guest teacher recruitment 2025: 9,499 ಅತಿಥಿ ಶಿಕ್ಷಕರ ನೇಮಕಾತಿ.! ನೇರ ನೇಮಕಾತಿ ಇಲ್ಲಿದೆ ನೋಡಿ ವಿವರ

guest teacher recruitment 2025: 9,499 ಅತಿಥಿ ಶಿಕ್ಷಕರ ನೇಮಕಾತಿ.! ನೇರ ನೇಮಕಾತಿ ಇಲ್ಲಿದೆ ನೋಡಿ ವಿವರ

ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿ ಇರುವ ಸರಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವಂತ 9,499 ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಆದೇಶ ಹೊರಡಿಸಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಅತಿಥಿ ಶಿಕ್ಷಕರ ನೇಮಕಾತಿ ಯಾವ ರೀತಿಯಲ್ಲಿ ನಡೆಯುತ್ತೆ ಹಾಗೂ ಈ ಹುದ್ದೆಗಳ ನೇಮಕಾತಿ ಯಾರು ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ಅತಿಥಿ ಶಿಕ್ಷಕರ ನೇಮಕಾತಿ (guest teacher recruitment 2025).?

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ಇದೀಗ 2025 ಮತ್ತು 26 ನೇ ಸಾಲಿನ ಪ್ರೌಢಶಾಲೆಯಲ್ಲಿ ಖಾಲಿ ಇರುವ ವಿವಿಧ ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಒಟ್ಟು ನಮ್ಮ ಕರ್ನಾಟಕದಲ್ಲಿ 11000 ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಗುರಿ ಹೊಂದಲಾಗಿದೆ ಇದರಲ್ಲಿ ಪ್ರಸ್ತುತ ಅತ್ಯಗತ್ಯವಾಗಿ 9499 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಲು ಅನುಮೋದನೆ ನೀಡಲಾಗಿದೆ

guest teacher recruitment 2025
guest teacher recruitment 2025

 

ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಇರುವಂತ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ರಾಜ್ಯ ಸರ್ಕಾರ ಇದೀಗ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರಿಂದ ಮಕ್ಕಳ ಶಿಕ್ಷಣ ಗುಣಮಟ್ಟಕ್ಕೆ ಯಾವುದೇ ರೀತಿ ಹಾನಿ ಆಗದಂತೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ನಮ್ಮ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ತಿಳಿಸಿದ್ದಾರೆ.!

WhatsApp Group Join Now
Telegram Group Join Now       

 

ಅತಿಥಿ ಶಿಕ್ಷಕರನ್ನು ಯಾರು ನೇಮಕಾತಿ ಮಾಡಿಕೊಳ್ಳುತ್ತಾರೆ (guest teacher recruitment 2025).?

ಸ್ನೇಹಿತರೆ ಪ್ರೌಢಶಾಲೆಯಲ್ಲಿ ಖಾಲಿ ಇರುವಂತೆ ಅತಿಥಿ ಶಿಕ್ಷಕರ ನೇಮಕಾತಿಯನ್ನು ಅಲ್ಲಿನ ಪ್ರೌಢಶಾಲೆಯ ಮುಖ್ಯಸ್ಥರು ಅಥವಾ ಹೆಡ್ ಮಾಸ್ಟರ್ ಈ ಅತಿಥಿ ಶಿಕ್ಷಕರನ್ನು ನೇರವಾಗಿ ನೇಮಕಾತಿ ಮಾಡಿಕೊಳ್ಳುತ್ತಾರೆ ಮತ್ತು ನೇಮಕಾತಿಯ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ವಿದ್ಯಾರ್ಹತೆ ಹಾಗೂ ಇತರ ವಿಧಾನಗಳನ್ನು ಆಧರಿಸಿ ಈ ಅತಿಥಿ ಶಿಕ್ಷಕರನ್ನು ಅಲ್ಲಿನ ಶಾಲೆಯ ಮುಖ್ಯಸ್ಥರು ನೇಮಕಾತಿ ಮಾಡಿಕೊಳ್ಳುತ್ತಾರೆ

ಹೌದು ಸ್ನೇಹಿತರೆ ಈ ಅತಿಥಿ ಶಿಕ್ಷಕರನ್ನು ಕೇವಲ ತಾತ್ಕಾಲಿಕವಾಗಿ ಮಾತ್ರ ನೇಮಕಾತಿ ಮಾಡಿಕೊಳ್ಳುತ್ತಾರೆ ಮತ್ತು ಅಲ್ಲಿನ ಪ್ರೌಢಶಾಲೆಯಲ್ಲಿ ಯಾವುದೇ ಕಾರಣಕ್ಕೂ ಶಿಕ್ಷಕರು ನೇಮಕಗೊಂಡ ನಂತರ ಅಥವಾ ಇತರ ಕಾಯಂ ಶಿಕ್ಷಕರು ಶಾಲೆಗೆ ವರ್ಗಾವಣೆಗೊಂಡರೆ ಅಲ್ಲಿನ ಅತಿಥಿ ಶಿಕ್ಷಕರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತದೆ ಹಾಗಾಗಿ ಈ ಹುದ್ದೆಗಳಿಗೆ ಕೇವಲ ಒಂದು ವರ್ಷ (1 year) ಅಥವಾ ಅದಕ್ಕಿಂತ ಕಡಿಮೆ (condition) ಅವಧಿಯಲ್ಲಿ ಈ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ

 

ಅತಿಥಿ ಶಿಕ್ಷಕರಿಗೆ(guest teacher recruitment 2025) ಎಷ್ಟು ಸಂಬಳ ಸಿಗುತ್ತದೆ.?

ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕರು ಅಥವಾ ಅತಿಥಿ ಶಿಕ್ಷಕರಾಗಿ ಆಯ್ಕೆಯಾದ ನಂತರ ಅವರಿಗೆ ತಿಂಗಳಿಗೆ 12500 ಮಾಸಿಕ ಗೌರವ ಧನವನ್ನು ನೀಡಲಾಗುತ್ತದೆ ಹಾಗೂ ಈ ಸಂಬಳವೂ ಅವರ ಕರ್ತವ್ಯದ ಹಾಜರಾತಿ ಮತ್ತು ಇತರ ಆಧಾರಗಳ ಮೇಲೆ ನಿಗದಿ ಮಾಡಲಾಗುತ್ತದೆ.

ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನೀವು ಹೆಚ್ಚಿನ ವಿವರ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೆ ನೀವು ಮುಖ್ಯ ಶಿಕ್ಷಕರನ್ನು ಭೇಟಿ ಆಗಬಹುದು ಅಥವಾ ನಿಮ್ಮ ತಾಲೂಕು ಅಥವಾ ಜಿಲ್ಲಾಮಟ್ಟದಲ್ಲಿ ಇರುವ ಸ್ಥಳೀಯ ಶಿಕ್ಷಣ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಅಧಿಕೃತ ಶಿಕ್ಷಣ (education website) ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ

WhatsApp Group Join Now
Telegram Group Join Now       

phone pe personal loan: ಫೋನ್ ಪೇ ಮೂಲಕ ಸಿಗುತ್ತೆ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಈ ರೀತಿ ಅರ್ಜಿ ಸಲ್ಲಿಸಿ

2 thoughts on “guest teacher recruitment 2025: 9,499 ಅತಿಥಿ ಶಿಕ್ಷಕರ ನೇಮಕಾತಿ.! ನೇರ ನೇಮಕಾತಿ ಇಲ್ಲಿದೆ ನೋಡಿ ವಿವರ”

Leave a Comment

?>