ಚಾಮರಾಜನಗರ: ನಮಸ್ಕಾರ ಗೆಳೆಯರೇ, ನಮ್ಮ ರಾಜ್ಯದ ಶಿಕ್ಷಣ ಸಚಿವರಾದಂತ ಮಧು ಬಂಗಾರಪ್ಪನವರು ಉದ್ಯೋಗ ಆಕಾಂಕ್ಷಿಗಳಿಗೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ.!
ಹೌದು ಗೆಳೆಯರೆ, ಸರ್ಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆಗಳಲ್ಲಿ ಸುಮಾರು 18,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಪ್ರಾರಂಭ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪನವರು ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ
ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು 13500 ಶಿಕ್ಷಕರ ನೇಮಕಾತಿ ಆಗಿದೆ ಎಂದು ಮಾಹಿತಿ ತಿಳಿಸಿದ್ದಾರೆ ಇದರ ಜೊತೆಗೆ “ವಿಕಾಸ್ ಯೋಜನೆ” ಅಡಿಯಲ್ಲಿ ಸುಮಾರು 8,200 ಶಾಲಾ ಕೋಟಿ ನಿರ್ಮಿಸಿದ್ದು ಹೆಚ್ಚುವರಿಯಾಗಿ ಇನ್ನು 3000 ಶಾಲಾ ಕೋಟಿಗಳನ್ನು ನಿರ್ಮಿಸಲಾಗುವುದು ಎಂದು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಮುಂದುವರೆದು ಹೊಸದಾಗಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವುದಾಗಿ ಸುದ್ದಿಗಾರರೊಂದಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ
ಹೌದು ಗೆಳೆಯರೇ, ಶಿಕ್ಷಕ ವೃತ್ತಿ ಮಾಡಲು ಬಯಸುವಂಥವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಸುಮಾರು 18500 ಶಿಕ್ಷಕರ ಹುದ್ದೆಗಳ ನೇಮಕಾತಿ ಕುರಿತು ಶೀಘ್ರದಲ್ಲೇ ಅತಿ ಸೂಚನೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.!
ಹಾಗಾಗಿ ನಾವು ಈ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆಗೊಂಡ ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ ಮತ್ತು ಇತರ ಮಾಹಿತಿಗೆ ಸಂಬಂಧಿಸಿದ ವಿವರವನ್ನು ಹೊಸ ಅಂಕಣದ ಮೂಲಕ ತಿಳಿಸಿ ಕೊಡುತ್ತೇವೆ
ಆದ್ದರಿಂದ ನಿಮಗೆ ಯಾವುದೇ ರೀತಿ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ತಕ್ಷಣ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು