Gruhalakshmi Amount: ಗೃಹಲಕ್ಷ್ಮಿ 2 ತಿಂಗಳ ಹಣ ಬಿಡುಗಡೆ! 4,000 ಜಮಾ ಆಗಿದೆ ಈ ರೀತಿ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಕರ್ನಾಟಕದಲ್ಲಿ ಜಾರಿ ಇರುವಂತ ಗೃಹಲಕ್ಷ್ಮಿ ಯೋಜನೆ, ಎರಡು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಈಗಾಗಲೇ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಇದು ಮಹಿಳೆಯರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು.! ಈಗಾಗಲೇ ಜನವರಿ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿದ್ದು ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು 01 ಏಪ್ರಿಲ್ 2025 ರಿಂದ ಬಿಡುಗಡೆ ಮಾಡಲು ಪ್ರಾರಂಭವಾಗಿದೆ ಈ ಒಂದು ಲೇಖನ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆ (Gruhalakshmi Amount)..?
ಗೃಹಲಕ್ಷ್ಮಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಮತ್ತು ಇಲ್ಲಿವರೆಗೂ ಅರ್ಜಿ ಸಲ್ಲಿಸಿದಂತ ಮಹಿಳೆಯರು ಸುಮಾರು 17 ಕಂತಿನವರೆಗೆ ಅಂದರೆ ₹34,000 ಹಣ ಮಹಿಳೆಯರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗಾಗಿ ಈ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ

ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 2023ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇಲ್ಲಿವರೆಗೂ ಈ ಒಂದು ಯೋಜನೆ ಅಡಿಯಲ್ಲಿ ಡಿಸೆಂಬರ್ ತಿಂಗಳವರೆಗೆ ಅಂದರೆ 17 ಕಂತಿನವರೆಗೆ ಹಣ ಜಮಾ ಆಗಿದೆ ಹಾಗೂ ಕೆಲ ಮಹಿಳೆಯರ ಖಾತೆಗೆ ಜನವರಿ ತಿಂಗಳ ಹಣ ಬಿಡುಗಡೆಯಾಗಿದೆ ಮತ್ತು ಕೆಲವರಿಗೆ ಇನ್ನೂ ಮೂರು ನಾಲ್ಕು ಕಂತಿನ ಹಣ ಜಮಾ ಆಗುವುದು ಬಾಕಿ ಇದೆ ಹಾಗಾಗಿ ಮಹಿಳೆಯರು ಈ ಹಣ ಯಾವಾಗ ಜಮಾ ಆಗುತ್ತೆ ಎಂದು ಕಾಯುತ್ತಿದ್ದಾರೆ
ಎರಡು ತಿಂಗಳ ಹಣ ಒಟ್ಟಿಗೆ ರೂ.4,000 ಜಮಾ (Gruhalakshmi Amount).?
ಹೌದು ಸ್ನೇಹಿತರೆ ಕರ್ನಾಟಕ ಸರ್ಕಾರವು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಒಟ್ಟಿಗೆ ಮಹಿಳೆಯರ ಖಾತೆಗೆ ಜಮಾ ಮಾಡಲು ನಿರ್ಧಾರ ಮಾಡಿದೆ ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ.! ಅವರು ನೀಡಿರುವ ಮಾಹಿತಿಯ ಪ್ರಕಾರ ಸೋಮವಾರ ಸಂಜೆಯಿಂದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಯಾದಗಿರಿ, ರಾಯಚೂರು, ಇತರ ಕರ್ನಾಟಕದ ಹಲವು ಜಿಲ್ಲೆಗಳ ಮಹಿಳೆಯರ ಖಾತೆಗೆ ಈಗಾಗಲೇ ಬಹುತೇಕ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ
ಹೌದು ಸ್ನೇಹಿತರೆ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇರುವಂತಹ ಮಹಿಳೆಯರ ಖಾತೆಗೆ ಪ್ರತಿದಿನ ಇಂತಿಷ್ಟು ಹಣ ಅಂದರೆ ಜನವರಿ ತಿಂಗಳ ಹಣ ಹಾಗೂ ಫೆಬ್ರವರಿ ತಿಂಗಳ ಹಣ ಮತ್ತು ಮಾರ್ಚ್ ತಿಂಗಳ ಹಣ ಈ ರೀತಿ ಪೆಂಡಿಂಗ್ ಇರುವಂತಹ ಹಣವನ್ನು ಪ್ರತಿದಿನ ಇಂತಿಷ್ಟು ಮಹಿಳೆಯರ ಖಾತೆಗೆ ಜಮಾ ಮಾಡಲು ಪ್ರಾರಂಭವಾಗಿದೆ.! ಈ ಹಣ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 10 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಹಾಗಾಗಿ ಮಹಿಳೆಯರು ಹಣ ಬರುವವರೆಗೂ ಕಾಯಬೇಕು
ಪೆಂಡಿಂಗ್ ಇರುವ ಹಣ ಪಡೆಯಲು ಏನು ಮಾಡಬೇಕು (Gruhalakshmi Amount).?
ಹೌದು ಸ್ನೇಹಿತರೆ ಇನ್ನು ಕೆಲ ಮಹಿಳೆಯರ ಖಾತೆಗೆ ಜನವರಿ ತಿಂಗಳ ಹಣ ಹಾಗೂ 2-3 ಕಂತಿನ ಹಣ ಬಾಕಿ ಇದೆ ಅಂತ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಯಾರಿಗೆ 2-3 ಕಂತಿನ ಹಣ ಬಾಕಿ ಇದೆ ಅಂತ ಮಹಿಳೆಯರ ಖಾತೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ಈ ತಿಂಗಳು ಮುಗಿಯುವುದರ ಒಳಗಡೆ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ನಿಮಗೆ ಹಣ ಬಂದಿಲ್ಲವೆಂದರೆ ಭಯಪಡುವಂತ ಅವಶ್ಯಕತೆ ಇಲ್ಲ
ಏಕೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ತಿಳಿಸಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ ಪೆಂಡಿಂಗ್ ಇರುವಂತಹ ಪ್ರತಿಯೊಂದು ಕಂತಿನ ಹಣ ಕೂಡ ಮಹಿಳೆಯರ ಖಾತೆಗೆ ಜಮಾ ಮಾಡುತ್ತಿವೆ ಎಂದು ಸ್ಪಷ್ಟ ಮಾಹಿತಿ ತಿಳಿಸಿದ್ದಾರೆ ಹಾಗಾಗಿ ಮಹಿಳೆಯರು ಹಣ ಬರುವವರೆಗೂ ಕಾಯಬೇಕು.!
ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಹಣ ಪಡೆಯಲು ಬಯಸುವ ಮಹಿಳೆಯರು ಮೊದಲು ತಮ್ಮ ಬ್ಯಾಂಕ್ ಖಾತೆಗೆ E-KYC, ಆಧಾರ್ ಲಿಂಕ್ ಹಾಗೂ ಆಧಾರ್ ಸೀಡಿಂಗ್ ಮಾಡಿಸಬೇಕು ಮತ್ತು ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ E-kyc ಮಾಡಿಸಬೇಕು ಇದರ ಜೊತೆಗೆ ಗೃಹಲಕ್ಷ್ಮಿ ಅರ್ಜಿ e-kyc ಮಾಡಿಸಬೇಕು ಅಂದರೆ ಮಾತ್ರ ಹಣ ಬರುತ್ತೆ ಒಂದು ವೇಳೆ ನಿಮಗೆ ಎಂಟು ಅಥವಾ ಹತ್ತು ಕಂತಿನ ಹಣ ಬಾಕಿ ಇದ್ದರೆ ಕೂಡಲೇ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ
2 thoughts on “Gruhalakshmi Amount: ಗೃಹಲಕ್ಷ್ಮಿ 2 ತಿಂಗಳ ಹಣ ಬಿಡುಗಡೆ! 4,000 ಜಮಾ ಆಗಿದೆ ಈ ರೀತಿ ಚೆಕ್ ಮಾಡಿ”