gruhalakshmi amount: ಗೃಹಲಕ್ಷ್ಮಿ 15ನೇ ಕಂತಿನ 2000 ಹಣ ಜಮಾ ಆಗಿದೆ ಈ ರೀತಿ ಸ್ಟೇಟಸ್ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಕೆಲ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಈ ಒಂದು ಲೇಖನಯ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಮತ್ತು ಗೃಹಲಕ್ಷ್ಮಿ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಪಡೆಯಲು ಇರುವ ರೂಲ್ಸ್ ಗಳೇನೂ ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಗೃಹಲಕ್ಷ್ಮಿ ಯೋಜನೆ (gruhalakshmi amount)..?
ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದ್ದು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ವರ್ಗಾವಣೆ ಮಾಡುವ ಯೋಜನೆಯಾಗಿದೆ.! ಹೌದು ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರು ಇಲ್ಲಿವರೆಗೂ ಹದಿನಾಲ್ಕು ಕಂತಿನ ಹಣ ಅಂದರೆ ಸುಮಾರು 28000 ಹಣವನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದುಕೊಂಡಿದ್ದಾರೆ.!

ಈ ಗೃಹಲಕ್ಷ್ಮಿ ಯೋಜನೆಯಿಂದ ಸಾಕಷ್ಟು ಮಹಿಳೆಯರಿಗೆ ಉಪಯೋಗವಾಗಿದ್ದು ಕೆಲ ಮಹಿಳೆಯರು ಹಣ ಕೂಡಿಟ್ಟು ಮೊಬೈಲ್ ಹಾಗೂ ಹೊಲಿಗೆ ಯಂತ್ರ ಮತ್ತು ಇತರ ಗೃಹ ಉಪಯೋಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ ಮತ್ತು ಇತ್ತೀಚಿಗೆ ಒಬ್ಬ ಮಹಿಳೆ ತಮ್ಮ ಹೊಲದಲ್ಲಿ ಈ ಗೃಹಲಕ್ಷ್ಮಿ ಹಣ ಕೂಡಿಟ್ಟು ಬೋರ್ವೆಲ್ ಅನ್ನು ಕೋರಿಸಿದ್ದಾರೆ ಈ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದ್ದು ಒಟ್ಟಿನಲ್ಲಿ ಹೇಳುವುದಾದರೆ ಈ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವುದರ ಜೊತೆಗೆ ಆರ್ಥಿಕವಾಗಿ ಸ್ವಹಲಂಬನೆ ಆಗಲು ತುಂಬಾ ಉಪಯೋಗವಾಗಿದೆ
ಹಾಗೂ ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಬೆಲೆ ಏರಿಕೆ ಮತ್ತು ಇತರ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಈ ಗೃಹಲಕ್ಷ್ಮಿ ಯೋಜನೆ ರೂ.2000 ಹಣ ತುಂಬಾ ಮಹಿಳೆಯರಿಗೆ ಉಪಯೋಗವಾಗಿದೆ ಎಂದು ಹೇಳಬಹುದು ಹಾಗಾಗಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊಸ ಅಪ್ಡೇಟ್ ನೀಡಿದ್ದಾರೆ
15ನೇ ಕಂತಿನ ಹಣ ಬಿಡುಗಡೆ (gruhalakshmi amount)..?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ರೂ. 2000 ಈಗಾಗಲೇ ಕೆಲ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದ್ದು ಇದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಅನ್ನು ನಾವು ಕೆಳಗಡೆ ಹಾಕಿದ್ದೇವೆ.! ಹೌದು ಸ್ನೇಹಿತರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ ಆಗಿಲ್ಲ ಅಂದರೆ ನೀವು ಭಯ ಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಈ ಯೋಜನೆ ಅಡಿಯಲ್ಲಿ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಹಾಗೂ 15ನೇ ಕಂಠಿನ ಹಣವನ್ನು ಇದೇ ಡಿಸೆಂಬರ್ 31 ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ

ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ 2000 ಹಣ ಇನ್ನು ಜಮಾ ಆಗಿಲ್ಲ ಮತ್ತು ಇನ್ನು ಕೆಲ ಮಹಿಳೆಯರಿಗೆ ಎರಡು ಅಥವಾ ಮೂರು ಕಂತಿನ ಹಣ ಪೆಂಡಿಂಗ್ ಇದ್ದು ಅಂತ ಮಹಿಳೆಯರಿಗೆ ಶೀಘ್ರದಲ್ಲಿ ಹಣ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ.! ಹಾಗಾಗಿ ನೀವು ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಹಣ ಪಡೆಯಲು ಬಯಸಿದರೆ ಗೃಹಲಕ್ಷ್ಮಿ ಯೋಜನೆ ಕೆಲವೊಂದು ರೂಲ್ಸ್ ಗಳನ್ನು ಪಾಲಿಸಬೇಕು ಅವುಗಳ ವಿವರ ಕೆಳಗಡೆ ನೀಡಲಾಗಿದೆ
ಗೃಹಲಕ್ಷ್ಮಿ ಪೆಂಡಿಂಗ್ ಹಣ ಪಡೆಯಲು ಇರುವ ರೂಲ್ಸ್ ಗಳು..?
ಹೌದು ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಗೃಹಲಕ್ಷ್ಮಿ ಯೋಜನೆ ಅರ್ಜಿಯ E-kyc ಮಾಡಿಸಬೇಕು ನಂತರ ಗೃಹಲಕ್ಷ್ಮಿ ಅರ್ಜಿದಾರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದರ ಜೊತೆಗೆ ಬ್ಯಾಂಕ್ ಖಾತೆಯ ekyc ಮಾಡಿಸುವುದು ಕಡ್ಡಾಯವಾಗಿದೆ ಇದರ ಜೊತೆಗೆ ಅರ್ಜಿದಾರ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಆಧಾರ್ ಸೀಡಿಂಗ್ ಅಥವಾ NPCI ಮ್ಯಾಪಿಂಗ್ ಮಾಡಿಸಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಈಕೆ ವಹಿಸಿ ಮಾಡಿಸಿದರೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ
ಒಂದು ವೇಳೆ ಮೇಲೆ ತಿಳಿಸಿದ ಎಲ್ಲಾ ಕೆಲಸವನ್ನು ಮಾಡಿದರು ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆ ಅಪ್ಂಡಿಂಗ್ ಇರುವ ಕಂತಿನ ಹಣ ಜಮಾ ಆಗುತ್ತಿಲ್ಲವೆಂದರೆ ನೀವು ಮೊದಲು ನಿಮ್ಮ ಹತ್ತಿರದ ತಾಲೂಕು ಅಥವಾ ಜಿಲ್ಲೆಗೆ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಯಾವ ಕಾರಣಕ್ಕೆ ನಿಮಗೆ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಇರುವ ಹಣ ಬರುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗಾಗಿ ಹೆಚ್ಚಿನ ಮಾಹಿತಿ ಪಡೆಯಲು ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ
ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ..?
- ಸ್ನೇಹಿತರೆ ನೀವು ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡಲು ಬಯಸಿದರೆ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕರ್ನಾಟಕ ಡೆಬಿಟ್ ಅಪ್ಲಿಕೇಶನನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ
- ನಂತರ ಗೃಹಲಕ್ಷ್ಮಿ ಅರ್ಜಿ ಹಾಕಿದ ಸದಸ್ಯರ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
- ನಂತರ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ನಾಲ್ಕು ಆಯ್ಕೆಗಳು ಕಾಣುತ್ತವೆ ಅದರಲ್ಲಿ ನೀವು payment status ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಅಲ್ಲಿ ಗೃಹಲಕ್ಷ್ಮಿ ಸ್ಕೀಮ್ ಅಥವಾ ಗೃಹಲಕ್ಷ್ಮಿ ಯೋಜನೆ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮಗೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಸಂಪೂರ್ಣ ವಿವರ ತಿಳಿಯುತ್ತದೆ
ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ಕರ್ನಾಟಕದ ವಿವಿಧ ಕಂಪನಿಗಳಲ್ಲಿ ಹಾಗೂ ವಿವಿಧ ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು