PAN card application : ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್ ಅರ್ಜಿ ಹಾಕುವುದು ಹೇಗೆ ? ಯಾವೆಲ್ಲ ದಾಖಲೆಗಳು ಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ..!
PAN card application :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ. ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಈ ಒಂದು ಲೇಖನದಲ್ಲಿ ನೀವು ಕೇವಲ ಆಧಾರ್ ಕಾರ್ಡ್ ಮತ್ತು ಇಮೇಲ್ ಐಡಿ ಮುಖಾಂತರ 30 ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಲ್ಲಿಯೇ ಹೊಸ ಪ್ಯಾನ್ ಕಾರ್ಡ್ ಹೇಗೆ ಪಡೆದುಕೊಳ್ಳಬಹುದು ಅನ್ನುವುದರ ಸ್ಟೆಪ್ ಬೈ ಸ್ಟೆಪ್ ಮಾಹಿತಿ ವಿಸ್ತಾರವಾಗಿ ತಿಳಿಸಿಕೊಡಲಾಗಿದೆ ಪ್ಯಾನ್ ಕಾರ್ಡ್ ಇಲ್ಲದೆ ಇರುವವರು ಈ ಕೂಡಲೇ ಅರ್ಜಿ ಹಾಕಲು ಯೋಚಿಸುತ್ತಿದ್ದೀರಾ ಈ ಲೇಖನವನ್ನು ಪೂರ್ತಿಯಾಗಿ ನೋಡಿಕೊಂಡು ಈ ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
ಸ್ನೇಹಿತರೆ ಕೇಂದ್ರ ಸರ್ಕಾರವು ಪಾನ್ ಕಾರ್ಡ್ ನ ಭದ್ರತೆಯನ್ನು ಮತ್ತು ಪಾನ್ ಕಾರ್ಡ್ ಹೊಡೆಯುವ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ PAN 2.0 ಎಂಬ ಹೊಸ ಯೋಜನೆಯನ್ನು ಜಾರಿ ತಂದಿದೆ ಈ ಯೋಜನೆಯ ಪ್ರಕಾರ ಈ ಹಿಂದೆ ಪ್ಯಾನ್ ಕಾರ್ಡ್ ಪಡೆದಿರುವವರು ಅವರ ಕಾರ್ಡ್ ಗಳ ಮೇಲೆ QR ಕೋಡ್ ಇಲ್ಲದಿದ್ದರೆ ಇನ್ನು ಮುಂದೆ ಭಯಪಡಬೇಕಿಲ್ಲ ಏಕೆಂದರೆ ಈ ಯೋಜನೆ ಅಡಿಯಲ್ಲಿ ಇಂತಹ QR ಕೋಡ್ ಇಲ್ಲದೆ ಇರುವ ಎಲ್ಲಾ ಸರಿಯಾಗಿ ಹೊಂದಿದ ಪ್ಯಾನ್ ಕಾರ್ಡ್ ಗಳು ಮಾನ್ಯವಾಗಿರುತ್ತವೆ ಎಂದು ತಿಳಿಸಲಾಗಿದೆ ಅಷ್ಟೇ ಅಲ್ಲದೆ ಈ ಯೋಜನೆಯ ಮೂಲಕ ಪ್ಯಾನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಪ್ಯಾನ್ ಕಾರ್ಡ್ ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಯಬಹುದು. ಈ ಯೋಜನೆಯಲ್ಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸುತ್ತೇವೆ ಯಾವುದೇ ಶುಲ್ಕವಿಲ್ಲದೆ ಇ-ಮೇಲ್ ಮೂಲಕ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು ಆದರೆ ನಿಮಗೆ ಭೌತಿಕ ಕಾರ್ಡ್ ಬೇಕಾದರೆ ರೂ.50ಯನ್ನು ನೀಡಬೇಕಾಗುತ್ತದೆ

ಗೆಳೆಯರೇ ಹೊಸ ಪ್ಯಾನ್ ಕಾರ್ಡ್ ಅಥವಾ ತಿದ್ದುಪಡಿ ಮಾಡಿಕೊಳ್ಳಲು ಯಾವ ವೆಬ್ಸೈಟ್ ಬಳಸಬೇಕು ಮತ್ತು ವೆಬ್ಸೈಟ್ನ ಲಿಂಕ್ ಯಾವುದು ಎಂದು ಹಾಗೂ ಹೇಗೆ ಅಂತ ಹಂತವಾಗಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವುದರ ಕುರಿತು ಸ್ಟೆಪ್ ಬೈ ಸ್ಟೆಪ್ ಇಲ್ಲಿ ವಿವರಣೆ ಮಾಡಲಾಗಿದೆ. ಅದನ್ನು ಓದಿಕೊಂಡು ಪ್ರತಿಯೊಂದು ಸ್ಟೆಪ್ಗಳನ್ನು ಮುಂದುವರಿಸಿ ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
(PAN card application) ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ..?
ಗೆಳೆಯರೇ ನೀವು ಹೊಸ ಪ್ಯಾನ್ ಕಾರ್ಡ್ಗಳನ್ನು ಹಲವಾರು ವೆಬ್ಸೈಟ್ ಅಥವಾ ಹಲವಾರು ವಿಧಗಳಲ್ಲಿ ಪಡೆದುಕೊಳ್ಳಬಹುದು ಆದರೆ ನಾವು ನಿಮಗೆ ಇಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಎರಡು ವೆಬ್ಸೈಟ್ಗಳು ಮುಖಾಂತರ ಹೇಗೆ ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಹಾಕಬೇಕು ಅನ್ನೋದನ್ನ ಪ್ರತಿಯೊಂದು ಹಂತಗಳನ್ನು ತಿಳಿಸಲಾಗಿದೆ ಈ ಹಂತಗಳನ್ನು ನೀವು ಬಳಸಿಕೊಂಡು ಕೊಟ್ಟಿರುವ ವೆಬ್ಸೈಟ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್ ಅರ್ಜಿ ಹಾಕಬಹುದು.
ಪ್ಯಾನ್ ಕಾರ್ಡ್ ಅರ್ಜಿ ಹಾಕಲು ಇಲ್ಲಿ ಒತ್ತಿ
NSDL ವೆಬ್ಸೈಟ್ ಮುಖಾಂತರ ಪ್ಯಾನ್ ಕಾರ್ಡ್ ಅರ್ಜಿ (PAN card application)..?
- NSDL ಮುಖಾಂತರ ಅರ್ಜಿ ಹಾಕಿ PAN CARD ಪಡೆಯಬೇಕು ಅಂದರೆ ಈ ಹಂತಗಳನ್ನು ಅನುಸರಿಸಲೇಬೇಕು.
- NSDL PAN ಸರ್ವಿಸ್ ವೆಬ್ಸೈಟ್ ಗೆ ಭೇಟಿ ನೀಡಿ (ಲಿಂಕ್ ಮೇಲೆ ನೀಡಲಾಗಿದೆ)
- ಅಲ್ಲಿ ಪ್ಯಾನ್ ಕಾರ್ಡ್ ಬೇಕಾದವರು ಆಧಾರ್ ಕಾರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮುಂದುವರೆಯಿರಿ.
- ನಿಮಗೆ ಅನ್ವಯಿಸುವ ಅಗತ್ಯವಿರುವ ಬಾಕ್ಸ್ ಗಳನ್ನು ಮತ್ತು ವಿವರಗಳನ್ನು ಭರ್ತಿ ಮಾಡಿ
- ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ, ನಂತರ ಪರಿಶೀಲಿಸಿ
- ನಿನ್ನ ಎಲ್ಲಾ ಮಾಹಿತಿಗಳಿಗೆ ಒಪ್ಪಿಕೊಳ್ಳುತ್ತೇನೆ ಅಥವಾ accept ಅಲ್ವಾ ಬಾಕ್ಸ್ ಮೇಲೆ ಒತ್ತಿ ಅರ್ಜಿ ಪೂರ್ಣಗೊಳಿಸಿ.
- ಅರ್ಜಿ ಮುಗಿದ 30 ನಿಮಿಷಗಳ ನಂತರ ನೀವು ನೀಡಿದ ಇಮೇಲ್ ಐಡಿಗೆ PAN CARD MAIL ಮೂಲಕ ಕಳಿಸಲಾಗುತ್ತದೆ.
- ನಿಮಗೆ ಭೌತಿಕವಾದ ಅಂದರೆ ಪ್ಯಾನ್ ಕಾರ್ಡ್ ಹಾರ್ಡ್ ಕಾಪಿ ಬೇಕಾದರೆ ರೂ. 50 ಗಳನ್ನು ಪಾವತಿಸಿ.
ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಲು ಇಲ್ಲಿ ಒತ್ತಿ
UTIITSL ವೆಬ್ಸೈಟ್ ಮುಖಾಂತರ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?
- ಮೊದಲು UTIITSL ವೆಬ್ಸೈಟ್ನ ಲಿಂಕ್ ಮೇಲೆ ಕ್ಲಿಕ್ ಮಾಡಿ. ವೆಬ್ ಸೈಟಿಗೆ ಭೇಟಿ ನೀಡಿ
- ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ನೀಡಿದ ಕ್ಯಾಪ್ಚ ಎಂಟರ್ ಮಾಡಿ ಫ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ
- ನೀವು ನವೀಕರಿಸಿದ ಇಮೇಲ್ ಐಡಿಗೆ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತದೆ
ಸ್ನೇಹಿತರೆ ಎನ್ ಎಸ್ ಡಿ ಎಲ್ ವೆಬ್ಸೈಟ್ ಮುಖಾಂತರ ಹೊಸ ಪ್ಯಾನ್ ಕಾರ್ಡ್ ಅರ್ಜಿ ಹೇಗೆ ಹಾಕುವುದು ಮತ್ತು UTIITSL ವೆಬ್ಸೈಟ್ ಮುಖಾಂತರ ಹೇಗೆ ನಿಮ್ಮ ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡುವುದು ಅನ್ನುವ ಕುರಿತು ಈ ಲೇಖನದ ಮೂಲಕ ನಿಮಗೆ ಸಂಪೂರ್ಣ ಮಾಹಿತಿ ದೊರಕಿದೆ ಎಂದು ಭಾವಿಸುತ್ತೇನೆ.
ಸ್ನೇಹಿತರೆ ಇದೇ ತರಹದ ಹೆಚ್ಚಿನ ಸುದ್ದಿ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಸೇರಿಕೊಳ್ಳಿ… ದಿನನಿತ್ಯದ ಆಕಾಶಗಳನ್ನು ಪಡೆದುಕೊಳ್ಳಿ.