pm kisan 21st installment 2025 – ಪಿಎಂ ಕಿಸಾನ್ 21ನೇ ಕಂತಿನ ರೂ.2000 ಈ ದಿನ ಬಿಡುಗಡೆ.! ಇಲ್ಲಿದೆ ಮಾಹಿತಿ

pm kisan 21st installment 2025 – ಪಿಎಂ ಕಿಸಾನ್ 21ನೇ ಕಂತಿನ ರೂ.2000 ಈ ದಿನ ಬಿಡುಗಡೆ.! ಇಲ್ಲಿದೆ ಮಾಹಿತಿ

ನಮಸ್ಕಾರ ಗೆಳೆಯರೇ ಪ್ರಥಮ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 2000 ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಕಡೆಯಿಂದ ಮಹತ್ವದ ಮಾಹಿತಿ ಹೊರಬಂದಿದೆ. ಹಾಗಾಗಿ ಈ ಸುದ್ದಿ ರೈತರಿಗೆ ಖುಷಿಯ ಸುದ್ದಿ ಎಂದು ಹೇಳಬಹುದು, ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ ಪಿಎಂ ಕಿಸಾನ್ ಯೋಜನೆಯ ಹೊಸ ಮಾಹಿತಿ ಏನು? ಹಾಗೂ 21ನೇ ಕಂತಿನ ರೂ. 2000 ಹಣ ಯಾವಾಗ ಬಿಡುಗಡೆಯಾಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ (pm kisan 21st installment 2025).?

ಸ್ನೇಹಿತರೆ ಕೇಂದ್ರ ಸರ್ಕಾರ 2019ರಲ್ಲಿ ಪ್ರಧಾನ ಮಂತ್ರಿ ಸನ್ಮಾನ್ ಕಿಸಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ನಮ್ಮ ಭಾರತ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೇಂದ್ರ ಸರಕಾರ ವರ್ಷಕ್ಕೆ ರೂ.6000 ಹಣವನ್ನು ಮೂರು ಕಂತಿನ ರೂಪದಲ್ಲಿ ನೇರವಾಗಿ ಪ್ರತಿ ಕಂತಿಗೆ ರೂ.2000 ಹಣ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಯೋಜನೆಯಾಗಿದೆ

pm kisan 21st installment 2025
pm kisan 21st installment 2025

 

ರೈತರು ಈ ಒಂದು ಯೋಜನೆಯ ಮೂಲಕ ಇಲ್ಲಿವರೆಗೂ 20 ಕಂತಿನ ಹಣ ಅಂದರೆ ಸರಿಸುಮಾರು 40,000 ಹಣವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದರೆ ಎಂದು ಹೇಳಬಹುದು ಹಾಗೂ 21ನೇ ಕಂತಿನ ಹಣಕ್ಕಾಗಿ ಎಲ್ಲಾ ರೈತರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಮಾಹಿತಿ ಬಂದಿದ್ದು ಈಗ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಪಿಎಂ ಕಿಸನ್ 21ನೇ ಕಂತಿನ ಹಣ ಯಾವಾಗ ಬಿಡುಗಡೆ (pm kisan 21st installment 2025).?

ಸ್ನೇಹಿತರೆ ಕೇಂದ್ರ ಸರ್ಕಾರ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಘೋಷಣೆ ಮಾಡಿಲ್ಲ ಆದರೆ ಕೆಲವೊಂದು ವಿಶ್ವಾಸ ಅರ್ಹ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ 200 ಹಣವನ್ನು ದೇಶದ ಎಲ್ಲಾ ರೈತರ ಖಾತೆಗೆ ನವೆಂಬರ್ ಮೊದಲ ವಾರದಲ್ಲಿ ಅಥವಾ ನವೆಂಬರ್ ತಿಂಗಳಿನಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ

ಹೌದು ಸ್ನೇಹಿತರೆ, ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಮತ್ತು ಇತರೆ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಪ್ರಕೃತಿ ವಿಕೋಪದಿಂದ ಅತಿಹೆಚ್ಚು ಹಾನಿಗೊಳಗಾದ ರೈತರ ಖಾತೆಗೆ ಈಗಾಗಲೇ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಹಾಗಾಗಿ ಉಳಿದ ರಾಜ್ಯಗಳ ರೈತರಿಗೆ ಹಾಗೂ ನಮ್ಮ ಕರ್ನಾಟಕದ ರಾಜ್ಯದ ರೈತರಿಗೆ ನವೆಂಬರ್ ಮೊದಲ ವಾರದಲ್ಲಿ 21ನೇ ಕಂತಿನ ಬಿಡುಗಡೆಯಾಗುವ ಎಲ್ಲಾ ನಿರೀಕ್ಷೆಗಳು ಕಂಡು ಬಂದಿದೆ ಹಾಗಾಗಿ ರೈತರು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಸರು ಹಾಗೂ ಇತರ ವಿವರಗಳನ್ನು ಚೆಕ್ ಮಾಡಿಕೊಳ್ಳಿ.

ಏಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ಹಣ ಜಮಾ ಆಗುವುದಿಲ್ಲ ಇದಕ್ಕೆ ಕಾರಣ ಕೆಲ ರೈತರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಹಾಗೂ ಇತರೆ ಹಲವಾರು ಕಾರಣಗಳಿಂದ ಈ ಯೋಜನೆಯಿಂದ ರೈತರನ್ನು ಕೈ ಬಿಡಲಾಗುತ್ತದೆ ಆದ್ದರಿಂದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ರೈತರು ತಮ್ಮ ಹೆಸರು ಪರಿಶೀಲನೆ ಮಾಡಿ

 

ಪಿಎಂ ಕಿಸನ್ ಯೋಜನೆ 2000 ಹಣ ಪಡೆಯಲು ರೈತರು ಮಾಡಬೇಕಾದ ಕಡ್ಡಾಯ ಕೆಲಸಗಳು..?

ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು:- ಹೌದು ಗೆಳೆಯರೇ ಸಾಕಷ್ಟು ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರದೇ ಕಾರಣ ರೈತರಿಗೆ 20ನೇ ಕಂತಿನ ಹಣ ಜಮಾ ಆಗಿಲ್ಲ, ಹಾಗಾಗಿ ರೈತರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹಾಗೂ ekyc ಪ್ರಕ್ರಿಯ ಪೂರ್ಣಗೊಳಿಸುವುದು ಮತ್ತು ಕಡ್ಡಾಯವಾಗಿ NPCI ಮ್ಯಾಪಿಂಗ್ ಮಾಡಿಸಬೇಕು ಅಂದರೆ ಮಾತ್ರ ಹಣ ಬರುತ್ತೆ

WhatsApp Group Join Now
Telegram Group Join Now       

ಜಮೀನು ದಾಖಲಾತಿಗಳು ಸರಿಯಾಗಿರಬೇಕು: ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಜಮೀನಿನ ದಾಖಲಾತಿ ಹೆಸರು ಹಾಗೂ ಜಮೀನು ದಾಖಲಾತಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಜಮೀನಿನ ದಾಖಲಾತಿ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿ ಹೆಸರು ಒಂದೇ ಆಗಿರಬೇಕು ಅಂತ ರೈತರಿಗೆ ಮಾತ್ರ ಹಣ ಸಿಗುತ್ತೆ

ಪಿಎಂ ಕಿಸಾನ್ ಯೋಜನೆಯ E-kyc ಕಡ್ಡಾಯ: ಹೌದು ಗೆಳೆಯರೆ ಪಿಎಂ ಕಿಸಾನ್ ಯೋಜನೆ ಅರ್ಜಿ ಸಲ್ಲಿಸಿದ ರೈತರು ಕಡ್ಡಾಯವಾಗಿ ತಮ್ಮ ಅರ್ಜಿಯ E-kyc ಪ್ರಕ್ರಿಯೆ ಪೂರ್ಣಗೊಳಿಸಬೇಕು ಹಾಗಾಗಿ ಇದನ್ನು ಮಾಡಿಸಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಇತರೆ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ

FID ಕ್ರಿಯೇಟ್ ಮಾಡಿಸಿ: ರೈತರು ತಮ್ಮ ಜಮೀನಿಗೆ FID ಕಡ್ಡಾಯವಾಗಿ ಕ್ರಿಯೇಟ್ ಮಾಡಿರಬೇಕು ಅಂದರೆ ಮಾತ್ರ ಪಿಎಂ ಕಿಸಾನ್ 21ನೇ ಕಂತಿನ 2000 ಹಣ ಬರುತ್ತೆ

 

ರೈತರು ತಮ್ಮ ಹೆಸರು ಹಾಗೂ ಇತರೆ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ (pm kisan 21st installment 2025)..?

ಹೌದು ಸ್ನೇಹಿತರೆ ರೈತರು ಪಿಎಂ ಕಿಸಾನ್ ಯೋಜನೆಯ ಅರ್ಜಿಯ ಸ್ಥಿತಿ ಹೇಗಿದೆ ಹಾಗೂ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಯಾಗುತ್ತದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ನೀವು ಈ ರೀತಿಯಾಗಿ ತುಂಬ ಸುಲಭವಾಗಿ ತಿಳಿದುಕೊಳ್ಳಬಹುದು

  • ರೈತರು ಮೊದಲು ಅಧಿಕೃತ ವೆಬ್ಸೈಟ್ pmkisan.gov.in ಜಾಲತಾಣಕ್ಕೆ ಭೇಟಿ ನೀಡಬೇಕು
  • ನಂತರ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಮೂಲಕ ಈ ಜಾಲತಾಣದಲ್ಲಿ ಲಾಗಿನ್ ಮಾಡಿ ಅಥವಾ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ನಂತರ ರೈತರು ಫಾರ್ಮರ್ಸ್ ಕಾರ್ನರ್ ನಲ್ಲಿ farmers corner ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ
  • ನಂತರ ಸ್ಥಿತಿ ಪರಿಶೀಲನೆ ಅಥವಾ beneficiary status ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಂತರ ರೈತರು ತಮ್ಮ ವಿವರಗಳಾದ ಆಧಾರ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆ ಮತ್ತು ಮೊಬೈಲ್ ನಂಬರ್ ನಮೂದಿಸಿ
  • ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ರೈತರು ತಮ್ಮ ಪಿಎಂ ಕಿಸಾನ್ ಯೋಜನೆಯ ಸ್ಥಿತಿ ಹಾಗೂ ಇತರೆ ಮಾಹಿತಿಗಳನ್ನು ತಿಳಿದುಕೊಳ್ಳಬಹುದು

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

LPG Price Cut – LPG ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್.! 01 ನವೆಂಬರ್ 2025 ರಿಂದ ಬೆಲೆ ಕಡಿಮೆಯಾಗಲಿದೆ, ಇಲ್ಲಿದೆ ಮಾಹಿತಿ

Leave a Comment

?>