ಗುಪ್ತಚರ ಇಲಾಖೆ – ನಮಸ್ಕಾರ ಸ್ನೇಹಿತರೆ ಗುಪ್ತಚರ ಇಲಾಖೆ ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಭದ್ರತಾ ಸಹಾಯಕ (MT) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನ ಮಾಡಲಾಗಿದೆ ಆಸಕ್ತಿ ಇರುವವರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ನಾವು ಈ ಲೇಖನಯ ಮೂಲಕ ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬ ವಿವರವನ್ನು ತಿಳಿಯೋಣ
ಗುಪ್ತಚರ ಇಲಾಖೆ ಹೊಸ ನೇಮಕಾತಿ..?
ಹೌದು ಗೆಳೆಯರೇ, ಭಾರತದ ಸರಕಾರದ ಅಡಿಯಲ್ಲಿ ಬರುವ ವ್ಯವಹಾರಗಳ ಸಚಿವಾಲಯ ಗುಪ್ತಚರ ಇಲಾಖೆ (intelligence bureau) ಭದ್ರತಾ ಸಹಾಯಕ (motor transport) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ 455 ಹುದ್ದೆಗಳು ಖಾಲಿ ಇದೆ

ಹಾಗಾಗಿ ಆಸಕ್ತಿ ಇರುವವರು 28 ಸೆಪ್ಟೆಂಬರ್ 2025 ರ ಒಳಗಡೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅರ್ಜಿದಾರರು ಕನಿಷ್ಠ ಎಸ್ ಎಸ್ ಎಲ್ ಸಿ ಪಾಸಾದರೆ ಸಾಕು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವಿವರವನ್ನು ಇದೀಗ ತಿಳಿದುಕೊಳ್ಳೋಣ
ಹುದ್ದೆಗಳ ನೇಮಕಾತಿ ವಿವರ (ib security assistant motor transport notification ).?
ನೇಮಕಾತಿ ಸಂಸ್ಥೆ:- ಗುಪ್ತಚರ ಇಲಾಖೆ
ಖಾಲಿ ಹುದ್ದೆಗಳ ಸಂಖ್ಯೆ:- 455 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಹುದ್ದೆಗಳ ವಿವರ:- ಭದ್ರತಾ ಸಹಾಯಕ (MT) ಹುದ್ದೆಗಳು
ಅರ್ಜಿ ಪ್ರಾರಂಭ ದಿನಾಂಕ:- 06/09/2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:- 28/09/2025
ಸಂಬಳ:- ₹21,700 ರಿಂದ ₹69,100 ವರೆಗೆ
ಗುಪ್ತಚರ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇ ತರಗತಿ ಪಾಸ್ ಆಗಿರಬೇಕು ಹಾಗೂ ಮೋಟಾರು ಕಾರು ಚಾಲನ ಪರವಾನಿಗೆ ಹೊಂದಿರಬೇಕು ಅಂತವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು
ವಯೋಮಿತಿ:- ಗುಪ್ತಚರ ಇಲಾಖೆ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು 28 ಸೆಪ್ಟೆಂಬರ್ 2025ರಂತೆ ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ 27 ವರ್ಷ ನಿಗದಿ ಮಾಡಲಾಗಿದೆ ಹಾಗೂ ಮೀಸಲಾತಿ ಆಧಾರದ ಮೇಲೆ ST/SC ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ
ಅರ್ಜಿ ಶುಲ್ಕ:- ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ ೬೫೦ ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಹಾಗೂ ಉಳಿದ ಅಭ್ಯರ್ಥಿಗಳಿಗೆ 550 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ
ಆಯ್ಕೆಯ ವಿಧಾನ:- ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳನ್ನು ಮೊದಲು ಆನ್ಲೈನ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ನಂತರ ಡ್ರೈವಿಂಗ್ ಟೆಸ್ಟ್ ಹಾಗೂ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮುಂತಾದ ವಿಧಾನಗಳನ್ನು ಆಧರಿಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಗುಪ್ತಚರ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಈ 455 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದಾರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮೊದಲು ಈ ಒಂದು ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಎಲ್ಲಾ ಮಾಹಿತಿ ತಿಳಿದುಕೊಂಡು ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ :- ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರ ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಪಡೆದುಕೊಳ್ಳಲು ಆಸಕ್ತಿ ಇದೆಯಾ ಹಾಗಾದ್ರೆ ನೀವು
ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು