BPL Ration Card Cancelled – ಇಷ್ಟು ಜಮೀನು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ ನಮ್ಮ ರಾಜ್ಯದಲ್ಲಿ ಇದೀಗ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಕಾರ್ಯಾಚರಣೆ ಪ್ರಗತಿಯಲ್ಲಿ ಇದೆ, ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಸರಕಾರ ಜೋರು ಮಾಡಿದ್ದು ಇದೀಗ ಹೊಸ ಮಾಹಿತಿ ಬಂದಿದೆ ಅದು ಏನಪ್ಪಾ ಅಂದರೆ ನಿಮ್ಮ ಹೆಸರಿನಲ್ಲಿ 7.5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗುತ್ತದೆ ಅಥವಾ ಕ್ಯಾನ್ಸಲ್ ಮಾಡಲಾಗುತ್ತದೆ ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಕಾರ್ಯಾಚರಣೆ (BPL Ration Card Cancelled).?
ಹೌದು ಗೆಳೆಯರೇ, ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಇರುವಂತ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದತಿಗೆ ಮುಂದಾಗಿವೆ ಈ ಒಂದು ಕಾರ್ಯ ಕಳೆದ ಒಂದು ವರ್ಷದಿಂದ ಪ್ರಗತಿಯಲ್ಲಿ ಇದೆ, ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಕಾರ್ಯಚರಣೆ ಆರಂಭ ಮಾಡಿದ್ದು ನಮ್ಮ ರಾಜ್ಯದಲ್ಲಿ ಇದೀಗ ಸುಮಾರು 7,76,206 ಬಿಪಿಎಲ್ ಕಾರ್ಡುಗಳು ಅಕ್ರಮ ಎಂದು ಪತ್ತೆ ಹಚ್ಚಲಾಗಿದೆ ಇದರಲ್ಲಿ ಸುಮಾರು 2,09,048 ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದುಗೊಳಿಸಲಾಗಿದೆ

ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿ ಕಾರ್ಯಚರಣೆ ಪ್ರಾರಂಭ ಮಾಡಲಾಗಿದ್ದು ನಮ್ಮ ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕಿಂತ ಹೆಚ್ಚು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಪತ್ತೆ ಹಚ್ಚಲಾಗಿದೆ. ಇದೀಗ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ ಅದು ಏನಪ್ಪಾ ಅಂದರೆ 7.5 ಎಕರೆ ಜಮೀನು ಬಂದಿದ್ದರೆ ಅಂತವರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ
7.5 ಎಕರೆ ಜಮೀನು ಇದ್ದವರ ಬಿಪಿಎಲ್ ಕಾರ್ಡ್ (BPL Ration Card Cancelled).?
ಹೌದು ಗೆಳೆಯರೆ ಈ ಹಿಂದೆನೇ ಈ ಒಂದು ನಿಯಮ ಜಾರಿಯಲ್ಲಿ ಇತ್ತು ಆದರೆ ತುಂಬಾ ಜನರು ಜಮೀನು ಹೊಂದಿದರು ಕೂಡ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರು. ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಪಿಎಲ್ ರೇಷನ್ ಕಾರ್ಡ್ ಅಂದರೆ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ರೇಷನ್ ಕಾರ್ಡ್ ಕುಟುಂಬದವರು ಎಲ್ಲಾ ನೇಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ನೀಡಲಾಗಿದೆ
ಅದೇ ರೀತಿ ಇದೀಗ 7.5 ಎಕರೆ ಜಮೀನು ಹೊಂದಿದಂತ ಸುಮಾರು 34,710 ಬಿಪಿಎಲ್ ರೇಷನ್ ಕಾರ್ಡ್ ಕುಟುಂಬಗಳನ್ನು ಪತ್ತೆಹಚ್ಚಲಾಗಿದೆ ಹಾಗೂ ಅಂತವರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ಗಳಾಗಿ ಮಾರ್ಪಾಡು ಮಾಡಲಾಗಿದೆ ಹಾಗಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದವರ ಹೆಸರಿನಲ್ಲಿ 7.5 ಎಕರೆಗಿಂತ ಜಮೀನು ಇದ್ದರೆ ನಿಮ್ಮ ರೇಷನ್ ಕಾರ್ಡ್ ಆಗುತ್ತದೆ
ಐಟಿ ರಿಟರ್ನ್ಸ್ ಮಾಡುವವರಿಗೆ ಬಿಗ್ ಶಾಕ್ (BPL Ration Card Cancelled).?
ಹೌದು ಗೆಳೆಯರೆ ಇದರ ಜೊತೆಗೆ ಬ್ಯಾಂಕು ಹುದ್ದೆಗಳು ಹಾಗೂ ಖಾಸಗಿ ಉದ್ಯೋಗಿಗಳು ಮತ್ತು ಸರಕಾರಿ ಉದ್ಯೋಗಿಗಳು ಸಣ್ಣ ಪುಟ್ಟ ವ್ಯಾಪಾರ ಮಾಡಲು ಐಟಿ ರಿಟರ್ನ್ಸ್ ಫೈಲ್ ಮಾಡುತ್ತಿರುತ್ತಾರೆ ಅಂತವರಿಗೆ ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ.
ಹೌದು ಗೆಳೆಯರೇ 1.20 ಲಕ್ಷ ರೂಪಾಯಿಗಿಂತ ಅಧಿಕ ವಾರ್ಷಿಕ ಆದಾಯ ಹೊಂದಿದ ಕುಟುಂಬದವರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಂದಾಗಿವೆ, ಈ ಪ್ರಕಾರ ನಮ್ಮ ರಾಜ್ಯದಲ್ಲಿ ಸುಮಾರು 5,80,415 ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪತ್ತೆಹಚ್ಚಲಾಗಿದೆ ಇದರಲ್ಲಿ 1,00,592 ಬಿಪಿಎಲ್ ರೇಷನ್ ಕಾರ್ಡ್ ದರ ಮೇಲೆ ಈಗಾಗಲೇ ಕ್ರಮ ಜರುಗಿಸಲಾಗಿದೆ ಹಾಗೂ ಈ ರೇಷನ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಮಾರ್ಪಾಡು ಮಾಡಲಾಗಿದೆ
ಹಾಗಾಗಿ ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ನೀವು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿ ಮಾಡಿರುವ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಇರುವ ಎಲ್ಲಾ ನಿಯಮಗಳನ್ನು ಮತ್ತು ರೂಲ್ಸ್ ಗಳನ್ನು ಪಾಲಿಸಿ ಹೆಚ್ಚಿನ ಮಾಹಿತಿಗಾಗಿ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಈ ಮಾಹಿತಿ ನಿಮಗೆ ಇಷ್ಟವಾದರೆ ಒಂದು ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಬಹುದು
Yuva Nidhi Scheme 2025 – ಯುವನಿಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ.! ಹೊಸ ನಿಯಮ ಬಿಡುಗಡೆ, ಇಲ್ಲಿದೆ ಮಾಹಿತಿ









