ಗೃಹಲಕ್ಷ್ಮಿ ಯೋಜನೆ ಹಣ: ಬಂತು ನೋಡಿ ಹೊಸ ಅಪ್ಡೇಟ್! ಬಾಕಿ 3 ಕಂತಿನ 6000 ಹಣ ಒಟ್ಟಿಗೆ ಬಿಡುಗಡೆ
ನಮ್ಮ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಹಿ ಸುದ್ದಿ ನೀಡಿದ್ದಾರೆ! ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ, ಬಾಕಿ ಇರುವ ಮೂರು ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಂದಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಬಾಕಿ ಇರುವ ಮೂರು ಕಂತಿನ ಜಮಾ ಆಗುತ್ತದೆ ನಿಜನಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗೃಹಲಕ್ಷ್ಮಿ ಯೋಜನೆ ಅಂದರೆ ಏನು..?
ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ 5 ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಆ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು ಪ್ರಮುಖ ಗ್ಯಾರಂಟಿಯಾಗಿದೆ, ಹಾಗಾಗಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದೆ, ಇದರಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವ ಯೋಜನೆ ಯಾವುದಾದರು ಇದೆ ಅಂದರೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ.

ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಿದಂತಹ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣ ಇಲ್ಲಿವರೆಗೂ ಜಮಾ ಮಾಡುತ್ತಲೇ ಬಂದಿದೆ, ಹೌದು ಸ್ನೇಹಿತರೆ ಇಲ್ಲಿವರೆಗೂ ಸರಿಸುಮಾರು 20 ಕಂತಿನವರೆಗೆ ಎಲ್ಲಾ ಮಹಿಳೆಯರು ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು 2000 ಪಡೆದುಕೊಂಡಿದ್ದಾರೆ ಅಂದರೆ ಸರಿ ಸುಮಾರು 40 ಸಾವಿರ ರೂಪಾಯಿ ಹಣವನ್ನು ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು
ಕಳೆದ ಹಣ ತಿಂಗಳಿನಲ್ಲಿ ಅಂದರೆ ಜೂನ್ ತಿಂಗಳಿನಲ್ಲಿ ರೂ. 2000 ಹಣ ಜಮಾ ಮಾಡಲಾಗಿದೆ ಆದರೆ ಮಹಿಳೆಯರಿಗೆ ಇನ್ನು ಮೂರು ಕಂತಿನ ಹಣ ಬಾಕಿ ಇದೆ, ಹೌದು ಸ್ನೇಹಿತರೆ, ಇಲ್ಲಿವರೆಗೂ ಮಹಿಳೆಯರಿಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಹಾಗೂ ಎಷ್ಟು ಕಂತಿನ ಹಣ ಬಾಕಿ ಇದೆ ಎಂಬ ಮಾಹಿತಿ ಕೆಳಗಡೆ ನೀಡಲಾಗಿದೆ
ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಎಷ್ಟು ಕಂತಿನ ಹಣ ಬಾಕಿ ಇದೆ..?
ಹೌದು ಸ್ನೇಹಿತರೆ ಇಲ್ಲಿವರೆಗೂ ಮಾರ್ಚ್ ತಿಂಗಳ ಹಣ ಅಂದರೆ 20ನೇ ಕಂತಿನವರೆಗೆ ಎಲ್ಲ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ, ಇನ್ನು ಏಪ್ರಿಲ್ ತಿಂಗಳ ಹಣ ಹಾಗೂ ಮೇ ತಿಂಗಳ ಹಣ ಮತ್ತು ಜೂನ್ ತಿಂಗಳ ಹಣ ಇನ್ನು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ, ಹಾಗಾಗಿ ಬಾಕಿ ಇರುವಂತ ಈ ಮೂರು ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.
ಮೂರು ಕಂತಿನ ಹಣ ಒಟ್ಟಿಗೆ 6,000 ಈ ದಿನದ ಒಳಗಡೆ ಬಿಡುಗಡೆ..?
ಮಹಿಳೆಯರಿಗೆ ಬಾಕಿ ಇರುವಂತ ಮೂರು ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳೆಯರಿಗೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ ಎಂದು ಹೇಳಬಹುದು.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿರುವ ಪ್ರಕಾರ ಏಪ್ರಿಲ್ ತಿಂಗಳ ಹಣ ಹಾಗೂ ಮೇ ತಿಂಗಳ ಹಣ ಮತ್ತು ಜೂನ್ ತಿಂಗಳ ಹಣ ಒಟ್ಟಿಗೆ ಮೂರು ಕಂತಿನ ₹6000 ಹಣ ಈ ಜುಲೈ 20ನೇ ತಾರೀಕಿನ ಒಳಗಡೆ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಹೌದು ಸ್ನೇಹಿತರೆ ಪ್ರತಿ ತಿಂಗಳಿಗೆ ರೂ.2000 ಅಂತ ಒಟ್ಟು ಬಾಕಿ ಇರುವ ಮೂರು ಕಂತಿನ ಹಣ ರೂ.6,000 ಈ ತಿಂಗಳ ಅಂದರೆ ಜುಲೈ 20ನೇ ತಾರೀಖಿನ ಒಳಗಡೆ ಜಮಾ ಮಾಡಲು ಎಲ್ಲಾ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ
ಹಣ ಬಿಡುಗಡೆಯ ವಿಳಂಬಕ್ಕೆ ಕಾರಣವೇನು..?
ಹೌದು ಸ್ನೇಹಿತರೆ ತುಂಬಾ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಅತಿ ಮುಖ್ಯವಾಗಿದೆ, ಹಾಗಾಗಿ ಹಣ ಬಿಡುಗಡೆಗೆ ವಿಳಂಬ ಆಗಲು ಕಾರಣವೇನು ಎಂದು ಸಾಕಷ್ಟು ಮಹಿಳೆಯರು ಸರಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ತಿಳಿಸಿರುವ ಮಾಹಿತಿಯ ಪ್ರಕಾರ ಹಣ ಬಿಡುಗಡೆ ಮಾಡುವಂತ ಪ್ರಕ್ರಿಯೆ ಯಾವಾಗಲೂ ಚಾಲ್ತಿಯಲ್ಲಿ ಇರುತ್ತದೆ, ಕೆಲವೊಂದು ಸಂದರ್ಭಗಳಲ್ಲಿ ತಾಂತ್ರಿಕ ದೋಷ ಉಂಟಾಗುವುದರಿಂದ ಹಣ ಬಿಡುಗಡೆ ವಿಳಂಬವಾಗುತ್ತದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ (gruh Lakshmi scheme) ಸಣ್ಣ ಯೋಜನೆಯಲ್ಲ ಈ ಒಂದು ಯೋಜನೆ ಮೂಲಕ ಸರಿಸುಮಾರು 1.1 ಕೋಟಿ ಮಹಿಳೆಯರು (scheme) ಲಾಭ ಪಡೆಯುತ್ತಿದ್ದಾರೆ ಹಾಗಾಗಿ ಅಷ್ಟು ಮಹಿಳೆಯರ ಖಾತೆಗೆ ಹಣ ಬಿಡುಗಡೆ ಮಾಡಲು ಸ್ವಲ್ಪ ವಿಳಂಬವಾಗುತ್ತದೆ ಹಾಗೂ ಕೆಲವೊಂದು ತಾಂತ್ರಿಕ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾನು ಕೆಲಸ ಮಾಡುತ್ತಿದ್ದೇನೆ ಹಾಗೂ ಆರ್ಥಿಕ ಇಲಾಖೆಯೂ ಕೂಡ ಇದೀಗ ಹಣ ಬಿಡುಗಡೆಗೆ ನೀಡಿದೆ ಎಂದು ಮಾಹಿತಿ ತಿಳಿಸಿದ್ದಾರೆ
ಅವರು ತಿಳಿಸಿರುವ ಮಾಹಿತಿ ಪ್ರಕಾರ ಮಹಿಳೆಯರು ಸ್ವಲ್ಪ ವಿಳಂಬವಾದರೂ ತಾಳ್ಮೆಯಿಂದ ಕಾಯಬೇಕು ಎಂದು ಮಹಿಳೆಯರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ ಹಾಗಾಗಿ ನೀವು ಹಣ ಬರವರಿಗೂ ಕಾಯಬೇಕು
ಇದೇ ರೀತಿ ನಿಮಗೆ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಸರಕಾರದ ಯೋಜನೆಗಳಿಗೆ ಸಂಬಂಧಿಸಿದ ಹೊಸ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು
3 thoughts on “ಗೃಹಲಕ್ಷ್ಮಿ ಯೋಜನೆ ಹಣ: ಬಂತು ನೋಡಿ ಹೊಸ ಅಪ್ಡೇಟ್! ಬಾಕಿ 3 ಕಂತಿನ 6000 ಹಣ ಒಟ್ಟಿಗೆ ಬಿಡುಗಡೆ”