Karnataka budget 2025 news:- ಕರ್ನಾಟಕ ಬಜೆಟ್ 2025 ಹೈಲೈಟ್ಸ್.! ಯಾವ ಕ್ಷೇತ್ರಗಳಿಗೆ ಎಷ್ಟು ಕೊಡುಗೆ
ನಾವು ಈ ಒಂದು ಲೇಖನ ಮೂಲಕ ಕರ್ನಾಟಕದ 2025 ಬಜೆಟ್ ಹೈಲೈಟ್ಸ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗೂ ಈ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಕೊಡುಗೆ ನೀಡಲಾಗಿದೆ ಹಾಗೂ ಈ ಬಜೆಟ್ ನ ಗಾತ್ರವೆಷ್ಟು ಮತ್ತು ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಮೀಸಲಿಡಲಾಗಿದೆ ಹಾಗೂ ಗ್ಯಾರೆಂಟಿ ಯೋಜನೆ ಗಳಿಗೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಕರ್ನಾಟಕ ಬಜೆಟ್ 2025 (Karnataka budget 2025 news)..?
ಸ್ನೇಹಿತರೆ ಇವತ್ತು ಸಿಎಂ ಸಿದ್ದರಾಮಯ್ಯನವರು 2025 ಮತ್ತು 26 ನೇ ಸಾಲಿನ ಬಜೆಟ್ ಮಂಡನೆಯನ್ನು ಮಾಡಿದ್ದಾರೆ.! ಈ ಬಜೆಟ್ ಮಂಡನೆಯ ಅವಧಿ 3 ಗಂಟೆ 30 ನಿಮಿಷ ಭಾಷಣ ಮಾಡುವುದರ ಮೂಲಕ ಸುಮಾರು 178 ಪುಟಗಳ ಯೋಜನೆಗಳನ್ನು ಓದಿ ಹೊಸ ದಾಖಲೆಯನ್ನು ಸಿಎಂ ಸಿದ್ದರಾಮಯ್ಯನವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳಬಹುದು.! ಹೌದು ಸ್ನೇಹಿತರೆ ಸತತ 16ನೇ ಬಜೆಟ್ ಮಂಡನೆ ಮಾಡಿದ್ದಾರೆ ಹಾಗಾಗಿ ಇದು ಹೊಸ ದಾಖಲೆ ಸಿಎಂ ಸಿದ್ದರಾಮಯ್ಯನವರು ಸೃಷ್ಟಿ ಮಾಡಿದ್ದಾರೆ ಹಾಗಾಗಿ ಈ ಬಜೆಟ್ ನಲ್ಲಿ ಎಷ್ಟು ಅನುದಾನಗಳು ಯಾವ ವಲಯಕ್ಕೆ ಮೀಸಲಾಗಿಡಲಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ

ಕರ್ನಾಟಕ ಬಜೆಟ್ 2025 ಪ್ರಮುಖ ಅಂಶಗಳು (Karnataka budget 2025 news).?
- ಬಜೆಟ್ ಗಾತ್ರ ಒಟ್ಟು 4,09,549 ಕೋಟಿ ರೂಪಾಯಿ ದಾಖಲೆಯ ಗಾತ್ರದ ಬಜೆಟ್ ಇದಾಗಿದೆ
- ಈ ಬಜೆಟ್ ನಲ್ಲಿ 1,16,000 ಕೋಟಿ ರೂಪಾಯಿ ಸಾಲ ಪಡೆಯಲು ಸರಕಾರ ಮುಂದಾಗಿದೆ ಇದರಿಂದ 2025 ಮತ್ತು 26ನೇ ಸಾಲಿನ ಅಂತ್ಯಕ್ಕೆ 7,64,655 ಕೋಟಿ ರೂಪಾಯಿ ಸಾಲದ ಮೊತ್ತದ ಏರಿಕೆ ಮಾಡಲಾಗಿದೆ
- ಮಹಿಳಾ ಆಯಾಮದಲ್ಲಿ ಬರೋಬ್ಬರಿ 94,804 ಕೋಟಿ ರೂಪಾಯಿ ಅನುದಾನವನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ
- ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಈ ಬಜೆಟ್ ನಲ್ಲಿ 8,000 ಕೋಟಿ ರೂಪಾಯಿ ವೆಚ್ಚ ಘೋಷಣೆ ಮಾಡಲಾಗಿದೆ
- ಎಲ್ಲಾ ಗ್ಯಾರೆಂಟಿ ಯೋಜನೆಗಳಿಗೂ ಕೂಡ ಅನುದಾನ ಮೀಸಲಿಡಲಾಗಿದೆ
ಕೃಷಿ ಕ್ಷೇತ್ರಗಳ ಹೊಸ ಯೋಜನೆಗಳು 2025-26 (Karnataka budget 2025 news).?
- ಕೃಷಿಯಂತ್ರೀಕರಣ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 428 ಕೋಟಿ ರೂಪಾಯಿ ವೆಚ್ಚದಲ್ಲಿ ರೈತರಿಗೆ 50,000 ವರೆಗೆ ಸಹಾಯಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ
- ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗಾಗಿ ರಾಜ್ಯ ಸರಕಾರವು ಕೃಷಿ ಇಲಾಖೆ ಅಡಿಯಲ್ಲಿ ಒಟ್ಟು 1.81 ಲಕ್ಷ ರೈತರಿಗೆ 440 ಕೋಟಿ ರೂಪಾಯಿ ಸಹಾಯಧನ
- ಸಾವಯವ ಮತ್ತು ಶ್ರೀ ಧಾನ್ಯ ಹಬ್ ಗಳ ಸ್ಥಾಪನೆಗಾಗಿ 20 ಕೋಟಿ ರೂಪಾಯಿ ವೆಚ್ಚ ಘೋಷಣೆ ಮಾಡಲಾಗಿದೆ ಹಾಗೂ ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲೂಕನ್ನು ಸಾವಯವ ಕೃಷಿ ತಾಲೂಕು ಮಾಡಲು ಕ್ರಮ ಕೈಗೊಳ್ಳುವುದು
- ರಾಮನಗರ ಮತ್ತು ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಕಾಮಗಾರಿಕೆಗೆ 250 ಕೋಟಿ ರೂಪಾಯಿ ಮೀಸಲು
- ರೇಷ್ಮೆ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 55 ಕೋಟಿ ರೂಪಾಯಿ ಅನುದಾನ
- ಅನುಗ್ರಹ ಯೋಜನೆ ಅಡಿಯಲ್ಲಿ ಪರಿಹಾರದ ಮೊತ್ತವನ್ನು 10 ಸಾವಿರ ರೂಪಾಯಿ ಯಿಂದ ರೂ.15,000 ವರೆಗೆ ಏರಿಕೆ (ಕುರಿ, ಮೇಕೆ ಹಾಗೂ ಎಮ್ಮೆ)
- ರಾಜ್ಯದಲ್ಲಿ ಹೊಸ ಮೀನುಗಾರಿಕಾ ನೀತಿ ಜಾರಿ ಮಾಡಲಾಗಿದೆ
- ಸುಮಾರು 37 ಲಕ್ಷ ರೈತರಿಗೆ 28,000 ಕೋಟಿ ರೂಪಾಯಿ ಈ ಒಂದು ಬಜೆಟ್ ನಲ್ಲಿ ಮೀಸಲಾಗಿ ಇಡಲಾಗಿದೆ
ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಗಳು (Karnataka budget 2025 news).?
- 2500 ಕೋಟಿ ರೂಪಾಯಿ ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದು
- ಬಿಸಿ ಊಟ ತಯಾರು ಮಾಡುವ ಸಿಬ್ಬಂದಿಗಳ ಗೌರವ ಧನವನ್ನು ಒಂದು ಸಾವಿರ ರೂಪಾಯಿಗೆ ಹೆಚ್ಚಳ
- ಬೆಂಗಳೂರು ನಗರದ ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಎಂದು ಮರು ನಾಮಕರಣ
- ಚಿಂತಾಮಣಿ ತಾಲೂಕಿನಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಣೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊಡುಗೆ (Karnataka budget 2025 news).?
- ಬೆಂಗಳೂರು ಮತ್ತು ಉತ್ತರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 150 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 200 ಹಾಸಿಗೆಯನ್ನು ಸುಸಜ್ಜಿತ ಹೊಂದಿದ ಆಸ್ಪತ್ರೆ ನಿರ್ಮಾಣ
- ಪುತ್ತೂರು ತಾಲೂಕು ಆಸ್ಪತ್ರೆಯನ್ನು ಉನ್ನತಿಕರಣ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನಿಯನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಬಂಧುಗಳು ಮತ್ತು ಇತರ ಜನರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಿ
1 thought on “Karnataka budget 2025 news: ಕರ್ನಾಟಕ ಬಜೆಟ್ 2025 ಹೈಲೈಟ್ಸ್.! ಯಾವ ಕ್ಷೇತ್ರಗಳಿಗೆ ಎಷ್ಟು ಕೊಡುಗೆ”