Mudra loan apply: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ನಮ್ಮ ದೇಶದಲ್ಲಿ ಸೂಕ್ಷ್ಮ ವ್ಯವಹಾರಗಳು ಹಾಗೂ ವ್ಯಾಪಾರ ಘಟಕಗಳ ಅಭಿವೃದ್ಧಿಗಾಗಿ ಮತ್ತು ಇತರ ವ್ಯಾಪಾರ ಮಾಡಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮುದ್ರಾ ಯೋಜನೆಯ ಮೂಲಕ ಸಾಲ ನೀಡುತ್ತಿದೆ, ಆದ್ದರಿಂದ ಈ ಒಂದು ಲೇಖನಿಯ ಮೂಲಕ ಈ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ ಮತ್ತು ಸಾಲ ಪಡೆಯಲು ಏನು ಮಾಡಬೇಕು ಎಂಬ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಸರ್ಕಾರಿ ಉದ್ಯೋಗ ಬೇಕಾದ್ರೆ ತಕ್ಷಣ ನೀವು ಈ ರೀತಿ ಅರ್ಜಿ ಸಲ್ಲಿಸಿ ಮತ್ತು 35000 ವರೆಗೆ ಸಂಬಳ ಪಡೆಯಿರಿ
ಮುದ್ರಾ ಯೋಜನೆ (Mudra loan apply)..?
ಮುದ್ರಾ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶ ಸಣ್ಣ ಹಾಗೂ ಸೂಕ್ಷ್ಮ ಉದ್ಯಮಗಳಿಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಹಾಗೂ ವ್ಯಾಪಾರ ಪ್ರಾರಂಭಿಸುವ ಜನರಿಗೆ ಹಣಕಾಸು ಸಹಾಯ ಮಾಡುವುದು ಹಾಗೂ ಎಲ್ಲಾ ಕಿರು ಹಣಕಾಸು ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳನ್ನು ನೋಂದಾಯಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ

ಈ ಮುದ್ರಾ ಯೋಜನೆ ಅಡಿಯಲ್ಲಿ ಸ್ವರ್ಣ ವ್ಯಾಪಾರಿಗಳು ಮತ್ತು ಇತರ ಉದ್ಯಮಿಗಳನ್ನು ನಿರ್ಮಿಸಲು ಹಾಗೂ ವಿಸ್ತರಿಸಲು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಮತ್ತು ಈ ಯೋಜನೆ ಅಡಿಯಲ್ಲಿ ಬ್ಯಾಂಕಿಂಗ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಹಣಕಾಸು ನೆರವು ನೀಡುವ ಉದ್ದೇಶ ಹೊಂದಲಾಗಿದೆ
ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ 10 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ
ಇದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ಜನರಿಗೆ ಮತ್ತು ಬಡ ವರ್ಗದ ಜನರಿಗೆ ಆದ್ಯತೆ ನೀಡುವುದು ಹಾಗೂ ವ್ಯಾಪಾರ ಮತ್ತು ಉತ್ಪಾದನೆ ಮತ್ತು ಇತರ ಸೇವೆಗಳೊಂದಿಗೆ ವಿಸ್ತರಿಸುವ ಉದ್ದೇಶದಿಂದ ಕಿರು ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸುವುದು ಹಾಗೂ ನಿರ್ಮಾಣ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ
ಮುದ್ರಾ ಯೋಜನೆ ಅಡಿಯಲ್ಲಿ ವಿವಿಧ ಸಾಲದ ವಿಧಗಳು ಹಾಗೂ ಸೌಲಭ್ಯಗಳು (Mudra loan apply).?
ಹೌದು ಸ್ನೇಹಿತರೆ ಮುದ್ರಾ ಯೋಜನೆ ಅಡಿಯಲ್ಲಿ ಸುಮಾರು ನಾಲ್ಕು ವಿಭಾಗಗಳಾಗಿ ಸಾಲ ನೀಡಲಾಗುತ್ತದೆ ಅವುಗಳ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
ಶಿಶು ಸಾಲ ಯೋಜನೆ:- ಈ ಯೋಜನೆ ಅಡಿಯಲ್ಲಿ ಸುಮಾರು 50 ಸಾವಿರ ವರೆಗೆ ಸಾಲ ಸೌಲಭ್ಯವನ್ನು ಮುದ್ರಾ ಯೋಜನೆ ಅಡಿಯಲ್ಲಿ ಒದಗಿಸಲಾಗುತ್ತದೆ
ಕಿಶೋರ್ ಸಾಲ ಯೋಜನೆ:– ಈ ಕಿಶೋರ್ ಸಾಲ ಯೋಜನೆ ಅಡಿಯಲ್ಲಿ 50,000 ಕ್ಕಿಂತ ಹೆಚ್ಚು ಹಾಗೂ ಐದು ಲಕ್ಷಕ್ಕಿಂತ ಕಡಿಮೆ ಸಾಲ ಪಡೆದುಕೊಳ್ಳುವವರು ಈ ಒಂದು ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ
ತರುಣ್ ಸಾಲ ಯೋಜನೆ:- 5 ಲಕ್ಷಕ್ಕಿಂತ ಮೇಲ್ಪಟ್ಟು ಹಾಗೂ 10 ಲಕ್ಷ ರೂಪಾಯಿಗಿಂತ ಕೆಳಗಡೆ ಸಾಲ ಪಡೆಯುವಂತ ಜನರಿಗೆ ಈ ತರುಣ್ ಸಾಲ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ
ತರುಣ್ ಪ್ಲಸ್ ಸಾಲ ಯೋಜನೆ:- 10 ಲಕ್ಷದಿಂದ 20 ಲಕ್ಷದವರೆಗೆ ಸಾಲ ಪಡೆಯುವಂತ ಜನರು ಈ ತರುಣ್ ಪ್ಲಸ್ ಸಾಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು
ಯಾವ ಉದ್ದೇಶಕ್ಕೆ ಸಾಲ ನೀಡಲಾಗುತ್ತದೆ (Mudra loan apply).?
- ಉದ್ಯಮಿಗಳಿಗಾಗಿ ಸಾಲ ಪಡೆಯಬಹುದು
- ಉದ್ದೇಶಗಳಿಗಾಗಿ ಸಾಲ ಪಡೆಯಬಹುದು
- ವಾಣಿಜ್ಯ ಸಾಲ
- ಸಾರಿಗೆ ವಾಹನ ಸಾಲ
- ವಾಣಿಜ್ಯ ವಾಹನ ಸಾಲ
- ವಾಣಿಜ್ಯ ಘಟಕ ಮತ್ತು ಯಂತ್ರೋಪಕರಣಗಳಿಗೆ ಸಾಲ
- ಕೃಷಿ ಸಂಬಂಧಿತ ಹಾಗೂ ಕೃಷಿಯ ತರ ಆದಾಯ ಉತ್ಪಾದನೆಯ ಘಟಕಗಳ ನಿರ್ಮಾಣ ಹಾಗೂ ಚಟುವಟಿಕೆಗಳಿಗೆ ಸಾಲ
- ವ್ಯಾಪಾರಿಗಳು ಹಾಗೂ ವ್ಯಾಪಾರ ಅಂಗಡಿಗಳಿಗೆ ಮತ್ತು ಇತರ ಅಂಗಡಿ ಮಾಳಿಗೆಗಳ ತೆರೆಯಲು ಸಾಲ ಸೌಲಭ್ಯ
- ಇತರೆ ವ್ಯಾಪಾರಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (Mudra loan apply).?
ನೀವು ಮುದ್ರಾ ಯೋಜನೆ ಅಡಿಯಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡಲು ಹಾಗೂ ವ್ಯಾಪಾರ ಪ್ರಾರಂಭ ಮಾಡಲು ಅಥವಾ ಇತರ ಯಾವುದೇ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಉತ್ಪಾದನೆ ಹಾಗೂ ಸೇವೆಗಳನ್ನು ಒದಗಿಸಲು ಬಯಸಿದರೆ ಹಾಗೂ ವ್ಯವಹಾರ ಮಾಡಲು ಬಯಸಿದರೆ ನೀವು ಮುದ್ರಾ ಯೋಜನೆ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ನಿಮ್ಮ ಹತ್ತಿರದ ಯಾವುದೇ ವಾಣಿಜ್ಯ ಬ್ಯಾಂಕುಗಳಲ್ಲಿ ಅಥವಾ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ನೀವು 10 ಲಕ್ಷ ರೂಪಾಯಿಗಿಂತ ಕಡಿಮೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ಅಥವಾ ಕೆಳಗಡೆ ನೀಡಿದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ನಾವು ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://udyamimitra.in
ಅಥವಾ
www.modra.org.in/
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಹೊಸ ಮಾಹಿತಿಗಳು ನಿಮಗೆ ಸಿಗುತ್ತವೆ
11 thoughts on “Mudra loan apply: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ”