PM Kisan 20Th Instalment: ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ₹2000 ಹಣ ಈ ದಿನ ಬಿಡುಗಡೆ! ರೈತರು ಕಡ್ಡಾಯವಾಗಿ ಈ ಕೆಲಸ ಮಾಡಿ
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ (PM – Kisan) ಯೋಜನೆಯ 20ನೇ ಕಂತಿನ ರೂ.2000 ಹಣ ರೈತರ ಖಾತೆಗೆ ಜಮಾ ಆಗಿಲ್ಲ ಹಾಗಾಗಿ ರೈತರು ತಮ್ಮ ಖಾತೆಗೆ ಯಾವಾಗ 20ನೇ ಕಂತಿನ ಹಣ ಜಮಾ ಆಗುತ್ತೆ ಎಂದು ಕಾಯುತ್ತಿದ್ದರೆ ಇದಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಂದಿದ್ದು ನಾವು ಈ ಲೇಖನ ಮೂಲಕ 20ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಹಾಗೂ ಹಣ ಪಡೆಯಲು ರೈತರು ಏನು ಮಾಡಬೇಕೆಂಬ ಮಾಹಿತಿ ತಿಳಿಯೋಣ
PM ಕಿಸಾನ್ 20ನೇ ಕಂತಿನ ರೂ.2000 ಹಣ (PM Kisan 20Th Instalment).?
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರಿಗೆ ಪ್ರತಿ ವರ್ಷ 6,000 ಹಣವನ್ನು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ₹2000 ರೂಪಾಯಿಯಂತೆ 3 ಕಂತಿನ ರೂಪದಲ್ಲಿ ರೈತರ ಖಾತೆಗೆ ಇಲ್ಲಿವರೆಗೂ ವರ್ಗಾವಣೆ ಮಾಡುತ್ತಾ ಬರಲಾಗಿದೆ, ಆದರೆ 20ನೇ ಕಂತಿನ ಹಣ ಇಷ್ಟೊತ್ತಿಗೆ ಜಮಾ ಆಗಬೇಕಾಗಿತ್ತು, ಹೌದು ಸ್ನೇಹಿತರೆ ಕಳೆದ ಫೆಬ್ರವರಿ ತಿಂಗಳಲ್ಲಿ 19ನೇ ಕಂತಿನ 2000 ಹಣ ಜಮಾ ಆಗಿದೆ ಈಗಾಗಲೇ ನಾಲ್ಕು ತಿಂಗಳಾದರೂ ಇನ್ನೂ ಕೂಡ ಹಣ ಜಮಾ ಆಗಿಲ್ಲ

ಆದ್ದರಿಂದ ರೈತರು ತೀವ್ರ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಬಹುದು ಇದಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಹರದಾಡುತ್ತಿದ್ದು ಈ ಮಾಹಿತಿಯ ಪ್ರಕಾರ ಜೂನ್ ಅಂತ್ಯದ ಒಳಗಡೆ ಪಿಎಂ ಕಿಸಾನ್ 20ನೇ ಕಂತಿನ 2000 ಹಣ ಜಮಾ ಆಗಬೇಕು ಆದರೆ ಜುಲೈ ಮೊದಲ ವಾರದಲ್ಲಿ ಈ ಯೋಜನೆಯ 20ನೇ ಕಂತಿನ ಹಣ ಜಮಾ ಆಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ,
ಆದ್ದರಿಂದ ರೈತರು ಪಿಎಂ ಕಿಸಾನ್ 20ನೇ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ಪಿಎಂ ಕಿಸಾನ್ ಅರ್ಜಿಯ ekyc ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ekyc, ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು, ಇದರ ಜೊತೆಗೆ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಇದೀಗ ರೈತರಿಗೆ ಆದೇಶ ಮಾಡಿದೆ ಮತ್ತು ಈ ಬಗ್ಗೆ ತನ್ನ (pm kisan) ಅಧಿಕೃತ ವೆಬ್ಸೈಟ್ನಲ್ಲಿ ನಿಖರ ಮಾಹಿತಿ ನೀಡಿದೆ
ಆದ್ದರಿಂದ ರೈತರು ನೀವು ಇನ್ನೂ ಕೆವೈಸಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಿಲ್ಲ ಅಂದರೆ ನಿಮಗೆ 20ನೇ ಕಂತಿನ ಹಣ ಬರುವುದಿಲ್ಲ ಹಾಗಾಗಿ ಕೂಡಲೇ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ekyc ಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ekyc ಮತ್ತು ಆಧಾರ್ ಕಾರ್ಡ್ ಲಿಂಕ್ ಎಲ್ಲಾ ಕೆಲಸವನ್ನು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಬೇಗ ಪೂರ್ಣಗೊಳಿಸಿ
ಪಿಎಂ ಕಿಸಾನ್ 20ನೇ ಕಂತಿನ ಹಣ ಯಾವಾಗ ಬಿಡುಗಡ ಆಗಬಹುದು..?
ಹೌದು ಸ್ನೇಹಿತರೆ ಕೆಲವೊಂದು ಮಾಧ್ಯಮಗಳ ಪ್ರಕಾರ ಪಿಎಂ ಕಿಸಾನ್ 20ನೇ ಕಂತಿನ ರೂ.2000 ಹಣ ಜುಲೈ ಮೊದಲ ವಾರದಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಘೋಷಣೆ ಮಾಡಿಲ್ಲ,
ಆದ್ದರಿಂದ ನಾವು ಹಣ ಬಿಡುಗಡೆಗೊಂಡ ನಂತರ ಇನ್ನೊಂದು ಲೇಖನಿಯ ಮೂಲಕ ನಿಮಗೆ ಮಾಹಿತಿ ತಿಳಿಸುತ್ತೇವೆ. ಅಲ್ಲಿವರೆಗೂ ನೀವು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಈ ಕೆವೈಸಿ ಹಾಗೂ ಅರ್ಜಿ ಆಗಿದೆ ಎಂಬ ಮಾಹಿತಿ ಚೆಕ್ ಮಾಡಿಕೊಳ್ಳಿ.
ಇದರ ಜೊತೆಗೆ ಪಿಎಮ್ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ 20ನೇ ಕಂತಿನ ಹಣ ಬಿಡುಗಡೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವೋ ಎಂಬ ಮಾಹಿತಿ ತಿಳಿದುಕೊಳ್ಳಿ
ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನಿಯನ್ನು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ
4 thoughts on “PM Kisan 20Th Instalment: ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ₹2000 ಹಣ ಈ ದಿನ ಬಿಡುಗಡೆ! ರೈತರು ಕಡ್ಡಾಯವಾಗಿ ಈ ಕೆಲಸ ಮಾಡಿ”