Vidyasiri Scholarship 2025 Eligibility; ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ (Apply online) ಅರ್ಜಿ ಪ್ರಾರಂಭ.! ವಿದ್ಯಾರ್ಥಿಗಳಿಗೆ ಸಿಗಲಿದೆ 15000 ಹಣ,
ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ಆಸಕ್ತಿ ಇರುವವರು ಬೇಗ ಅರ್ಜಿ ಸಲ್ಲಿಕೆ ಮಾಡಿ…
ಹೌದು ಗೆಳೆಯರೇ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಮೂಲಕ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಸರಕಾರ ಕಡೆಯಿಂದ ನೇರವಾಗಿ ಬ್ಯಾಂಕ್ ಖಾತೆಗೆ ಈ ವಿದ್ಯಾಸಿರಿ ಸ್ಕಾಲರ್ಶಿಪ್ ಮೂಲಕ ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ಬಯಸುವಂಥ ವಿದ್ಯಾರ್ಥಿಗಳಿಗೆ ಇದು ಸುವರ್ಣ ಅವಕಾಶ ಹಾಗಾಗಿ ಆನ್ಲೈನ್ ಮೂಲಕ ಬೇಗ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ
ವಿದ್ಯಾಸಿರಿ ವಿದ್ಯಾರ್ಥಿ ವೇತನ (Vidyasiri Scholarship 2025 Eligibility)..?
ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಅಲೆಮಾರಿ ಮತ್ತು ಅಲೆ ಅಲೆಮಾರಿ ಮತ್ತು ಇತರ ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಬೆಂಬಲ ನೀಡುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಿಂದ ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿದೆ

ವಿದ್ಯಾಸಿರಿ ವಿದ್ಯಾರ್ಥಿ ವೇತನದ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ತಿಂಗಳಿಗೆ 1,500 ಯಂತೆ ವರ್ಷಕ್ಕೆ ಅಂದರೆ ಒಟ್ಟು ಹತ್ತು ತಿಂಗಳಿಗೆ 15000 ಹಣವನ್ನು ಈ ಒಂದು ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಯ ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಹಾಗೂ ಸರಕಾರದಿಂದ ಆರ್ಥಿಕ ಸಹಾಯ ಪಡೆಯಲು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
ವಿದ್ಯಾಸಿರಿ ಸ್ಕಾಲರ್ಶಿಪ್ (Vidyasiri Scholarship 2025 Eligibility) ಯೋಜನೆಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು..?
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು ಅಂದರೆ ಪ್ರಸ್ತುತ ವರ್ಷದಲ್ಲಿ ಮೆಟ್ರಿಕ್ ನಂತರದ ಅಂದರೆ PUC, ಪದವಿ, ಡಿಪ್ಲೋಮೋ, ಸ್ನಾತಕೋತ್ತರ ಪದವಿ ಮತ್ತು ಇತರೆ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಖಾಸಗಿ ಮತ್ತು ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಹಾಗೂ ಮಾನ್ಯತ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಹಾಗೂ ಈ ಒಂದು ವಿದ್ಯಾರ್ಥಿ ವೇತನಕ್ಕೆ ಮಹಿಳೆಯರಿಗೆ ಅವಕಾಶ ಇಲ್ಲ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Vidyasiri Scholarship 2025 Eligibility)..?
- ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಗಿರಬೇಕು ಹಾಗೂ ನಗರ ಮತ್ತು ಪಟ್ಟಣದಲ್ಲಿ ವಾಸಸುತ್ತಿರುವ ವಿದ್ಯಾರ್ಥಿಗಳು ಪಟ್ಟಣದ ಬೇರೆ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರಬೇಕು ಅಥವಾ ವಿದ್ಯಾರ್ಥಿಯ ನಿವಾಸದಿಂದ ಕಾಲೇಜಿನ ದೂರ ಕನಿಷ್ಠ 05 KM ಹೆಚ್ಚು ಒಂದಿರಬೇಕು ಅಂತವರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ
- ವಿದ್ಯಾರ್ಥಿಗಳು ಪ್ರಸ್ತುತ ವರ್ಷದಲ್ಲಿ (Vidyasiri Scholarship 2025) ಮೆಟ್ರಿಕ್ ನಂತರದ ಪಿಯುಸಿ (PUC) ಹಾಗೂ ಡಿಪ್ಲೋಮೋ ಮತ್ತು ಪದವಿ ಮತ್ತು ಸ್ನಾತಕೋತ್ತರ ಪದವಿ (PG) ಹಾಗೂ ಇತರ ಯಾವುದೇ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರಬೇಕು
- ವಿದ್ಯಾರ್ಥಿಗಳು ನಮ್ಮ ಕರ್ನಾಟಕದ ಕಾಯಂ ನಿವಾಸಿಗಳು ಆಗಿರಬೇಕು ಹಾಗೂ ಭಾರತದ ಪ್ರಜೆಯಾಗಿರಬೇಕು
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿಗಿಂತ ಕಡಿಮೆ ಒಂದಿರಬೇಕಾಗುತ್ತದೆ
- ಈ ವಿದ್ಯಾರ್ಥಿ ವೇತನಕ್ಕೆ ವೈದ್ಯಕೀಯ ಕೋರ್ಸ್ ಗಳಲ್ಲಿ ಸ್ನಾತಕೋತ್ತರ ವೈದಿಕ ಕೋರ್ಸುಗಳು ಅಧ್ಯಯನ ಮಾಡುತ್ತಿದ್ದರೆ ಅಂತ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಪ್ರವರ್ಗ-1 ಸೇರಿದರೆ ಕನಿಷ್ಠ ಇಂದಿನ ತರಗತಿಯಲ್ಲಿ 40% ಅಂಕ ಗಳಿಸಿರಬೇಕು ಹಾಗೂ ಪ್ರವರ್ಗ -2A, 3A, 3B ವರ್ಗಕ್ಕೆ ಸೇರಿದರೆ ಇಂದಿನ ತರಗತಿಯಲ್ಲಿ ಕನಿಷ್ಠ 50% ಅಂಕ ಗಳಿಸಿರಬೇಕು
- ಈ ವಿದ್ಯಾರ್ಥಿ ವೇತನದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗುವ (Vidyasiri Scholarship 2025 apply documents) ಅಗತ್ಯ ದಾಖಲಾತಿಗಳ ವಿವರ..?
- ವಿದ್ಯಾರ್ಥಿಯ ಹಿಂದಿನ ಎಲ್ಲಾ ತರಗತಿಯ ಅಂಕಪಟ್ಟಿಗಳು
- ವಿದ್ಯಾರ್ಥಿಯ ಬ್ಯಾಂಕ್ ಖಾತೆ
- ವಿದ್ಯಾರ್ಥಿಯ ಪೋಷಕರ ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಕಾಲೇಜು ಪ್ರವೇಶ ಶುಲ್ಕದ ರಶೀದಿ
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಸ್
- ಇತರೆ ಅಗತ್ಯ ದಾಖಲಾಯಿತುಗಳು
(how to apply online Vidyasiri Scholarship 2025) ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?
ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಕೆಳಗಡೆ ನೀಡಿರುವ ಲಿಂಕ್ ಬಳಸಿಕೊಂಡು ಈ ಒಂದು ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30/09/2025
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ತಕ್ಷಣ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಬಹುದು
Sparsh Scholarship – 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ರೂ.6,000 ಹಣ ಸಿಗುತ್ತೆ, ತಕ್ಷಣ ಅರ್ಜಿ ಸಲ್ಲಿಸಿ