Karnataka 2nd puc results: ದ್ವಿತೀಯ ಪಿಯುಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ.! ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ.! ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಒಂದು ಮಾರ್ಚ್ 2025 ರಿಂದ 20 ಮಾರ್ಚ್ 2025 ರವರೆಗೆ ನಡೆಸಲಾಯಿತು ಮತ್ತು ಈ ಒಂದು ಪರೀಕ್ಷೆಯಲ್ಲಿ 7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಹಾಗಾಗಿ ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಪಲಿತಾಂಶ ಚೆಕ್ ಮಾಡುವ ವಿಧಾನ ಹೇಗೆ ಮತ್ತು ಅಂಕಪಟ್ಟಿ ಡೌನ್ಲೋಡ್ ಮಾಡುವುದು ಹೇಗೆ ಎಂಬುದು ವಿರವನ್ನು ನಾವು ತಿಳಿದುಕೊಳ್ಳೋಣ
ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ಪ್ರಕಟಣೆ (Karnataka 2nd puc results).?
ನಿಮಗೆಲ್ಲರಿಗೂ ಗೊತ್ತಿರುವಂತೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 01 ಮಾರ್ಚ್ 2025 ರಿಂದ 20 ಮಾರ್ಚ್ 2025 ರ ವರೆಗೆ ಪರೀಕ್ಷೆ ನಡೆಸಲಾಯಿತು ಮತ್ತು ಈ ಒಂದು ಪರೀಕ್ಷೆಯಲ್ಲಿ ಸುಮಾರು ಏಳು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ರೆಜಿಸ್ಟರ್ ಆಗಿದ್ದಾರೆ ಮತ್ತು ಇದರಲ್ಲಿ 3,35,468 ಹುಡುಗರು ಪರೀಕ್ಷೆಗೆ ರಜಿಸ್ಟರ್ ಆಗಿದ್ದಾರೆ ಮತ್ತು 3,78,389 ಹುಡುಗಿಯರು ಪರೀಕ್ಷೆಗೆ ರಿಜಿಸ್ಟರ್ ಆಗಿದ್ದಾರೆ ಹಾಗಾಗಿ ಈಗ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಮಾಹಿತಿ ಹಂಚಿಕೊಂಡಿದ್ದು ಒಂದು ಏಪ್ರಿಲ್ 2025 ರಿಂದ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಲಿದೆ ಹಾಗೂ ಮುಂದಿನ ವಾರದಲ್ಲಿ ಬಹುತೇಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡುವ ನಿರೀಕ್ಷೆ ಇದೆ ಎಂದು ಮಾಹಿತಿ ತಿಳಿಸಿದೆ.! ಹೌದು ಸ್ನೇಹಿತರೆ ಏಪ್ರಿಲ್ 11 2025ರ ಒಳಗಡೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಣೆ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ತಿಳಿಸಿದೆ
ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಈ ಒಂದು ಪ್ರಕ್ರಿಯೆ ಈ ಒಂದು ವಾರದ ಒಳಗಡೆ ಮುಗಿಯುತ್ತದೆ ಹಾಗಾಗಿ ನಾವು ಕಳೆದ ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟಣೆಯಾಗಿತ್ತು ಎಂದು ಮಾಹಿತಿ ತಿಳಿಯುವುದಾದರೆ ಏಪ್ರಿಲ್ 10 ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲಾಯಿತು. ಅದೇ ರೀತಿ ಈ ವರ್ಷವೂ ಕೂಡ ಏಪ್ರಿಲ್ 10 ಅಥವಾ 11ನೇ ತಾರೀಖಿನ ಒಳಗಡೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಆಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ದೊರೆತ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಲ್ಲಿ ಮಾಹಿತಿ ಪ್ರಕಟಣೆ ಮಾಡುತ್ತೇವೆ ಹಾಗಾಗಿ ಬೇಗ ಜೈನ್ ಆಗಿ
ದ್ವಿತೀಯ ಪಿಯುಸಿ ಫಲಿತಾಂಶ ನೋಡುವುದು ಹೇಗೆ (Karnataka 2nd puc results).?
ಸ್ನೇಹಿತರೆ ನೀವು ದ್ವಿತೀಯ ಪಿಯುಸಿ ಫಲಿತಾಂಶ ನೋಡಲು ಬಯಸುತ್ತಿದ್ದೀರಾ ಹಾಗಾದರೆ ನೀವು ಕರ್ನಾಟಕ ಸರಕಾರದ ಅಧಿಕೃತ ವೆಬ್ಸೈಟ್ karresults.nic.in ವೆಬ್ ಸೈಟಿಗೆ ಭೇಟಿ ನೀಡಬಹುದು ಅಥವಾ kseab.karnataka.gov.in ವೆಬ್ ಸೈಟಿಗೆ ಭೇಟಿ ನೀಡಿ ಪರೀಕ್ಷೆಯ ಫಲಿತಾಂಶ ಚೆಕ್ ಮಾಡಬಹುದು
- ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ karresults.nic.in ಅಥವಾ kseab.karnataka.gov.in ವೆಬ್ ಸೈಟಿಗೆ ಭೇಟಿ ನೀಡಿ
- ನಂತರ ಅಲ್ಲಿ ಹೋಮ್ ಪೇಜಿನಲ್ಲಿ second puc results 2025 ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ನಂಬರ್ ಅಥವಾ ರಿಜಿಸ್ಟರ್ ನಂಬರ್ ಎಂಟರ್ ಮಾಡಿ
- ನಂತರ ಹುಟ್ಟಿದ ದಿನಾಂಕ ಅಥವಾ ಇತರ ವಿವರಗಳನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಎಲ್ಲಾ ರಿಸಲ್ಟ್ ನಿಮಗೆ ನೋಡಲು ಸಿಗುತ್ತದೆ ಹಾಗೂ ಆ ರಿಸಲ್ಟ್ ನೀವು ಪಿಡಿಎಫ್ ರೂಪದಲ್ಲಿ ಡೌನ್ಲೋಡ್
4 thoughts on “Karnataka 2nd puc results: ದ್ವಿತೀಯ ಪಿಯುಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ.! ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ನೋಡಿ ವಿವರ”