Post office franchise 2025: ಕೇವಲ 8ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ! ತಿಂಗಳಿಗೆ ₹50,000 ಆದಾಯ ಗಳಿಸಿ
ನಮಸ್ಕಾರ ಸ್ನೇಹಿತರೆ, ಭಾರತೀಯ ಅಂಚೆ ಇಲಾಖೆಯ ವತಿಯಿಂದ ಇದೀಗ ಹೊಸ ಸೇವೆಯನ್ನು ಆರಂಭಿಸಿದೆ, ಈ ಸೇವೆಯಿಂದ ನೀವು ಪೋಸ್ಟ್ ಆಫೀಸ್ ಫ್ರಾಂಚೈಸಿ ತೆರೆದು ತಿಂಗಳಿಗೆ 50 ಸಾವಿರ ವರೆಗೆ ಆದಾಯ ಗಳಿಸಬಹುದು ಮತ್ತು ಈ ಪೋಸ್ಟ್ ಆಫೀಸ್ ಫ್ರಾಂಚೈಸಿ ಗೆ ಅರ್ಜಿ ಸಲ್ಲಿಸಲು ಕೇವಲ ನೀವು ಎಂಟನೇ ತರಗತಿ ಪಾಸಾದರೆ ಸಾಕು ಅರ್ಜಿ ಸಲ್ಲಿಸಬಹುದು ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಏನಿದು ಪೋಸ್ಟ್ ಆಫೀಸ್ ಫ್ರಾಂಚೈಸಿ ಸೇವೆ..?
ಸ್ನೇಹಿತರೆ ಭಾರತೀಯ ಅಂಚೆ ಇಲಾಖೆ ಇದೀಗ ಅಧಿಕೃತವಾಗಿ ವಿವಿಧ ಅಂಚೆ ಸೇವೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಇನ್ನಷ್ಟು ಹೆಚ್ಚು ಸೇವೆ ಒದಗಿಸುವ ಉದ್ದೇಶದಿಂದ, ಹೊಸ ಯೋಜನೆ ಪ್ರಾರಂಭಿಸಿದೆ ಈ ಯೋಜನೆಗೆ ಪೋಸ್ಟ್ ಆಫೀಸ್ ಫ್ರಾಂಚೈಸಿ ಯೋಜನೆ ಎಂದು ಹೆಸರು ಇಡಲಾಗಿದೆ.

ಹೌದು ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಪೋಸ್ಟ್ ಆಫೀಸ್ನಲ್ಲಿ ದೊರೆಯುವಂತೆ ವಿವಿಧ ಸೇವೆಗಳನ್ನು ನಿಮ್ಮ ಪ್ರದೇಶದಲ್ಲಿರುವ ಜನರಿಗೆ ಸೇವೆಗಳನ್ನು ಸಲ್ಲಿಸಬಹುದು, ಇದರಿಂದ ನಿಮಗೆ ತಿಂಗಳಿಗೆ 50 ಸಾವಿರ ವರೆಗೆ ಹಣ ಸಂಪಾದನೆ ಮಾಡಲು ಹೊಸ ಉದ್ಯೋಗ ಅವಕಾಶ ಪೋಸ್ಟ್ ಆಫೀಸ್ ಕಲ್ಪಿಸಿಕೊಡುತ್ತಿದೆ.
ಹೌದು ಸ್ನೇಹಿತರೆ ಇದು ಸರ್ಕಾರಿ ಯೋಜನೆಯ ಒಂದು ಭಾಗವಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ಪೋಸ್ಟ್ ಆಫೀಸ್ ಫ್ರಾಂಚೈಸಿ ಯೋಜನೆಯನ್ನು ಪರಿಚಯ ಮಾಡಿದೆ. ಇದರಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಮನಿ ಆರ್ಡರ್, ಸ್ಪೀಡ್ ಪೋಸ್ಟ್, ಬ್ಯಾಂಕಿಂಗ್ ಸೇವೆಗಳು, ಇನ್ಸೂರೆನ್ಸ್ ಸೇವೆಗಳು, ಮತ್ತು ಪೋಸ್ಟ್ ಆಫೀಸ್ಗೆ ಸಂಬಂಧಿಸಿದ ಇತರ ಸರ್ಕಾರಿ ಸೇವೆಗಳನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ
ಪೋಸ್ಟ್ ಆಫೀಸ್ ಫ್ರಾಂಚೈಸಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
- ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು
- ಕನಿಷ್ಠ 18 ವರ್ಷ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಹೊಂದಿರಬೇಕು
- ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
- ಮಾಜಿ ಅಂಚೆ ಉದ್ಯೋಗಿಗಳು ಮತ್ತು ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 8ನೇ ತರಗತಿ ಪಾಸ್ ಆಗಿರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಬಯಸುವಂಥ ಅರ್ಜಿದಾರರು ಕನಿಷ್ಠ 100 ಚದರ ಜಾಗ ಅಥವಾ ಸುಮಾರು 84 ಸೆಂಟಿಮೀಟರ್ ಸ್ಥಳ ಹೊಂದಿರಬೇಕು
ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಲು ಎಷ್ಟು ಹಣ ಹೂಡಿಕೆ ಮಾಡಬೇಕು..?
ನೀವು ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಲು ಬಯಸುತ್ತಿದ್ದರೆ ಕನಿಷ್ಠ 2 ಲಕ್ಷ ರೂಪಾಯಿಯಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು ಹಾಗೂ ಇತರ ಹಲವಾರು ವೆಚ್ಚಗಳು ಸೇರಿರುತ್ತವೆ ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ನಾವು ಕೆಳಗಡೆ ನೀಡಿದ್ದೇವೆ
- ಭದ್ರತಾ ಠೇವಣಿ:- ₹5,000/-
- ಅರ್ಜಿ ಶುಲ್ಕ:- ₹5,000/- (SC/ST ಮತ್ತು ಮಹಿಳೆಯರಿಗೆ ರಿಯಾಯಿತಿ ಇರುತ್ತದೆ)
- ಕಂಪ್ಯೂಟರ್ ಮತ್ತು ಇತರ ಫರ್ನಿಚರ್ ವಸ್ತುಗಳು ಮತ್ತು ಇತರ ಸಾಮಗ್ರಿಗಳ ಅಗತ್ಯತೆ ಹೊಂದಿರಬೇಕು
ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಿ ಆದಾಯ ಗಳಿಸುವುದು ಹೇಗೆ..?
ಸ್ನೇಹಿತರೆ ನೀವು ಪೋಸ್ಟ್ ಆಫೀಸ್ ನಲ್ಲಿ ಫ್ರಾಂಚೈಸಿ ಪ್ರಾರಂಭಿಸಿ ಆದಾಯ ಯಾವ ರೀತಿ ಗಳಿಸಬಹುದು ಎಂಬ ಸಂದೇಹ ನಿಮ್ಮಲ್ಲಿ ಕಾಡಬಹುದು ಹಾಗಾಗಿ ನೀವು ಆದಾಯ ಗಳಿಸುವ ವಿಧಾನ ಹಾಗೂ ಚಾರ್ಜಸ್ ಬಗ್ಗೆ ಕೆಳಗಡೆ ವಿವರ ನೀಡಲಾಗಿದೆ
- ಸ್ಪೀಡ್ ಪೋಸ್ಟ್:- ₹10-₹50 ಪ್ರತಿ ಪಾರ್ಸೆಲ್ ಗೆ ಪಡೆಯಬಹುದು
- ಮನಿ ಆರ್ಡರ್:- ₹10-₹25 ರೂಪಾಯಿವರೆಗೆ ಪ್ರತಿ ವಹಿವಾಟು ಗೆ ಪಡೆಯಬಹುದು
- ಸೇವಿಂಗ್ ಅಕೌಂಟ್:- ₹20-₹100 ವರೆಗೆ ಪ್ರತಿ ಖಾತೆಗೆ ಹಣ ಪಡೆಯಬಹುದು
- ಇನ್ಸೂರೆನ್ಸ್ ಮತ್ತು ಪೆನ್ಷನ್ ಯೋಜನೆಗಳ ಮೂಲಕ ನೀವು ಹೆಚ್ಚಿನ ಆದಾಯ ಗಳಿಸಲು ಅವಕಾಶವಿದೆ
ಇಷ್ಟೇ ಅಲ್ಲದೆ ನೀವು ಪೋಸ್ಟ್ ಆಫೀಸ್ ನಲ್ಲಿ ವಿವಿಧ ಸೇವೆಗಳನ್ನು ಜನರಿಗೆ ನೀಡುವುದರ ಮೂಲಕ ನೀವು ಆದಾಯ ಗಳಿಸಬಹುದು ಹಾಗೂ ಕನಿಷ್ಠ ಏನಿಲ್ಲ ಅಂದರೂ ನೀವು ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ ಕನಿಷ್ಠ 25,000 ಯಿಂದ ಗರಿಷ್ಠ 55,000 ವರೆಗೆ ಅಥವಾ ಇದಕ್ಕಿಂತ ಹೆಚ್ಚು ಹಣವನ್ನು ಈ ಒಂದು ಯೋಜನೆಯ ಮೂಲಕ ಸಂಪಾದಿಸಲು ಸಾಧ್ಯವಿದೆ
ಪೋಸ್ಟ್ ಆಫೀಸ್ ಫ್ರಾಂಚೈಸಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
ಪೋಸ್ಟ್ ಆಫೀಸ್ ಫ್ರಾಂಚೈಸಿ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಅದನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿ ಫಾರಂ ಡೌನ್ಲೋಡ್ ಮಾಡಿ ನಂತರ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಲಗುತಿಸಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ ನಿಮ್ಮ ಜಿಲ್ಲಾ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ
ನಂತರ ಅವರು ಈ ಎಲ್ಲಾ ಅಗತ್ಯತೆಗಳನ್ನು ಪರಿಶೀಲಿಸಿ, ನಂತರ ಪೋಸ್ಟ್ ಆಫೀಸ್ ಫ್ರಾಂಚೈಸಿ ತೆರೆಯಲು ನಿಮಗೆ ಅನುಮತಿ ನೀಡಲಾಗುತ್ತದೆ ಜೊತೆಗೆ ಉಚಿತ ತರಬೇತಿ ಈ ಯೋಜನೆ ಮೂಲಕ ಅಂಚೆ ಇಲಾಖೆಯ ವತಿಯಿಂದ ನೀಡಲಾಗುತ್ತದೆ
ಇದೇ ರೀತಿ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಹಾಗೂ ಇತರ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳು ಪ್ರತಿದಿನ ಪಡೆಯಲು ಆಸಕ್ತಿ ಇದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು