ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ ಇದೀಗ ಹೊಸ ಮುನ್ಸೂಚನೆ ಬಿಡುಗಡೆ ಮಾಡಿದ್ದು ಮುಂದಿನ ಒಂದು ವಾರಗಳ ಕಾಲ ಅಂದರೆ ಮೇ 27ನೇ ತಾರೀಕಿನವರೆಗೆ ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ವರದಿ ನೀಡಿದೆ. ಹಾಗೂ ಕೆಲ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಆಗಲಿದೆ ಹಾಗೂ ಯಾವ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನಿಯನ್ನು ಕೊನೆವರೆಗೂ ಓದಿ
ಮುಂದಿನ ಒಂದು ವಾರಗಳವರೆಗೆ ಭರ್ಜರಿ ಮಳೆ ಮುನ್ಸೂಚನೆ..?
ಹೌದು ಸ್ನೇಹಿತರೆ, ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕೊಡಗು ಹಾಸನ ಮತ್ತು ಹಾವೇರಿ ಹಾಗೂ ಇತರ ಜಿಲ್ಲೆಗಳಿಗೆ ಸೇರಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು ಮುಂದಿನ ಒಂದು ವಾರಗಳ ಕಾಲ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ಮಾಹಿತಿ ತಿಳಿಸಿದೆ.
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರುನಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆ ಜೋರಾಗಿ ಬರುತ್ತಿದೆ ಇದರಿಂದ ಅಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಬಹುದು ಹಾಗೂ ಬೆಂಗಳೂರಿನಲ್ಲಿ ಜನರ ಜೀವನ ಇದೀಗ ಹಸ್ತವ್ಯಸ್ತವಾಗಿದೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ ಇಷ್ಟೇ ಅಲ್ಲದೆ ಬೆಂಗಳೂರು ಕೆಲ ನಗರ ಹಾಗೂ ಪ್ರದೇಶಗಳಲ್ಲಿ ವಿಪರೀತ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಹಾಗೂ ಕೆಲ ಮನೆಗಳು ಈಗಾಗಲೇ ಮುಳುಗಡೆಯಾಗಿದ್ದು ಈ ಮಳೆಯಿಂದ ಸುಮಾರು ಮೂರು ಜನರು ಬೆಂಗಳೂರಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಮನೆಗಳ ಮೇಲೆ ಮರ ಬೀಳುವುದು ಹಾಗೂ ವಿದ್ಯುತ್ ತಂತಿ ಕಟ್ಟಾಗುವುದು ಇತರ ಅನೇಕ ಸಮಸ್ಯೆಗಳು ಈ ಮಳೆಯಿಂದ ಉಂಟಾಗಿದೆ ಹಾಗಾಗಿ ಬಿಬಿಎಂಪಿ ಇದೀಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಹಾಗೂ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ
ಹೌದು ಸ್ನೇಹಿತರೆ ಬೆಂಗಳೂರು ಸೇರಿ, ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂದರೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಂಗಳೂರು, ಹಾಗೂ ಶಿವಮೊಗ್ಗ, ಬೆಂಗಳೂರು ಮುಂತಾದ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಇಲ್ಲಿ ಬಿರುಗಾಳಿ ಸಹಿತ ಬಾರಿ ಮಳೆ ಆಗುವ ನಿರೀಕ್ಷೆ ಮಾಡಲಾಗಿದೆ ಹೀಗೆಂದು ನಮ್ಮ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ
ಇದರ ಜೊತೆಗೆ ನಮ್ಮ ರಾಜ್ಯದ ಹಾಸನ, ಕೊಡಗು, ಚಿಕ್ಕಬಳ್ಳಾಪುರ, ದಾರವಾಡ, ರಾಯಚೂರು, ಹಾವೇರಿ, ಯಾದಗಿರಿ, ಗುಲ್ಬರ್ಗ, ಚಿತ್ರದುರ್ಗ, ಕೊಪ್ಪಳ, ಕೋಲಾರ, ಬೀದರ್, ಗದಗ ಮುಂತಾದ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ,
ಹಾಗೂ ನಮ್ಮ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಜಲ ಭಾಗಗಳಲ್ಲಿ ಭಾರಿ ಮಳೆ ಆಗಲಿದೆ, ಹೌದು ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಬೆಂಗಳೂರು ಗ್ರಾಮೀಣ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಕೇಂದ್ರ ಹಾಗೂ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, (rain alert) ಕೋಲಾರ ಮುಂತಾದ (district) ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ (km) ಬಿರುಗಾಳಿ (rain) ಸಹಿತ ಭಾರಿ ಮಳೆ ಆಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ
ಹವಾಮಾನ ಇಲಾಖೆ ನಮ್ಮ ರಾಜ್ಯದಲ್ಲಿ ಮುಂದಿನ ಏಳು ದಿನಗಳವರೆಗೆ ಅಂದರೆ ಮೇ 27 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿಸಿದೆ ಹಾಗೂ ಈಗಾಗಲೇ ಕೇರಳದ ಭಾಗದಲ್ಲಿ ಮುಂಗಾರು ಮಳೆ ಇನ್ನು ಐದು ದಿನಗಳಲ್ಲಿ ಎಂಟರ್ ಆಗುತ್ತಿದ್ದು ಈ ಮಳೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ
2 thoughts on “ಇನ್ನೂ 1 ವಾರ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 23 ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ”