ahara.kar.nic.in ration card status: ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಚೆಕ್ ಮಾಡಲು ಬೇಕಾಗುವ ಲಿಂಕ್
ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಿಮ್ಮ ಮೊಬೈಲ್ ಮೂಲಕ ರೇಷನ್ ಕಾರ್ಡ್ ಸ್ಥಿತಿ ಮಾಡುವ ವಿಧಾನ ಹಾಗೂ ಹೊಸ ರೇಷನ್ ಕಾರ್ಡ್ ಅಪ್ರುವಲ್ ಆಗಿದೆಯಾ ಅಥವಾ ಇಲ್ಲವಾ ಹಾಗೂ ರೇಷನ್ ಕಾರ್ಡ್ ekyc ಆಗಿದೆಯಾ ಇಲ್ಲವ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ಮೂಲಕ ತುಂಬಾ ಸುಲಭವಾಗಿ ಯಾವ ರೀತಿ ಚೆಕ್ ಮಾಡಬಹುದು ಎಂಬ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಿ
ಹೊಸ ರೇಷನ್ ಕಾರ್ಡ್ (ahara.kar.nic.in ration card status).?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ತುಂಬಾ ಜನರು ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದಾರೆ ಆಹಾರ ಇಲಾಖೆ ತಿಳಿಸಿದ ಮಾಹಿತಿ ಪ್ರಕಾರ 2023 ಒಳಗಡೆ ಸುಮಾರು 2,95,818 ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆಗಿವೆ ಎಂದು ವರದಿ ನೀಡಿದೆ.! ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಸ್ಥಿತಿ ಚೆಕ್ ಮಾಡುವ ವಿಧಾನ ಗೊತ್ತಿಲ್ಲ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಯಾವ ರೀತಿ ಮೊಬೈಲ್ ನಲ್ಲಿ ಹೊಸ ರೇಷನ್ ಕಾರ್ಡ್ ಮಾಡುವುದು ಎಂಬ ವಿಧಾನವನ್ನು ತುಂಬ ಸುಲಭವಾಗಿ ವಿವರಿಸಿದ್ದೇವೆ

ಆದ್ದರಿಂದ ಈ ಒಂದು ಲೇಖನವನ್ನು ಆದಷ್ಟು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಿದ ಜನರಿಗೆ ಹಾಗೂ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಲು ಗೊತ್ತಿಲ್ಲದಂಥ ಜನರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಮಾಹಿತಿಗಾಗಿ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜಾಯಿನ್ ಆಗಬಹುದು
ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವ ವಿಧಾನ (ahara.kar.nic.in ration card status).?
ಸ್ನೇಹಿತರೆ ನೀವು ರೇಷನ್ ಕಾರ್ಡ್ ಸ್ಟೇಟಸ್ ಅಥವಾ ಸ್ಥಿತಿ ಚೆಕ್ ಮಾಡಲು ಬಯಸಿದರೆ ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ಕೊಟ್ಟಿರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು.! ಕರ್ನಾಟಕ ಸರ್ಕಾರದ ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಿ

- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಎಡಭಾಗದಲ್ಲಿ ನಿಮಗೆ ಮೂರು ಅಡ್ಡ ಗೆರೆಗಳು ಕಾಣುತ್ತವೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ e-status ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು
- ನಂತರ ನಿಮಗೆ ಅಲ್ಲಿ ಮೂರು ವಿಧವಾದ ಲಿಂಕ್ ಕಾಣುತ್ತಾವೆ ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಮತ್ತು ಕಲಬುರ್ಗಿ ವಿಭಾಗ ಎಂದು ಕಾಣುತ್ತದೆ, ಅದರಲ್ಲಿ ನಿಮಗೆ ಯಾವ ರೀಜನ್ ನಲ್ಲಿ ನಿಮ್ಮ ಡಿಸ್ಟ್ರಿಕ್ಟ್ ಬರುತ್ತೆ ಎಂಬ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ
- ಉದಾಹರಣೆ:- ನಾವು ಕಲಬುರ್ಗಿ ವಿಭಾಗದ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಹೊಸ ಪುಟ ಓಪನ್ ಆಗುತ್ತೆ

- ಅಲ್ಲಿ ನಿಮಗೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಯ ಸ್ಥಿತಿ, ಮತ್ತು ಪಡಿತರ ಚೀಟಿಯ ವಿವರ, ಹಾಗೂ ಪಡಿತರ ಚೀಟಿ ಬದಲಾವಣೆ ಕೋರಿಕೆ ಸ್ಥಿತಿ, ಪಡಿತರ ನಿರಾಕರಣಿ ನೋಂದಣಿ, ನೇರ ನಗದು ವರ್ಗಾವಣೆ ಸ್ಥಿತಿ ಹಾಗೂ ಜಾಗರೂಕತಾ ಸಮಿತಿ ಸಭೆಯಲ್ಲಿ ಅಟೆಂಡೆನ್ಸ್ ನೋಂದಣಿ ಎಂಬ ಆಯ್ಕೆಗಳು ಕಾಣುತ್ತವೆ
- ಅಲ್ಲಿ ನೀವು ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ನಗರ ಅಥವಾ ಗ್ರಾಮೀಣ ಎಂದು ಕೇಳುತ್ತದೆ ಅಲ್ಲಿ ನೀವು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡಿದರೆ ಗ್ರಾಮೀಣ ಎಂದು ಸೆಲೆಕ್ಟ್ ಮಾಡಿ ಅಥವಾ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಅರ್ಬನ್ ಎಂದು ಸೆಲೆಕ್ಟ್ ಮಾಡಿ
- ನಂತರ ಅಲ್ಲಿ ನಿಮ್ಮ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಅಪ್ಲಿಕೇಶನ್ ಸಂಖ್ಯೆಯನ್ನು ಎಂಟರ್ ಮಾಡಿ ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಹಾಗೂ ಗ್ರಾಮ ಸೆಲೆಕ್ಟ್ ಮಾಡಿಕೊಂಡು
- ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ವಿವರಗಳ ಬಗ್ಗೆ ಮಾಹಿತಿ ಸಿಗುತ್ತದೆ