Gruhalakshmi: ಗೃಹಲಕ್ಷ್ಮಿ ಯೋಜನೆಯ ಮೇ-ಜೂನ್ ತಿಂಗಳ ₹4,000 ಹಣ ಜಮಾ.! ನಿಮ್ಮ ಖಾತೆಗೆ ಬಂದಿದ್ದೀಯಾ.! ಚೆಕ್ ಮಾಡಿ
ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯ ಪಡೆದ ಹಾಗೂ ಅತಿ ಹೆಚ್ಚು ಮಹಿಳಾ ಫಲಾನುಭವಿಗಳು ಹೊಂದಿದ ಯೋಜನೆ ಯಾವುದು ಎಂದರೆ ತಕ್ಷಣ ನೆನಪಾಗುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಎಂದು ಹೇಳಬಹುದು,
ಇದೀಗ ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಮೇ ತಿಂಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ ಹಾಗಾಗಿ ನಾವು ಈ ಲೇಖನೆಯಲ್ಲಿ ಯಾರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಮೇ ಮತ್ತು ಜೂನ್ ತಿಂಗಳ ಹಣ ಜಮಾ ಆಗಿದೆ ಎಂಬ ಮಾಹಿತಿ ತಿಳಿಯೋಣ
ಗೃಹಲಕ್ಷ್ಮಿ ಯೋಜನೆ..?
ನಮ್ಮ ರಾಜ್ಯದಲ್ಲಿ ಇರುವಂತ ಮಹಿಳಾ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿರುವ ಪ್ರಮುಖ ಯೋಜನೆಯ ಯಾವುದೆಂದರೆ ಅದು ಗೃಹಲಕ್ಷ್ಮಿ ಯೋಜನೆ, ಈ ಯೋಜನೆಯ ಮೂಲಕ ಅರ್ಜಿ ಹಾಕಿದಂತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹2,000 ಹಣ ವರ್ಗಾವಣೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ಇದು ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯ ಪಡೆದುಕೊಂಡಿದೆ

ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ಪ್ರಮುಖ ಕಾರಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದು ಹಾಗೂ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಮತ್ತು ಇಲ್ಲಿವರೆಗೂ ಮಹಿಳೆಯರಿಗೆ ಏಪ್ರಿಲ್ ತಿಂಗಳವರೆಗೆ ಹಣ ಜಮಾ ಮಾಡಲಾಗಿದೆ ಹಾಗಾಗಿ ಮೇ ಮತ್ತು ಜೂನ್ ತಿಂಗಳ ಹಣ ಯಾವಾಗ ಜಮಾ ಆಗುತ್ತೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ
ಮೇ ಮತ್ತು ಜೂನ್ ತಿಂಗಳ ₹4,000 ಹಣ ಒಟ್ಟಿಗೆ ಬಿಡುಗಡೆ..?
ಹೌದು ಸ್ನೇಹಿತರೆ, ಮಹಿಳೆಯರಿಗೆ ಬಾಕಿ ಇರುವಂತ ಮೇ ಮತ್ತು ಜೂನ್ ತಿಂಗಳ ಹಣ ಒಟ್ಟಿಗೆ ₹4,000/- ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಮೇ ತಿಂಗಳ 2000 ಹಣವನ್ನು ಈಗಾಗಲೇ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದೆ ಮತ್ತು ಈ ಹಣ ಸಂಪೂರ್ಣವಾಗಿ ಇನ್ನೂ ಒಂದು ವಾರದ ಒಳಗಡೆ ಅಂದರೆ ಜುಲೈ 22 ನೇ ತಾರೀಖಿನ ಒಳಗಡೆ ಮೇ ತಿಂಗಳ ಹಣ ಜಮಾ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ,
ನಂತರ ಜೂನ್ ತಿಂಗಳ 2000 ಹಣವನ್ನು ಜುಲೈ 30 ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಮನೆಯ ತಲುಪುವಂತೆ ಮಾಡಲಾಗುತ್ತದೆ ಎಂದು ಸ್ಪಷ್ಟ ಮಾಹಿತಿ ಮಾಧ್ಯಮಗಳಿಗೆ ನೀಡಿದ್ದಾರೆ.
ಹೌದು ಸ್ನೇಹಿತರೆ ಈಗಾಗಲೇ ಹಾವೇರಿ ಹಾಗೂ ಮೈಸೂರು ಜಿಲ್ಲೆಯ ಕೆಲ ಮಹಿಳೆಯರ ಖಾತೆಗೆ 2000 ಹಣ ಜಮಾ ಆಗುತ್ತದೆ ಮತ್ತು ಇನ್ನು ಉಳಿದ ಜಿಲ್ಲೆಗಳ ಮಹಿಳೆಯರ ಖಾತೆಗೆ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುತ್ತೆ ಎಂದು ಮಾಹಿತಿ ತಿಳಿಸಿದ್ದಾರೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ನಮಗೆ ಹಣ ಬಿಡುಗಡೆ ಮಾಡಲು ಯಾವುದೇ ರೀತಿ ಹಣಕಾಸಿನ ಕೊರತೆ ಇಲ್ಲ ಎಂಬ ಮಾಹಿತಿ ತಿಳಿಸಿದ್ದಾರೆ ಹಾಗೂ ಹಣ ಬಿಡುಗಡೆಗೆ ಕೇವಲ ತಾಂತ್ರಿಕ ಸಮಸ್ಯೆಗಳೇ ಕಾರಣ ಹಾಗೂ ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಿ ಮಹಿಳೆಯರ ಖಾತೆಗೆ ಹಣ ತಲುಪುವಂತೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ
ನಿಮಗೆ ಖಾತೆಗೆ ಇನ್ನೂ ಹಣ ಬಂದಿಲ್ಲವಾ, ಹಾಗಾದರೆ ಏನು ಮಾಡಬೇಕು..?
ಗೃಹಲಕ್ಷ್ಮಿ ಯೋಜನೆಯ ಮೂಲಕ 19 ಮತ್ತು 20ನೇ ಕಂತಿನ ಹಣ ಪಡೆದುಕೊಂಡಂತ ಮಹಿಳೆಯರು ಏನು ಮಾಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಹಣ ವರ್ಗಾವಣೆ ಆದ ತಕ್ಷಣ ನಿಮ್ಮ ಖಾತೆಗೆ ಹಣ ಬರುತ್ತೆ.
ಒಂದು ವೇಳೆ ನಿಮಗೆ ಐದು ಅಥವಾ ಎಂಟು ಕಂತಿನ ಹಣ ಬಾಕಿ ಇದ್ದರೆ ಕೂಡಲೇ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಚೇರಿ (CDPO) ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಜಮಾ ಆಗುತ್ತಿಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ,
ಈ ಇಲಾಖೆಗೆ ಭೇಟಿ ನೀಡುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳು ಹಾಗೂ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಿ, ನಂತರ ಯಾವುದೇ ದೋಷ ಅಥವಾ ಸಮಸ್ಯೆ ಇದ್ದರೆ ಸರಿಪಡಿಸಿ ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ಮಾಡುತ್ತಾರೆ
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತಿಳಿಯುವುದು ಹೇಗೆ.?
ಹೌದು ಸ್ನೇಹಿತರೆ ನಿಮಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿಲ್ಲವೆಂದರೆ ನೀವು ನಿಮ್ಮ ಸ್ಥಳೀಯ ಅಂಗನವಾಡಿ ಕಾರ್ಯಕರ್ತರನ್ನು ಸಂಪರ್ಕಿಸಿ ಅಥವಾ ಕೆಳಗಡೆ ನೀಡಿದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ
ದೂರವಾಣಿ ಸಂಖ್ಯೆ:- 1800-425-1077
ಅಧಿಕೃತ ವೆಬ್ಸೈಟ್:- https://womenchild.karnataka.gov.in
ಮೇಲೆ ತಿಳಿಸಿದ ವೆಬ್ಸೈಟ್ ಅಥವಾ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ ಅಥವಾ ಇನ್ನೂ ನಿಖರ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ CDPO ಕಚೇರಿಗೆ ಭೇಟಿ ನೀಡಿ
ಸ್ನೇಹಿತರೆ ಇದೇ ರೀತಿ ಗೃಹಲಕ್ಷ್ಮಿ ಯೋಜನೆ ಹಾಗೂ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ










1 thought on “Gruhalakshmi: ಗೃಹಲಕ್ಷ್ಮಿ ಯೋಜನೆಯ ಮೇ-ಜೂನ್ ತಿಂಗಳ ₹4,000 ಹಣ ಜಮಾ.! ನಿಮ್ಮ ಖಾತೆಗೆ ಬಂದಿದ್ದೀಯಾ.! ಚೆಕ್ ಮಾಡಿ”