ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಗೃಹಲಕ್ಷ್ಮಿ ಹಣ 3 ತಿಂಗಳಿಗೊಮ್ಮೆ ಅಷ್ಟೇ ಕೊಡುತ್ತೇವೆ, H.M ರೇವಣ್ಣ

ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಗೃಹಲಕ್ಷ್ಮಿ ಹಣ 3 ತಿಂಗಳಿಗೊಮ್ಮೆ ಅಷ್ಟೇ ಕೊಡುತ್ತೇವೆ, H.M ರೇವಣ್ಣ

ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಜಾರಿಗೆ ತಂದ ಪ್ರಮುಖ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ, ಇದೀಗ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್ಎಂ ರೇವಣ್ಣ ಅವರು ಹೊಸ ಅಪ್ಡೇಟ್ ನೀಡಿದ್ದಾರೆ, ಇದು ಮಹಿಳೆಯರಿಗೆ ಬೇಸರದ ಸಂಗತಿ ಎಂದು ಹೇಳಬಹುದು ಹಾಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮಾಹಿತಿ ತಿಳಿದುಕೊಳ್ಳೋಣ

 

ಗೃಹಲಕ್ಷ್ಮಿ ಯೋಜನೆ..?

ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವುದು ಹಾಗೂ ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಯಿತು ಮತ್ತು ಈ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣ ಹಾಕುವಂತ ಯೋಜನೆ ಯಾವುದೆಂದರೆ ಅದು ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆ

 

ಆದರೆ ಕಳೆದ ಎರಡು ಮೂರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಮೂಲಕ ಹಣ ಜಮಾ ಆಗುತ್ತಿಲ್ಲ ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಸ್ಪಷ್ಟ ಮಾಹಿತಿ ನೀಡಿದ್ದಾರೆ ಇನ್ನೂ ಒಂದು ವಾರದ ಒಳಗಡೆ ಹಣ ಜಮಾ ಆಗುತ್ತೆ ಎಂದು ಮಾಹಿತಿ ತಿಳಿಸಿದ್ದಾರೆ.

WhatsApp Group Join Now
Telegram Group Join Now       

ಇದೀಗ ಗ್ಯಾರೆಂಟಿ ಯೋಜನೆಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಗ್ಯಾರಂಟಿ ಸಮಿತಿ ರಚನೆ ಮಾಡಿದ್ದು ಈ ಸಮಿತಿಯ ಅಧ್ಯಕ್ಷರನ್ನಾಗಿ H.M ರೇವಣ್ಣನ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದ್ದು ಈ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ನೀಡಿದ್ದಾರೆ

 

ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳಿಗೊಮ್ಮೆ ಬಿಡುಗಡೆ..?

ಹೌದು ಸ್ನೇಹಿತರೆ ಗ್ಯಾರಂಟಿ ಸಮಿತಿಯ ಅಧ್ಯಕ್ಷರನ್ನಾಗಿ ಎಚ್ ಎಂ ರೇವಣ್ಣನವರು ಆಯ್ಕೆಯಾದ ನಂತರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರು ಈ ರೀತಿಯಾಗಿ ತಿಳಿಸಿದ್ದಾರೆ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣವನ್ನು ನಾವು ಮೂರು ತಿಂಗಳಿಗೆ ಒಮ್ಮೆ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ದೊಡ್ಡ ಹೇಳಿಕೆ ನೀಡಿದ್ದಾರೆ,

ಹೌದು ಸ್ನೇಹಿತರೆ ಅವರು ತಿಳಿಸಿರುವ ಮಾಹಿತಿಯ ಪ್ರಕಾರ ಹಣ ಬಿಡುಗಡೆಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ ಈ ಕಾರಣದಿಂದ ಸರ್ಕಾರ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವ ಬದಲಾಗಿ ಮೂರು ತಿಂಗಳಿಗೊಮ್ಮೆ ಒಟ್ಟಿಗೆ 6000 ಹಣ ಬಿಡುಗಡೆ ಮಾಡುವಂತೆ ನಿರ್ಧಾರ ಕೈಗೊಳ್ಳಲು ಯೋಚನೆ ಮಾಡುತ್ತಿದ್ದಾರೆ ಅಂತೆ.

ಮುಂದುವರೆದು ನಾವು ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯ ಹಣ ನಿಲ್ಲಿಸುವುದಿಲ್ಲ ಈ ಯೋಜನೆಯ ನಾವು ಯಥಾಪ್ರಕಾರ ಮುಂದುವರಿಸುತ್ತೇವೆ ಆದರೆ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವ ಬದಲಾಗಿ ತ್ರೈಮಾಸಿಕ ಅಂದರೆ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದೆ. ಎಂದು ಮಾಹಿತಿ ಹಂಚಿಕೊಂಡಿದ್ದಾರೆ

WhatsApp Group Join Now
Telegram Group Join Now       

ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಕಾರಣಗಳು ಕೆಳಗಿನಂತಿವೆ

 

GST ಸಮಸ್ಯೆ ಹಾಗೂ ಇತರ ತಾಂತ್ರಿಕ ಸಮಸ್ಯೆಗಳು..?

ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯ ಸಂದರ್ಭದಲ್ಲಿ ಕೆಲ ಮಹಿಳೆಯರ ಅರ್ಜಿ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುತ್ತಿದ್ದೇವೆ, ಇದರಿಂದ 1.20 ಲಕ್ಷ ಜನರು ಗೃಹಲಕ್ಷ್ಮಿ ಯೋಜನೆಯಿಂದ ಹಣ ಪಡೆಯಲು ಸಾಧ್ಯವಾಗಿಲ್ಲ ಹಾಗಾಗಿ ಅಂಥವರ ಸಮಸ್ಯೆಯನ್ನು ನಾವು ಪರಿಹರಿಸಲು ಕೆಲ ದಿನಗಳ ಕಾಲ ಕಾಲಾವಕಾಶ ಬೇಕಾಗುತ್ತದೆ ಹಾಗಾಗಿ ನಾವು ಇಲ್ಲಿವರೆಗೂ ಸುಮಾರು 58000 ಜನರ ಸಮಸ್ಯೆಯನ್ನು ಪರಿಹರಿಸಿದ್ದೇವೆ ಮತ್ತು ಉಳಿದವರ ಸಮಸ್ಯೆಗಳನ್ನು ಪರಿಹರಿಸಿ ಶೀಘ್ರದಲ್ಲೇ ಅವರ ಖಾತೆಗೆ ಹಣ ತಲುಪುವಂತೆ ಮಾಡುತ್ತೇವೆ ಎಂದು ಮಾಹಿತಿ ತಿಳಿಸಿದ್ದಾರೆ

ಇಷ್ಟೇ ಅಲ್ಲದೆ ಹಣ ವರ್ಗಾವಣೆ ಸಂದರ್ಭದಲ್ಲಿ ಕೆಲವೊಂದು ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಹಣ ಬಿಡುಗಡೆಗೆ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಾಗಿ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡಲು ತೀರ್ಮಾನ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ

 

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪ್ರತಿಕ್ರಿಯೆ ಹೇಗಿದೆ..?

ಈ ಹೇಳಿಕೆ ಬರುತ್ತಿದ್ದಂತೆ ಮಾಧ್ಯಮಗಳಲ್ಲಿ ಹಾಗೂ ಜನರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ, ಇದಕ್ಕೆ ಕಾರಣ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದ ಉದ್ದೇಶ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ರೂ.2000 ಹಣ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಆದರೆ ಇದೀಗ ರಾಜ್ಯ ಸರ್ಕಾರ ಮೂರು ತಿಂಗಳು ಒಮ್ಮೆ ಹಣ ಹಾಕಲು ನಿರ್ಧಾರ ಮಾಡಿದರೆ ಸಾಕಷ್ಟು ಮಹಿಳೆಯರು ಸಮಸ್ಯೆಗೆ ಹೆದರಾಗಬಹುದು ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ನಂಬಿಕೊಂಡು ಸಾಕಷ್ಟು ಜನರು ಸಾಲ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದ್ದಾರೆ ಮತ್ತು ಕೆಲವರು ಈ ಹಣ ನಂಬಿಕೊಂಡು ಜೀವನ ಸಾಗುತ್ತಿದ್ದಾರೆ ಹಾಗಾಗಿ ಅಂತವರಿಗೆ ಸಮಸ್ಯೆ ಆಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ

ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೆಳಗಡೆ ಕಾಮೆಂಟ್ ಮೂಲಕ ತಿಳಿಸಬಹುದು ಹಾಗೂ ಇನ್ನಷ್ಟು ಸರಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

kotak bank scholarship eligibility: ಕೋಟಕ್ ಬ್ಯಾಂಕ್ ವತಿಯಿಂದ 1.50 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ.! ಈ ರೀತಿ ಅರ್ಜಿ ಸಲ್ಲಿಸಿ

1 thought on “ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಗೃಹಲಕ್ಷ್ಮಿ ಹಣ 3 ತಿಂಗಳಿಗೊಮ್ಮೆ ಅಷ್ಟೇ ಕೊಡುತ್ತೇವೆ, H.M ರೇವಣ್ಣ”

Leave a Comment

?>