“kotak bank scholarship eligibility” ಕೋಟಕ್ ಬ್ಯಾಂಕ್ ವತಿಯಿಂದ 1.50 ಲಕ್ಷದವರೆಗೆ ವಿದ್ಯಾರ್ಥಿ (Scholarship) ವೇತನ ಸಿಗುತ್ತೆ.! ಈ ರೀತಿ ಅರ್ಜಿ ಸಲ್ಲಿಸಿ
ಕೋಟಕ್ ಬ್ಯಾಂಕ್ ವತಿಯಿಂದ ವಿದ್ಯಾರ್ಥಿನಿಯರಿಗೆ ಇದೀಗ ಸಿಹಿ ಸುದ್ದಿ.! ಹೌದು ಸ್ನೇಹಿತರೆ ಕೋಟಕ್ ಮಹೇಂದ್ರ ಗ್ರೂಪ್ ಇದೀಗ ಕೋಟಕ್ ಫೌಂಡೇಶನ್ ವತಿಯಿಂದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಹಾಗೂ ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆ ಜಾರಿಗೆ ತಂದಿದೆ.
ಈ ಕೋಟ ಕನ್ಯಾ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿನಿಯರು ಬರೋಬ್ಬರಿ 1,50,000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ. ಹಾಗಾಗಿ ಈ ಒಂದು ವಿದ್ಯಾರ್ಥಿ (student scholarship) ವೇತನದ ಬಗ್ಗೆ ಈ ಲೇಖನ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆ 2025.?
ಕೋಟಕ್ ಮಹೀಂದ್ರಾ ಗ್ರೂಪ್ ಇದೀಗ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಹಾಗೂ ಹಿಂದುಳಿದ ವರ್ಗದಲ್ಲಿ ಇರುವಂತ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಯನ್ನು, ಕೋಟಕ್ ಮಹೀಂದ್ರಾ ಗ್ರೂಪ್ ಅಡಿಯಲ್ಲಿ ಬರುವಂತಹ ಎಜುಕೇಶನ್ ಫೌಂಡೇಶನ್ ವತಿಯಿಂದ ಈ ಒಂದು ಸ್ಕಾಲರ್ಶಿಪ್ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ

ಈ ಸ್ಕಾಲರ್ಶಿಪ್ ಯೋಜನೆ ಮೂಲಕ ವಿದ್ಯಾರ್ಥಿನಿಯರು ಬರೋಬ್ಬರಿ 1,50,000 ಹಣವನ್ನು ಪಡೆಯಬಹುದು ಹಾಗಾಗಿ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದರೆ https://www.buddy4study.com/ ಈ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರ ವಿವರಗಳ ಬಗ್ಗೆ ಮಾಹಿತಿ ಕೆಳಗಡೆ ನೀಡಿದ್ದೇವೆ
ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು.?
- ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಇಂದಿನ ತರಗತಿಯಲ್ಲಿ ಅಂದರೆ ದ್ವಿತೀಯ ಪಿಯುಸಿ ಕನಿಷ್ಠ 75% ಗಿಂತ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿನಿಯರು ಪಡೆದಿರಬೇಕು
- ಕೋಟ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ
- ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರು ನಮ್ಮ ಭಾರತ ದೇಶದಲ್ಲಿ ವಾಸ ಮಾಡುತ್ತಿರಬೇಕು ಮತ್ತು ಭಾರತದ ಪ್ರಜೆಯಾಗಿರಬೇಕು
- ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಕುಟುಂಬದ ಅಥವಾ ಪೋಷಕರ ಆದಾಯ 6 ಲಕ್ಷ ರೂಪಾಯಿಗಿಂತ ಕಡಿಮೆ ಹೊಂದಿರಬೇಕಾಗುತ್ತದೆ
- NAAC/NIRF ಸಂಸ್ಥೆಗಳಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ, ಇಂಟಿಗ್ರೇಟೆಡ್ ಎಲ್ ಎಲ್ ಬಿ, ಎಂಬಿಬಿಎಸ್ (MBBS), ಇಂಜಿನಿಯರಿಂಗ್, ಬಿ ಎಸ್ ಮತ್ತು ಎಂ ಎಸ್ (BS/MS), ಹಾಗೂ ಇತರ ಪದವಿ ಕೋರ್ಸ್ ಗಳಲ್ಲಿ ಪ್ರಸ್ತುತ ವರ್ಷ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
ಕೋಟ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅಗತ್ಯ ದಾಖಲಾತಿಗಳು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಕಾಲೇಜು ಪ್ರವೇಶ ಪ್ರಮಾಣ ಪತ್ರ
- ಕಾಲೇಜು ಅರ್ಜಿ ಶುಲ್ಕ
- ಇಂದಿನ ಎಲ್ಲಾ ತರಗತಿ ಅಂಕಪಟ್ಟಿಗಳು
- ಇತ್ತೀಚಿನ ಫೋಟೋಸ್
- ಇತರೆ ಅಗತ್ಯ ದಾಖಲಾತಿಗಳು
ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿ 1,50,000 ವರೆಗೆ ಸ್ಕಾಲರ್ಶಿಪ್ ಪಡೆಯಲು ನಿಮಗೆ ಆಸಕ್ತಿ ಇದ್ದರೆ, ಮೊದಲು ಈ ಸ್ಕಾಲರ್ಶಿಪ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿ ನಿಮಗೆ ಪ್ರತಿದಿನ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ
ದಿನ ಭವಿಷ್ಯ: 11 ಜುಲೈ 2025 ಈ ರಾಶಿಯವರಿಗೆ ಗಜಲಕ್ಷ್ಮಿ ಯೋಗ | Today horoscope
2 thoughts on “kotak bank scholarship eligibility: ಕೋಟಕ್ ಬ್ಯಾಂಕ್ ವತಿಯಿಂದ 1.50 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ.! ಈ ರೀತಿ ಅರ್ಜಿ ಸಲ್ಲಿಸಿ”