pm kisan 20th installment release – ಪಿಎಂ ಕಿಸಾನ್ 20ನೇ ಕಂತಿನ 2000 ಹಣ ಬಿಡುಗಡೆ ಈ ರೀತಿ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ 2000 ಹಣ ಬಿಡುಗಡೆಗೆ ಸಂಬಂಧಿಸಿದಂತೆ ದಿನಾಂಕ ಹಾಗೂ ಸಮಯ ಪ್ರಕಟಣೆ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಹಣ ಬಿಡುಗಡೆಯಾದ ನಂತರ ಯಾವ ರೀತಿ ಹಣದ ಸ್ಟೇಟಸ್ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಪಿಎಂ ಕಿಸನ್ ಯೋಜನೆ (pm kisan 20th installment release)..?
ಸ್ನೇಹಿತರೆ ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ವರ್ಷಕ್ಕೆ ಆರು ಸಾವಿರ ಹಣವನ್ನು ರೈತರಿಗೆ ಮೂರು ಕಂತಿನ ರೂಪದಲ್ಲಿ ಈ ಯೋಜನೆಯ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ..! ಹೌದು ಸ್ನೇಹಿತರೆ, ರೈತರು ಇಲ್ಲಿವರೆಗೂ ಈ ಯೋಜನೆ ಮೂಲಕ 19ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಹಾಗೂ 20ನೇ ಕಂತಿನ ಹಣ ನಿರೀಕ್ಷೆಯಲ್ಲಿ ಇದ್ದಾರೆ. ಇದೀಗ 20ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಬಂದಿದೆ ಇದರ ಬಗ್ಗೆ ನಾವು ಲೇಖನೆಯ ಮುಂದೆ ಮಾಹಿತಿ ತಿಳಿಸುತ್ತೇವೆ

ಹೌದು ಸ್ನೇಹಿತರೆ, ರೈತರಿಗೆ ಬಿತ್ತನೆ ಸಂಧರ್ಭದಲ್ಲಿ ಹಾಗೂ ರಸಗೊಬ್ಬರ ಮತ್ತು ಇತರ ಸಣ್ಣಪುಟ್ಟ ಖರ್ಚುಗಳಿಗೆ ನೆರವು ನೀಡುವ ಉದ್ದೇಶದಿಂದ ಹಣ ಹಂತ ಹಂತವಾಗಿ ಮೂರು ಕಂತಿನ ರೂಪದಲ್ಲಿ ಪ್ರತಿ ಕಂತಿಗೆ ರೂ.2000 ಅಂತೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಇದೀಗ 20ನೇ ಕಂತಿನ ಹಣ ವರ್ಗಾವಣೆ ಮಾಡುವ ದಿನಾಂಕ ಹಾಗೂ ಸಮಯ ನಿಗದಿ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ನೀಡಿದ್ದೇವೆ
ಪಿಎಂ ಕಿಸಾನ್ 20ನೇ ಕಂತಿನ ಹಣ ಯಾವಾಗ ಬಿಡುಗಡೆ..?
ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಕೃಷಿ ಸಚಿವಾಲಯದಿಂದ ಅಧಿಕೃತ ಮಾಹಿತಿ ಪ್ರಕಟಣೆ ಮಾಡಲಾಗಿದೆ.! ಕೃಷಿ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಪಿಎಂ ಕಿಸಾನ್ 20ನೇ ಕಂತಿನ 2000 ಹಣವನ್ನು ದಿನಾಂಕ 2 ಆಗಸ್ಟ್ 2025 ಬೆಳಗ್ಗೆ 11 ಗಂಟೆಯಿಂದ ಬಿಡುಗಡೆ ಮಾಡಲಾಗುತ್ತದೆ ಈ ಹಣವನ್ನು ಸುಮಾರು 9.7 ಕೋಟಿ ರೈತರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ
ಆದ್ದರಿಂದ ನೀವು ಪಿಎಂ ಕಿಸಾನ್ ಯೋಜನೆ ಹಣ ಬಿಡುಗಡೆಯಾದ ನಂತರ ಹಣದ ಸ್ಟೇಟಸ್ ಯಾವ ರೀತಿ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ
ಪಿಎಂ ಕಿಸನ್ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ..?
ಹೌದು ಸ್ನೇಹಿತರೆ ನೀವು ಪಿಎಂ ಕಿಸಾನ್ 20ನೇ ಕಂತಿನ ಹಣದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತಿದ್ದರೆ ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಬೇಕು ನಂತರ ಅಲ್ಲಿ ನೀವು ಕರ್ನಾಟಕ DBT ಸ್ಟೇಟಸ್ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಂತರ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
ನಂತರ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ಅಲ್ಲಿ ನಿಮಗೆ payment ಸ್ಟೇಟಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ನಿಮಗೆ ಪ್ರಧಾನ ಮಂತ್ರಿ ಸನ್ಮಾನ್ ಕಿಸಾನ್ ನಿಧಿ ಕರ್ನಾಟಕ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ನಿಮಗೆ ಇಲ್ಲಿವರೆಗೂ ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತಿನ ಹಣ ಜಮಾ ಆಗಿದೆ ಹಾಗೂ ಈ ಕಿಸಾನ್ ಯೋಜನೆ 20ನೇ ಕಂತಿನ ಹಣ ಜಮಾದ ಬಗ್ಗೆ ಮಾಹಿತಿ ನೋಡಲು ಸಿಗುತ್ತದೆ
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಿಕೊಳ್ಳಬಹುದು