉದ್ಯೋಗಿನಿ ಯೋಜನೆ (Udyogini scheme 2024)..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ನಮ್ಮ ರಾಜ್ಯದಲ್ಲಿ ಇರುವಂತ ಮಹಿಳೆಯರಿಗಾಗಿ ಹಾಗೂ ಬಡ ಮತ್ತು ಹಿಂದುಳಿದ ವರ್ಗದ ಮಹಿಳೆಯರು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವಂತ ಮಹಿಳೆಯರಿಗಾಗಿ ಮತ್ತು ಸ್ವಂತ ಉದ್ಯೋಗ ಮಾಡಲು ಮಹಿಳೆಯರನ್ನು ಪ್ರೋತ್ಸಾಹ ನೀಡುವ ಉದ್ದೇಶದಿಂದ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಈ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡಲಾಗುತ್ತಿದೆ.!

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸುವ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಈ ಯೋಜನೆ ಅಡಿಯಲ್ಲಿ ಒದಗಿಸಲಾಗುತ್ತದೆ ಇದರ ಜೊತೆಗೆ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ವರ್ಗದವರಿಗೆ 30 ಹಾಗೂ 50ರಷ್ಟು ಸಬ್ಸಿಡಿ ಈ ಒಂದು ಯೋಜನೆ ಅಡಿಯಲ್ಲಿ ಸಿಗುತ್ತದೆ ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ಉದ್ಯೋಗಿನಿ ಯೋಜನೆಯ ಲಾಭಗಳೇನು (Udyogini scheme 2024)..?
ಬಡ್ಡಿ ರಹಿತ ಸಾಲ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಯಾವುದೇ ರೀತಿ ಬಡ್ಡಿ ಇಲ್ಲದೆ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲವನ್ನು ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರು ಪಡೆದುಕೊಳ್ಳಬಹುದು
1,50,000 ರೂಪಾಯಿ ಸಬ್ಸಿಡಿ ಸಿಗುತ್ತದೆ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರು ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು ಜೊತೆಗೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡ 50ರಷ್ಟು ಅಂದರೆ 1,50,000 ವರೆಗೆ ಈ ಉದ್ಯಮಿ ಯೋಜನೆ ಅಡಿಯಲ್ಲಿ ಸಾಲಮನ್ನಾ ಮಾಡಲಾಗುತ್ತದೆ .!
ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಅಂದರೆ ಗರಿಷ್ಠ 70 ರಿಂದ 90 ಸಾವಿರ ವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಸಾಲ ಮನ್ನಾ ಮಾಡಲಾಗುತ್ತದೆ
ಸ್ವಂತ ಉದ್ಯೋಗಕ್ಕೆ ಸಾಲ ಸೌಲಭ್ಯ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶವೇನಂದರೆ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಒಂದು ಯೋಜನೆಯ ಮೂಲಕ ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
- ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟು ಹಾಗೂ ಗರಿಷ್ಠ 55 ವರ್ಷದ ಒಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
- SC & ST ವರ್ಗದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 2,50,000 ಗಿಂತ ಕಡಿಮೆ ಇರಬೇಕು
- ಸಾಮಾನ್ಯ ವರ್ಗದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 1,50,000 ಗಿಂತ ಕಡಿಮೆ ಇರಬೇಕಾಗುತ್ತದೆ
- ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆ ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಸಾಲ ಪಡೆದಿರಬಾರದು
- ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸರಕಾರಿ ನೌಕರಿ ಹೊಂದಿದ ಕುಟುಂಬದ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ಮಹಿಳೆಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವಸತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವೋಟರ್ ಐಡಿ
- ಯೋಜನೆಯ ವರದಿ
- ಇತ್ತೀಚಿನ ಫೋಟೋಸ್
ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು..?
ಸ್ನೇಹಿತರೆ ನೀವು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಹಾಗೂ ಈ ಯೋಜನೆ ಮೂಲಕ ಸ್ವಂತ ಉದ್ಯೋಗಕ್ಕೆ 3 ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಪಡೆಯಲು ಬಯಸುತ್ತಿದ್ದರೆ ಹಾಗೂ ಶೇಕಡ 50ರಷ್ಟು ಸಬ್ಸಿಡಿ ಯೋಜನೆ ಅಡಿಯಲ್ಲಿ ಪಡೆಯಲು ಬಯಸುತ್ತಿದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಮಹಿಳಾ ಅಭಿವೃದ್ಧಿ ನಿಗಮಗಳಿಗೆ ಭೇಟಿ ನೀಡಿ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಹತ್ತಿರವಿರುವ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕದ ಟ್ರೆಂಡಿಂಗ್ ನ್ಯೂಸ್ ಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್.