gruhalakshmi 20Th Instalment:- ಇಂದು ಗೃಹಲಕ್ಷ್ಮಿ 2000 (money ) ಹಣ ಬಿಡುಗಡೆ ಮಾಡಲಾಗಿದೆ (status) ಈ ರೀತಿ ಸ್ಟೇಟಸ್ ಚೆಕ್ ಮಾಡಿ,
ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮಹಿಳೆಯರಿಗೆ ಇಷ್ಟವಾದಂತ ಯೋಜನೆ ಎಂದರೆ ಅದು ನಮ್ಮ ಕರ್ನಾಟಕದಲ್ಲಿ ಜಾರಿ ಇರುವ ಗೃಹಲಕ್ಷ್ಮಿ ಯೋಜನೆಯಾಗಿದೆ ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ವರ್ಗಾವಣೆ ಮಾಡಲಾಗುತ್ತಿದೆ ಆದರೆ ಕಳೆದ 3 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಹಾಗಾಗಿ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.!
ಗೃಹಲಕ್ಷ್ಮಿ ಯೋಜನೆಯ ಹಣ ರೂ.2000 ಬಿಡುಗಡೆ (gruhalakshmi 20Th Instalment).?
ಇಂದು ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಆದ್ದರಿಂದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಿ. ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಫೆಬ್ರವರಿ ಹಾಗೂ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣ ಇನ್ನು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಆದರೆ ಇದೀಗ ಪೆಂಡಿಂಗ್ ಇರುವಂತಹ ಮೂರು ಕಂತಿನ ಹಣದಲ್ಲಿ ಒಂದು ಕಂತಿನ ಹಣ ಜಮಾ ಮಾಡಲಾಗಿದೆ.
ಹೌದು ಸ್ನೇಹಿತರೆ ಈ ಮೇ ತಿಂಗಳ ಅಂತ್ಯದ ಒಳಗಡೆ ಪೆಂಡಿಂಗ್ ಇರುವ ಮೂರು ತಿಂಗಳ ಎಲ್ಲಾ ಕಂತಿನ ಹಣ ಜಮಾ ಮಾಡಲಾಗುತ್ತೆ ಎಂದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದರು ಆದರೆ ಇದೀಗ ಒಂದು ಕಂಚಿನ ಹಣ ಜಮಾ ಮಾಡಲಾಗಿದ್ದು ಉಳಿದ ಕಂತಿನ ಹಣ ಶೀಘ್ರದಲ್ಲಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಗೃಹಲಕ್ಷ್ಮಿ ಹಣದ ಸ್ಟೇಟಸ್ (gruhalakshmi 20Th Instalment) ಚೆಕ್ ಮಾಡುವುದು ಹೇಗೆ..?
ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡಲು ಮಹಿಳೆಯರು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಕರ್ನಾಟಕ DBT ಸ್ಟೇಟಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಗೃಹಲಕ್ಷ್ಮಿ ಫಲಾನುಭವಿವ ಆಧಾರ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
ನಂತರ ಈ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ನೀವು ಗೃಹಲಕ್ಷ್ಮಿ ಸ್ಕೀಮ್ ಅಥವಾ ಯೋಜನೆ ಎಂದು ಸೆಲೆಕ್ಟ್ ಮಾಡಿಕೊಳ್ಳಿ
ನಂತರ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆದ ಬಗ್ಗೆ ಮಾಹಿತಿ ಸಿಗುತ್ತದೆ ಹಾಗೂ ನೆನ್ನೆ ಜಮಾ ಆದ ಹಣದ ಮಾಹಿತಿಯನ್ನು ನಾವು ಕೆಳಗಡೆ ಇಮೇಜ್ ಮೂಲಕ ಹಾಕಿದ್ದೇವೆ

ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹಾಗೂ ಗೃಹಲಕ್ಷ್ಮಿ ಯೋಜನೆ ಯಿಂದ ಹಣ ಯಾವಾಗ ಬಿಡುಗಡೆಯಾಗುತ್ತೆ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಪ್ರತಿದಿನ ಹಾಗೂ ಸರ್ಕಾರ ಕಡೆಯಿಂದ ಹೊಸ ಅಪ್ಡೇಟ್ ಬಂದಾಗ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು