PMMVY Yojana: ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಿಗಲಿದೆ 11,000 ಸಹಾಯಧನ!
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ₹11,000/- ರೂಪಾಯಿ ವರೆಗೆ ಆರ್ಥಿಕ ನೆರವು ಸಿಗುತ್ತದೆ, ಆದ್ದರಿಂದ ನಾವು ಈ ಲೇಖನೆಯಲ್ಲಿ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಎಂದರೆ ಏನು? ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಶೇರ್ ಮಾಡಿ
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ..?
ಸ್ನೇಹಿತರೆ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯನ್ನು ಕೇಂದ್ರ ಸರ್ಕಾರ 01/01/2017 ರಂದು ಈ ಒಂದು ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡುವುದು ಹಾಗೂ ಉತ್ತಮ (protein food) ಪೌಷ್ಟಿಕ ಆಹಾರ ಸೇವೆಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಹೌದು ಸ್ನೇಹಿತರ ಪ್ರಧಾನಮಂತ್ರಿ ಮಾತೃ ವಂದನಾ (PMMVY) ಯೋಜನೆಯ ಮಹಿಳೆಯರಿಗಾಗಿ ಮಾತ್ರ (Women) ಜಾರಿಗೆ ತರಲಾಗಿದೆ ಮತ್ತು ಈ ಯೋಜನೆಯ ಮೂಲಕ ಮಹಿಳೆಯರು ಪೌಷ್ಟಿಕ ಆಹಾರ ಪಡೆಯಲು (protein food) ಕೇಂದ್ರ ಸರ್ಕಾರವು ಈ ಒಂದು ಯೋಜನೆಯ ಮೂಲಕ ₹11,000/- ವರೆಗೆ ಹಣ ಸಹಾಯ ಮಾಡುತ್ತದೆ
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಮಹಿಳಾ ಫಲಾನುಭವಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ, ಹೌದು ಸ್ನೇಹಿತರೆ ಮಹಿಳೆಯರು ಮೊದಲನೇ ಮಗುವಿನ ಹೆರಿಗೆಯ ಸಂದರ್ಭದಲ್ಲಿ ಈ ಯೋಜನೆಯ ಮೂಲಕ ₹5000/- ವರೆಗೆ ಹಣ ಪಡೆಯಬಹುದು ಹಾಗೂ ಎರಡನೇ ಮಗುವಿನ ಹೆರಿಗೆಯ ಸಂದರ್ಭದಲ್ಲಿ ಈ ಯೋಜನೆ ಮೂಲಕ ₹6,000/- ಹಣ ಪಡೆಯಬಹುದು ಅಂದರೆ ಈ ಒಂದು ಯೋಜನೆಯಡಿಯಲ್ಲಿ ಮಹಿಳೆಯರು ಒಟ್ಟು ₹11000 ವರೆಗೆ ಕೇಂದ್ರ ಸರಕಾರ ಕಡೆಯಿಂದ ಆರ್ಥಿಕ ನೆರವು ಪಡೆಯಬಹುದು
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ bpl ರೇಷನ್ ಕಾರ್ಡ್ ಹೊಂದಿದವರು ಹಾಗೂ ಈ ಶ್ರಮ ಕಾರ್ಡ್ ಹೊಂದಿದವರು, ಹಿಂದುಳಿದ ವರ್ಗದ ಮಹಿಳೆಯರು, ನೆರೆಗಾ ಜಾಬ್ ಕಾರ್ಡ್ ಹೊಂದಿದವರು, ಮತ್ತು ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಹೊಂದಿದಂತ ಪ್ರತಿಯೊಬ್ಬ ಕುಟುಂಬದ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯಬಹುದು
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ತಾಯಿ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ
- ಇತ್ತೀಚಿನ ಫೋಟೋ
- ಮೊಬೈಲ್ ನಂಬರ್.
- ಮಗುವಿನ ಲಸಿಕೆಯ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?
ಮಹಿಳೆಯರು ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತರನ್ನು ನೀವು ಭೇಟಿ ಮಾಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು
1 thought on “PMMVY Yojana: ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಿಗಲಿದೆ 11,000 ಸಹಾಯಧನ!”