Mudra loan: ಅತಿ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ, ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ

Mudra loan: ಅತಿ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ, ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರವು 2015 ಏಪ್ರಿಲ್ 8 ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಗರಿಷ್ಠ 20 ಲಕ್ಷ ರೂಪಾಯಿ ಇವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ

ರೇಷನ್ ಕಾರ್ಡ್ ಇದ್ದವರಿಗೆ ಆಹಾರ ಇಲಾಖೆ ಕಡೆಯಿಂದ ಎರಡು ಹೊಸ ರೂಲ್ಸ್ ಬಿಡುಗಡೆ.! ರೇಷನ್ ಕಾರ್ಡ್ ಇದ್ದವರು ತಪ್ಪದೆ ಈ ಮಾಹಿತಿ ನೋಡಿ

 

ಪ್ರಧಾನ ಮಂತ್ರಿ ಮುದ್ರಾ ಯೋಜನೆ (Mudra loan)..?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಸಣ್ಣ ಉದ್ಯಮಿಗಳಿಗೆ ಹಾಗೂ ಕೃಷಿಯ ತರ ಸಣ್ಣಪುಟ್ಟ ಸೂಕ್ಷ್ಮ ಉದ್ಯಮಿಗಳಿಗೆ ಮತ್ತು ಸ್ವಂತ ಉದ್ಯೋಗ ಪ್ರಾರಂಭಿಸುವಂಥವರಿಗೆ ಹಾಗೂ ಸ್ವಂತ ಬಿಜಿನೆಸ್ ಮಾಡುತ್ತಿರುವಂತ ಉದ್ಯಮಿಗಳಿಗೆ ಈ ಯೋಜನೆ ಅಡಿಯಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಈ ಒಂದು ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ.!

Mudra loan
Mudra loan

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ನಮ್ಮ ಭಾರತ ದೇಶದಲ್ಲಿ ಹೊಸ ಉದ್ಯಮಿಗಳಿಗೆ ಹಾಗೂ ಹೊಸದಾಗಿ ಬಿಸಿನೆಸ್ ಮಾಡಲು ಬಯಸುವಂತಹ ಜನರಿಗೆ ಮತ್ತು ಸಣ್ಣಪುಟ್ಟ ಸಂಸ್ಥೆಗಳಿಗೆ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಸಣ್ಣ ಉದ್ಯಮಗಳು ಮಾಡಲು ಬಯಸುವಂತಹ ಜನರಿಗೆ ಅಂಗಡಿ ಮಾಲೀಕರಿಗೆ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಮುಂತಾದ ಜನರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಈ ಒಂದು ಮುದ್ರಾ ಯೋಜನೆ ಅಡಿಯಲ್ಲಿ ಗರಿಷ್ಠ 20 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ

 

 

ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಯಾರು ಅರ್ಜಿ ಸಲ್ಲಿಸಬಹುದು (Mudra loan)…?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ನಮ್ಮ ಭಾರತ ದೇಶದಲ್ಲಿ ಇರುವಂತ ವಿವಿಧ ಸಣ್ಣಪುಟ್ಟ ಉದ್ಯಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇರುವಂತ ಜನರಿಗೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ

ಚಿಲ್ಲರೆ ವ್ಯಾಪಾರಿಗಳು:- ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರು ಮತ್ತು ಮಾರಾಟಗಾರರು ಅರ್ಜಿ ಸಲ್ಲಿಸಬಹುದು

ಕೃಷಿಯೇತರ ಕೈಗಾರಿಕೆಗಳು:- ಹೌದು ಸ್ನೇಹಿತರೆ ಆಹಾರ ಉತ್ಪಾದನೆ ಮಾಡುವಂತಹ ಸಣ್ಣಪುಟ್ಟ ಸಂಸ್ಥೆಗಳು ಹಾಗೂ ಕರಕುಶಲ ಸಂಸ್ಥೆಗಳು ಮತ್ತು ಸಣ್ಣ ಪ್ರಮಾಣದಲ್ಲಿ ವಸ್ತುಗಳನ್ನು ತಯಾರಿಕೆ ಮಾಡುತ್ತಿರುವ ಅಂತ ಸಂಸ್ಥೆಗಳು ಹಾಗೂ ಉತ್ಪಾದನೆ ಮಾಡುತ್ತಿರುವಂತಹ ಸಂಸ್ಥೆಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now       

ಸಾರಿಗೆ ವಲಯ:- ಟ್ರಕ್ ಮಾಲೀಕರು ಹಾಗೂ ವಾಹನ ದುರಸ್ತಿ ಚಟುವಟಿಕೆಯಲ್ಲಿ ತೊಡಗಿಕೊಂಡಂತ ಜನರು ಮತ್ತು ಸಣ್ಣಪುಟ್ಟ ಗ್ಯಾರೇಜ್ ನಡೆಸುತ್ತಿರುವವರು ಹಾಗೂ ಇತರ ಸಣ್ಣಪುಟ್ಟ ರಿಪೇರಿ ಸರ್ವಿಸ್ ಮಾಡುತ್ತಿರುವವರು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ

ಇತರ ವರ್ಗದವರು:- ಸ್ನೇಹಿತರ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲದ ಅವಶ್ಯಕತೆ ಇರುವಂತವರಿಗೆ ಹಾಗೂ ಯಾವುದಾದರು ಸ್ವಂತ ಉದ್ಯೋಗ ಮಾಡುತ್ತಿರುವವರು ಅಥವಾ ಈಗಾಗಲೇ ಉದ್ಯೋಗ ಮಾಡುತ್ತಿರುವವರು ಮತ್ತು ಇತರ ಸ್ವಂತ ಸಣ್ಣಪುಟ್ಟ ಕೈಗಾರಿಕೆ ಸ್ಥಾಪನೆ ಮಾಡಲು ಬಯಸುವಂಥವರಿಗೆ ಈ ಒಂದು ಯೋಜನೆ ಅಡಿಯಲ್ಲಿ ಸಾಲ ಸಿಗುತ್ತದೆ ಹಾಗಾಗಿ ಹೆಚ್ಚಿನ ವಿವರ ಪಡೆಯಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ

ಸ್ವಯಂ ಉದ್ಯೋಗಿಗಳು:- ಮುದ್ರಾ ಯೋಜನೆ ಅಡಿಯಲ್ಲಿ ಸ್ವಯಂ ಉದ್ಯೋಗ ಮಾಡಲು ಬಯಸುವಂತಹ ಹಾಗೂ ಈಗಾಗಲೇ ಸ್ವಯಂ ಉದ್ಯೋಗ ಮಾಡುತ್ತಿದ್ದವರು ಹಾಗೂ ಸೇವಾ ಘಟಕಗಳಲ್ಲಿ ತೊಡಗಿ ಕೊಂಡಿರುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು

ಕೃಷಿ ಸಂಬಂಧಿತ ಚಟುವಟಿಕೆಗಳು:- ಹೌದು ಸ್ನೇಹಿತರೆ ಕುರಿ ಸಾಗಾಣಿಕೆ ಹಾಗೂ ಜೇನು ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಮುಂತಾದ ಚಟುವಟಿಕೆಗಳಲ್ಲಿ ಈಗ ತೊಡಗಿಸಿಕೊಂಡಂತವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ಸಾಲದ ವಿವರಗಳು..?

ಹೌದು ಸ್ನೇಹಿತರೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಅಗತ್ಯಕ್ಕೆ ತಕ್ಕಂತೆ ವಿವಿಧ ರೂಪದಲ್ಲಿ ಸಾಲ ನೀಡಲಾಗುತ್ತಿದೆ ಮತ್ತು ಸಾಲದ ವಿಧಾನವನ್ನು ವಿಂಗಡಿಸಲಾಗಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ನೀಡಿದ್ದೇವೆ

ಶಿಶು ಸಾಲ:- ಸ್ನೇಹಿತರ ₹50,000 ರೂಪಾಯಿವರೆಗೆ ಸಣ್ಣಪುಟ್ಟ ಸಾಲ ಪಡೆಯಲು ಬಯಸುವಂಥವರಿಗೆ ಈ ಮುದ್ರಾ ಯೋಜನೆ ಅಡಿಯಲ್ಲಿ ಶಿಶು ವಿಭಾಗದಲ್ಲಿ ಶೀಘ್ರದಲ್ಲೇ ಸಾಲ ಒದಗಿಸಲಾಗುತ್ತದೆ

ಕಿಶೋರ್:- ಸ್ನೇಹಿತರೆ ಈ ಒಂದು ಕಿಶೋರ್ ವಿಭಾಗದಲ್ಲಿ 50,001 ರಿಂದ ₹5 ಲಕ್ಷದವರೆಗೆ ಸಾಲವನ್ನು ಪಡೆಯಲು ಅರ್ಜಿದಾರಿಗೆ ಅವಕಾಶವಿರುತ್ತದೆ ಹಾಗಾಗಿ ಈ ಒಂದು ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಸಾಧಾರಣ ಮಟ್ಟದ ಉದ್ಯೋಗ ಮಾಡುತ್ತಿರುವವರು ಹಾಗೂ ವ್ಯವಹಾರ ಮಾಡುತ್ತಿರುವಂತಹವರು ಅರ್ಜಿ ಸಲ್ಲಿಸಬಹುದು

ತರುಣ್ :- ಸ್ನೇಹಿತರೆ ತರುಣ್ ವಿಭಾಗದಲ್ಲಿ 5 ಲಕ್ಷ ರೂಪಾಯಿಯಿಂದ ಗರಿಷ್ಠ 20 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು ಹೌದು ಸ್ನೇಹಿತರೆ ಈ ಹಿಂದೆ ಈ ವಿಭಾಗದಲ್ಲಿ 10 ಲಕ್ಷ ರೂಪಾಯಿವರೆಗೆ ಮಾತ್ರ ಅವಕಾಶವಿತ್ತು. ಆದರೆ ಕೇಂದ್ರ ಸರ್ಕಾರ 2024ರ ಬಜೆಟ್ ವೇಳೆ ಈ ಸಾಲದ ಮಿತಿಯನ್ನು 20 ಲಕ್ಷ ರೂಪಾಯಿವರೆಗೆ ಏರಿಸಲಾಗಿದೆ

 

ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರಿಗೆ ಸರಕಾರಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತದೆ ಹಾಗಾಗಿ ನೀವು ಈ ಒಂದು ಸಾಲದ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವಂತ ಲಿಂಕ್ ನಾವು ಕೆಳಗಡೆ ನೀಡಿದ್ದೇವೆ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://www.mudra.org.in/

 

ಸ್ನೇಹಿತರೆ ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ದೊರೆಯುವಂತ ವಿವಿಧ ಸಾಲದ ಬಗ್ಗೆ ಮಾಹಿತಿ ಹಾಗೂ ಹೆಚ್ಚಿನ ವಿವರವನ್ನು ಈ ಒಂದು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪಡೆದುಕೊಳ್ಳಿ ಹಾಗೂ ಸಾಲಕ್ಕೆ ಅಲ್ಲೇ ಅರ್ಜಿ ಸಲ್ಲಿಸಿ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು

Leave a Comment