Gruhalakshmi Scheme: ಇನ್ನೂ ಒಂದು ವಾರದಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆ ಹಣ ಜಮೆ! ಲಕ್ಷ್ಮಿ ಹೆಬ್ಬಾಳ್ಕರ್

Gruhalakshmi Scheme: ಇನ್ನೂ ಒಂದು ವಾರದಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆ ಹಣ ಜಮೆ! ಲಕ್ಷ್ಮಿ ಹೆಬ್ಬಾಳ್ಕರ್

ನಮಸ್ಕಾರ ಸ್ನೇಹಿತರೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಲ್ಕರ್ ಅವರು ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! ಹೌದು ಸ್ನೇಹಿತರೆ, ಬೀದರ್ ನಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಲೇಖನ ಮೂಲಕ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ಆದಷ್ಟು ಈ ಲೇಖನಿಯನ್ನು ಮಹಿಳೆಯರಿಗೆ ಶೇರ್ ಮಾಡಿ

 

ಗೃಹಲಕ್ಷ್ಮಿ ಯೋಜನೆ.?

ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗಾಗಿ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ.

Gruhalakshmi Scheme
Gruhalakshmi Scheme

 

ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸುಮಾರು 1.18 ಕೋಟಿ ಮಹಿಳೆಯರು ಇದ್ದಾರೆ, ಇಲ್ಲಿವರೆಗೂ ಮಹಿಳೆಯರು ಈ ಯೋಜನೆಯ ಮೂಲಕ 20ನೇ ಕಂತಿನ ಹಣದವರೆಗೆ ಮಹಿಳೆಯರು ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಅಂದರೆ ಸುಮಾರು 40,000 ಹಣವನ್ನು ಈ ಒಂದು ಯೋಜನೆಯ ಮೂಲಕ ಮಹಿಳೆಯರು ಇಲ್ಲಿವರೆಗೂ ಪಡೆದುಕೊಂಡಿದ್ದಾರೆ.

WhatsApp Group Join Now
Telegram Group Join Now       

ಆದ್ದರಿಂದ ಇನ್ನೂ ಮಹಿಳೆಯರಿಗೆ ಎರಡು ಅಥವಾ ಮೂರು ಕಂತಿನ ಹಣ ಜಮಾ ಮಾಡುವುದು ಬಾಕಿ ಇದೆ. ಹಾಗಾಗಿ ಇರುವ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ.

 

ಇನ್ನು 1 ವಾರದ ಒಳಗಡೆ (gruhaLakshmi Amount) ಫಲಾನುಭವಿಗಳ ಖಾತೆಗೆ ರೂ.2,000 ಹಣ ಜಮಾ..?

ಹೌದು ಸ್ನೇಹಿತರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೀದರ್ ಜಿಲ್ಲೆಯಲ್ಲಿ ಒಂದು ಪತ್ರಿಕಾಗೋಷ್ಠಿಯನ್ನು ಮಾಡಿದ್ದಾರೆ, ಇಲ್ಲಿ ಅವರು ಮೇ ತಿಂಗಳ ಹಣವನ್ನು ಇನ್ನೂ ಒಂದು ವಾರಗಳ ಒಳಗಡೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ,

ಪತ್ರಕರ್ತರು ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರಶ್ನೆ ಮಾಡಿದಾಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ ಹಾಗಾಗಿ ನಾವು ಇನ್ನೂ ಒಂದು ವಾರದ ಒಳಗಡೆ ಬಾಕಿ ಇರುವ ಮೇ ತಿಂಗಳ ಹಣವನ್ನು ಬಿಡುಗಡೆ ಮಾಡುತ್ತೇವೆ ಅಥವಾ ಜುಲೈ 15ನೇ ತಾರೀಖಿನ ಒಳಗಡೆ ಮಹಿಳೆಯರ ಖಾತೆಗೆ ಖಂಡಿತವಾಗಲೂ ಜಮಾ ಮಾಡುತ್ತವೆ ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ

 

ಉಳಿದ ಬಾಕಿ ಕಂತಿನ ಹಣ ಯಾವಾಗ ಜಮಾ ಆಗುತ್ತದೆ..?

ಹೌದು ಸ್ನೇಹಿತರೆ ಇನ್ನು ಮಹಿಳೆಯರಿಗೆ ಮೇ ಮತ್ತು ಜೂನ್ ಹಾಗೂ ಏಪ್ರಿಲ್ ತಿಂಗಳ ಹಣ ಬಾಕಿ ಇದೆ.! ಈ ಬಗ್ಗೆ ಅವರು ಕೂಡ ಸ್ಪಷ್ಟ ಮಾಹಿತಿ ನೀಡಿದ್ದಾರೆ ಬಾಕಿ ಇರುವಂತ ಏಪ್ರಿಲ್ ತಿಂಗಳ ಹಣ ಹಾಗೂ ಮೇ ತಿಂಗಳ ಹಣ ಒಟ್ಟಿಗೆ ₹4,000 ಹಣ ಈ ಜುಲೈ 15ನೇ ತಾರೀಖಿನ ಒಳಗಡೆ ಮಹಿಳೆಯರ ಖಾತೆಗೆ ಜಮಾ ಆಗುವಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಮಾಹಿತಿ ತಿಳಿಸಿದ್ದಾರೆ

WhatsApp Group Join Now
Telegram Group Join Now       

ಇದರ ಜೊತೆಗೆ ಜೂನ್ ತಿಂಗಳ ಹಣ ಮಹಿಳೆಯರ ಖಾತೆಗೆ ಜುಲೈ 30ನೇ ತಾರೀಖಿನ ಒಳಗಡೆ ಜಮಾ ಮಾಡುವಂತೆ ಆದೇಶ ಮಾಡಲಾಗಿದೆ ಹಾಗಾಗಿ ಮಹಿಳೆಯರು ಈ ಎಲ್ಲಾ ಬಾಕಿ ಕಂತಿನ ಹಣ ಬರುವವರೆಗೂ ಕಾಯಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ.

ಸ್ನೇಹಿತರೆ ಇದೇ ರೀತಿ ನಿಮಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿದಿನ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಿ

Kotak Bank Scholarship 2025: ವಿದ್ಯಾರ್ಥಿಗಳಿಗೆ ಸಿಗಲಿದೆ 1.50 ಲಕ್ಷ ರೂಪಾಯಿ ಹಣ.! ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ

1 thought on “Gruhalakshmi Scheme: ಇನ್ನೂ ಒಂದು ವಾರದಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆ ಹಣ ಜಮೆ! ಲಕ್ಷ್ಮಿ ಹೆಬ್ಬಾಳ್ಕರ್”

Leave a Comment

?>