ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ.! ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ
ನಮಸ್ಕಾರ ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಮತ್ತು ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಬಯಸುವವರಿಗೆ ಮತ್ತು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಬಯಸುವಂತ ಜನರಿಗೆ ಇದೀಗ ಸುವರ್ಣ ಅವಕಾಶ..
ಹೌದು ಸ್ನೇಹಿತರೆ, ಈ ಎಲ್ಲಾ ಕೆಲಸ ಮಾಡಲು ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ ಹಾಗಾಗಿ ಈ ಒಂದು ಲೇಖನಿಯ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವಾಗ ಎಂಬ ವಿವರಕ್ಕೆ ಸಂಬಂಧಿಸಿದ ಮಾಹಿತಿ ತಿಳಿಯೋಣ..
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ..?
ಹೌದು ಸ್ನೇಹಿತರೆ ಇಂದು ಅಂದರೆ ಜುಲೈ 31 2025 ರಂದು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಇದೆ.! ಆದ್ದರಿಂದ ಅರ್ಜಿ ಸಲ್ಲಿಕೆ ಮಾಡಲು ಬಯಸುವಂಥವರು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು…

ಹೌದು ಗೆಳೆಯರೇ ನಿಮ್ಮ ಹತ್ತಿರ ಎರಡು ವರ್ಷ ಹಳೆಯ ಈ ಶ್ರಮ ಕಾರ್ಡ್ ಇದ್ದರೆ ಅಥವಾ ಎರಡು ವರ್ಷಕ್ಕಿಂತ ಹಳೆಯದಾದ ಈ ಶ್ರಮ ಕಾರ್ಡು ಒಂದಿದ್ದರೆ ನೀವು ಕೂಡಲೇ ನಿಮ್ಮ ಹತ್ತಿರದ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಬಹುದು

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ..?
ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಇಂದು ಅಂದರೆ ದಿನಾಂಕ 31 ಜುಲೈ 2025 ರಂದು ತಿದ್ದುಪಡಿ ಮಾಡಲು ಕೊನೆಯ ದಿನಾಂಕವಿದೆ..!
ಹೌದು ಸ್ನೇಹಿತರೆ ಈ ಹಿಂದೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ದಿನಾಂಕವನ್ನು ವಿಸ್ತರಣೆ ಮಾಡಿತ್ತು ಹಾಗೂ ಸುದೀರ್ಘವಾಗಿ ಕಳೆದ ಏಳು ತಿಂಗಳಿಂದ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಮತ್ತು ಕೆಲವೊಂದು ಮಾಹಿತಿಯ ಪ್ರಕಾರ ಇನ್ನು ತಿದ್ದುಪಡಿ ಮಾಡುವ ದಿನಾಂಕ ವಿಸ್ತರಣೆ ಮಾಡಬಹುದು ಎಂದು ಮಾಹಿತಿ ತಿಳಿದು ಬಂದಿದೆ..
ಹಾಗಾಗಿ ನಾವು ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆಯಾದರೆ ಮತ್ತೊಂದು ಲೇಖನಿಯ ಮೂಲಕ ನಿಮಗೆ ಮಾಹಿತಿ ತಿಳಿಸುತ್ತೇವೆ. ಹಾಗಾಗಿ ಬೇಗ ಮಾಹಿತಿ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಬಹುದು
ಸ್ನೇಹಿತರೆ ನೀವು ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಬಯಸುತ್ತಿದ್ದೀರಾ ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವ ನ್ಯಾಯಬೆಲೆ ಅಂಗಡಿ ಹಾಗೂ ಊರು ಮತ್ತು ಇತರ ವಿಳಾಸದ ತಿದ್ದುಪಡಿ ಮುಂತಾದ ರೇಷನ್ ಕಾರ್ಡ್ ಗೆ ಸಂಬಂಧಿಸಿದ ತಿದ್ದುಪಡಿ ಮಾಡಲು ಬಯಸುತ್ತಿದ್ದರೆ ಕೂಡಲೇ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ಈ ಶ್ರಮ ಕಾರ್ಡ್ (ಹೊಸ ರೇಷನ್ ಕಾರ್ಡ್ ಅರ್ಜಿ)
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಆರು ವರ್ಷದ ಮಕ್ಕಳಿಗೆ ಜನನ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಇತರೆ ಅಗತ್ಯ ದಾಖಲಾತಿಗಳು
ಸ್ನೇಹಿತರೆ ನಿಮಗೆ ಇದೇ ರೀತಿ ರೇಷನ್ ಕಾರ್ಡ್ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
Karnataka Rains Alert: ಮುಂದಿನ ಏಳು ದಿನಗಳವರೆಗೆ ಈ ಭಾಗದಲ್ಲಿ ಭಾರಿ ಮಳೆ.! ಇಲ್ಲಿದೆ ನೋಡಿ ಹವಾಮಾನ ಇಲಾಖೆ ವರದಿ