ವಾಟ್ಸಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ 10 ಲಕ್ಷ ಕಳೆದುಕೊಂಡ ವ್ಯಕ್ತಿ.! ನಿಮಗೂ ಈ ಲಿಂಕ್ ಬಂದಿದೆಯಾ ತಕ್ಷಣ ಮಾಹಿತಿ ನೋಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ನಿಮಗೆ ತಿಳಿಸುವುದೇನೆಂದರೆ ನಮ್ಮ ಚಿಕ್ಕಮಂಗಳೂರು ನಗರದ ಒಬ್ಬ ವ್ಯಕ್ತಿಗೆ ವಾಟ್ಸಪ್ ನಲ್ಲಿ ಒಂದು ಲಿಂಕ್ ಬಂದಿದೆ ಅದರ ಮೇಲೆ ಕ್ಲಿಕ್ ಮಾಡಿ ಆ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ತನ್ನ ಎಲ್ಲಾ ವೈಯಕ್ತಿಕ ವಿವರಗಳನ್ನು ಎಂಟರ್ ಮಾಡಿದ್ದೇನೆ ನಂತರ ಹ್ಯಾಕರ್ಸ್ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾನೆ ಈ ಘಟನೆಗೆ ಸಂಬಂಧಿಸಿದಂತೆ ಸೈಬರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇತ್ತೀಚಿಗೆ ಶೇರ್ ಆಗುತ್ತಿರುವ ಪಿಎಂ ಕಿಸಾನ್ ಯೋಜನೆಯ ಲಿಂಕ್..?
ಹೌದು ಸ್ನೇಹಿತರೆ ಇತ್ತೀಚೆಗೆ ವಾಟ್ಸಾಪ್ ಮೂಲಕ ಹಾಗೂ ವಾಟ್ಸಪ್ ನಲ್ಲಿ ಇರುವಂತ ವಿವಿಧ ಗ್ರೂಪ್ಗಳಲ್ಲಿ ಪಿಎಂ ಕಿಸಾನ್ ಯೋಜನೆಯ 2025 ಕ್ಕೆ ಸಂಬಂಧಿಸಿದಂತೆ ಹೊಸ ಅಪ್ಲಿಕೇಶನ್ ಬಂದಿದೆ ಎಂದು ಲಿಂಕ್ ಶೇರ್ ಮಾಡುತ್ತಿದ್ದಾರೆ.! ಅಧಿಕೃತ ಮಾಹಿತಿಯ ಪ್ರಕಾರ ಯಾವುದೇ ಪಿಎಂ ಕಿಸಾನ್ ಯೋಜನೆಯ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿಲ್ಲ ಹಾಗಾಗಿ ನೀವು ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡರೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲಾ ಹಣವನ್ನು ಕಳೆದುಕೊಳ್ಳಬಹುದು ಇದರ ಜೊತೆಗೆ ನಿಮ್ಮ ವೈಯಕ್ತಿಕ ಮಾಹಿತಿಗಳು ಹ್ಯಾಕರ್ಸ್ ಕೈಗಳಿಗೆ ಸೇರಲಿವೆ. ಹಾಗಾಗಿ ನೀವು ಅಜ್ಞಾತ ಮೂಲಗಳಿಂದ ಬಂದ ಯಾವುದೇ ಅಪ್ಲಿಕೇಶನ್ ಲಿಂಕ್ ಡೌನ್ಲೋಡ್ ಮಾಡುವುದು ಅಥವಾ ಶೇರ್ ಮಾಡುವುದು ಮಾಡಬಾರದು

10 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿಯ ವಿವರ..?
ಮೇ 20 ಚಿಕ್ಕಮಗಳೂರು ನಗರದಲ್ಲಿ ಒಬ್ಬ ವ್ಯಕ್ತಿಗೆ ಅಜ್ಞಾತ ಮೂಲಗಳಿಂದ ವಾಟ್ಸಾಪ್ ಗ್ರೂಪ್ ನಲ್ಲಿ ಒಂದು ಪಿಎಂ ಕಿಸಾನ್ ಯೋಜನೆಯ ಲಿಂಕ್ ಶೇರ್ ಮಾಡಲಾಗುತ್ತದೆ ನಂತರ ಆ ವ್ಯಕ್ತಿ ಆ ಲಿಂಕನ್ನು ತನ್ನ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳುತ್ತಾನೆ ನಂತರ ಹ್ಯಾಕರ್ಸ್ ಆ ವ್ಯಕ್ತಿಯ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಹಣವನ್ನು ಹ್ಯಾಕರ್ಸ್ ಅಕೌಂಟಿನಿಂದ ತೆಗೆದುಕೊಂಡಿದ್ದಾರೆ.! ನಂತರ ಈ ಘಟನೆ ನಡೆದ ಎರಡು ದಿನಗಳ ಬಳಿಕ ಆ ವ್ಯಕ್ತಿಯು ಮೇ 22 ರಂದು ತನ್ನ ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲೆ ಮಾಡಿದ್ದಾನೆ
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ..?
ಹೌದು ಸ್ನೇಹಿತರೆ ಇತ್ತೀಚಿಗೆ ವಾಟ್ಸಾಪ್ ಗ್ರೂಪ್ ಹಾಗೂ ಸಾಮಾನ್ಯ ವಾಟ್ಸಪ್ ಮೆಸೇಜ್ ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಅಜ್ಞಾತ ಲಿಂಕ್ ಒಂದು ಸರ್ಕ್ಯುಲೇಟ್ ಆಗುತ್ತಿದೆ.! ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ ಏಕೆಂದರೆ ಈ ಒಂದು ಲಿಂಕ್ ಬಳಸಿಕೊಂಡು ಇನ್ಸ್ಟಾಲ್ ಮಾಡಿಕೊಂಡ ಯಾವುದೇ ಅಪ್ಲಿಕೇಶನ್ ನಿಮ್ಮ ಗೌಪ್ಯ ಮಾಹಿತಿಗಳು ಹಾಗೂ ನಿಮ್ಮ ಅಕೌಂಟ್ ಡೀಟೇಲ್ಸ್ ಇತರ ಎಲ್ಲಾ ಗೌಪ್ಯ ಮಾಹಿತಿಗಳು ಹ್ಯಾಕರ್ಸ್ ಕೈಗೆ ಸಿಗಬಹುದು.!
ಆದ್ದರಿಂದ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ನಿಮ್ಮ ವಾಟ್ಸಪ್ ಗ್ರೂಪ್ನಲ್ಲಿ ಅಥವಾ ಇತರ ಯಾವುದೇ ಮೆಸೇಜ್ ಆಪ್ ನಲ್ಲಿ ಅಜ್ಞಾತ ಮೂಲಗಳಿಂದ ಬಂದಂತ ಯಾವುದೇ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಒಂದು ವೇಳೆ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಂಡರೆ ನಿಮ್ಮ ಅಕೌಂಟ್ ನಲ್ಲಿದ್ದ ಬ್ಯಾಲೆನ್ಸ್ ಎಲ್ಲಾ ಖಾಲಿ ಆಗುತ್ತೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ
ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳು.?
- ಅಜ್ಞಾತ ಮೂಲಗಳಿಂದ ಬರುವಂತಹ ಯಾವುದೇ ಲಿಂಕಿನ ಮೇಲೆ ಕ್ಲಿಕ್ ಮಾಡಬಾರದು
- ಅಜ್ಞಾತ ಮೂಲಗಳಿಂದ ಬರುವಂತಹ ಯಾವುದೇ APK ಪೈಲ್ಸ್ ಡೌನ್ಲೋಡ್ ಮಾಡಿಕೊಳ್ಳಬಾರದು
- ನಿಮಗೆ ಗೊತ್ತಿರುವಂತ ಅಥವಾ ನಿಮಗೆ ಮಾಹಿತಿ ಇಲ್ಲದಂತ ಯಾವುದೇ ಅಪ್ಲಿಕೇಶನ್ ಗಳಲ್ಲಿ ನಿಮ್ಮ ಹೆಸರು ಹಾಗೂ ಬ್ಯಾಂಕ್ ಖಾತೆಯ ವಿವರ ಮತ್ತು ಸುರಕ್ಷತೆಯ ಪಿನ್ ಮುಂತಾದವುಗಳನ್ನು ಬಳಸಬಾರದು
- ಯಾವುದೇ ಅಜ್ಞಾತ ಮೂಲ ವ್ಯಕ್ತಿಗಳು ಕರೆ ಮಾಡಿದಾಗ ಅಥವಾ ಮೆಸೇಜ್ ಮೂಲಕ ಓಟಿಪಿ ಕೇಳಿದರೆ ನೀವು ಉತ್ತರಿಸಬಾರದು
- ನಿಮಗೆ ಯಾವುದೇ ರೀತಿ ಸೈಬರ್ ಅಪರಾಧ ಶಂಕೆ ಉಂಟಾದರೆ ನೀವು ತಕ್ಷಣ ನಿಮ್ಮ ಹತ್ತಿರದ ಸೈಬರ್ ಪೋಲಿಸ್ ಠಾಣೆಗೆ ದೂರು ನೀಡಿ
ಸ್ನೇಹಿತರೆ ಇದೇ ರೀತಿ ಉಪಯುಕ್ತ ಮಾಹಿತಿಗಳ ಬಗ್ಗೆ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ ಇದರಿಂದ ಪ್ರತಿದಿನ ಹೊಸ ಮಾಹಿತಿ ಸಿಗುತ್ತದೆ
2 thoughts on “ವಾಟ್ಸಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ 10 ಲಕ್ಷ ಕಳೆದುಕೊಂಡ ವ್ಯಕ್ತಿ.! ನಿಮಗೂ ಈ ಲಿಂಕ್ ಬಂದಿದೆಯಾ ತಕ್ಷಣ ಮಾಹಿತಿ ನೋಡಿ”