Vidyasiri Scholarship 2025-26 | ವಿದ್ಯಾಸಿರಿ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ | ವಿದ್ಯಾರ್ಥಿಗಳಿಗೆ 15000 ಹಣ ಸಿಗುತ್ತೆ

Vidyasiri Scholarship 2025-26 | ವಿದ್ಯಾಸಿರಿ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ | ವಿದ್ಯಾರ್ಥಿಗಳಿಗೆ 15000 ಹಣ ಸಿಗುತ್ತೆ

ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ಹಾಗೂ ಉನ್ನತ ಶಿಕ್ಷಣ ಪಡೆಯಲು ಬಯಸುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ನಾವು ಈ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಹಾಗೂ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು ಎಂಬ ವಿವರವನ್ನು ತಿಳಿದುಕೊಳ್ಳೋಣ

 

ವಿದ್ಯಾಸಿರಿ ವಿದ್ಯಾರ್ಥಿವೇತನ (Vidyasiri Scholarship 2025-26).?

ನಮ್ಮ ಕರ್ನಾಟಕ ರಾಜ್ಯ ಸರ್ಕಾರ ನಮ್ಮ ರಾಜ್ಯದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಅರೆ ಅಲೆಮಾರಿ & ಅಲೆಮಾರಿ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಶಿಕ್ಷಣಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಬರಿಸಲು ರಾಜ್ಯ ಸರ್ಕಾರ ವಿದ್ಯಾಸಿರಿ ವಿದ್ಯಾರ್ಥಿ ವೇತನ ಜಾರಿಗೆ ತಂದಿದೆ.! ಈ ವಿದ್ಯಾರ್ಥಿ ವೇತನದ ಮೂಲಕ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಅಥವಾ 10 ತಿಂಗಳಿಗೆ ಬರೋಬ್ಬರಿ 15000 ಹಣ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ

Vidyasiri Scholarship 2025-26
Vidyasiri Scholarship 2025-26

 

ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಈ ವಿದ್ಯಾಸಿರಿ ವಿದ್ಯಾರ್ಥಿ ವೇತನದ ಯೋಜನೆಯ ಜಾರಿಗೆ ತಂದಿದೆ ಹಾಗಾಗಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಇದೀಗ SSP ಪೋರ್ಟಲ್ ಮೂಲಕ ಅರ್ಜಿ ಆರಂಭವಾಗಿದ್ದು ಆಸಕ್ತಿ ಇರುವ ವಿದ್ಯಾರ್ಥಿಗಳು ದಿನಾಂಕ 30 ಸೆಪ್ಟೆಂಬರ್ 2025 ರ ಒಳಗಡೆ ಅರ್ಜಿ ಸಲ್ಲಿಕೆ ಮಾಡಬಹುದು

WhatsApp Group Join Now
Telegram Group Join Now       

 

ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು..?

ಸ್ನೇಹಿತರ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ 2025 ಮತ್ತು 2026 ನೇ ಸಾಲಿನಲ್ಲಿ ಹತ್ತನೇ ತರಗತಿ ನಂತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಂದರೆ ಪಿಯುಸಿ, ಡಿಪ್ಲೋಮೋ, ITI, ಪದವಿ, ಸ್ನಾತಕೋತ್ತರ ಪದವಿ ಮತ್ತು ಇತರ ಯಾವುದೇ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು

ಹಾಗಾಗಿ ಸರಕಾರಿ ಮತ್ತು ಸರಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ತಕ್ಷಣ ಈ ಒಂದು ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿ.! ವಿದ್ಯಾರ್ಥಿಗಳು ಈ ಒಂದು ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳು ಹೊಂದಿರಬೇಕು ಇದಕ್ಕೆ ಸಂಬಂಧಿಸಿದ ವಿವರ ಕೆಳಗಡೆ ನೀಡಲಾಗಿದೆ

 

ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು (Vidyasiri Scholarship 2025-26 apply eligibility criteria).?

  • ವಿದ್ಯಾರ್ಥಿ ಗ್ರಾಮೀಣ ಭಾಗದ ನಿವಾಸಿಯಾಗಿರಬೇಕು ಅಥವಾ ವಿದ್ಯಾರ್ಥಿಯ ವಾಸ ಸ್ಥಳ ಅಧ್ಯಯನ ಕೇಂದ್ರದಿಂದ ಕನಿಷ್ಠ ಐದು ಕಿಲೋಮೀಟರ್ ದೂರ ಬಂದಿರಬೇಕು
  • ವಿದ್ಯಾರ್ಥಿಯು ನಮ್ಮ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
  • ವಿದ್ಯಾರ್ಥಿಗಳು ಪ್ರಸ್ತುತ ವರ್ಷ ಅಂದರೆ 2025 ಮತ್ತು 26 ನೇ ಸಾಲಿನಲ್ಲಿ 10ನೇ ತರಗತಿ ನಂತರ ಯಾವುದೇ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರಬೇಕು
  • ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿ ಮೀರಬಾರದು ಅಥವಾ ಸಮನಾಗಿ ಇರಬೇಕು
  • ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಪ್ರವರ್ಗ 1 ವರ್ಗಕ್ಕೆ ಸೇರಿದರೆ ಹಿಂದಿನ ತರಗತಿಯಲ್ಲಿ ಕನಿಷ್ಠ 40% ಅಂಕ ಗಳಿಸಿ ಉತ್ತೀರ್ಣರಾಗಿರಬೇಕು ಹಾಗೂ ಪ್ರವರ್ಗ 2A, 2B & 3A, 3B ವರ್ಗಕ್ಕೆ ಸೇರಿದರೆ ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕ ಗಳಿಸಿ ಉತ್ತೀರ್ಣರಾಗಿರಬೇಕು
  • ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರ ಪಡೆಯಲು ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?

  • ಹಿಂದಿನ ಎಲ್ಲಾ ತರಗತಿಯ ಅಂಕಪಟ್ಟಿಗಳು
  • ಕಾಲೇಜು ಪ್ರವೇಶ ಶುಲ್ಕದ ರಶೀದಿ
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
  • ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ
  • ಪೋಷಕರ ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಫೋಟೋಸ್
  • ಮೊಬೈಲ್ ಸಂಖ್ಯೆ
  • ಇತರೆ ಅಗತ್ಯ ದಾಖಲಾತಿಗಳು

 

ವಿದ್ಯಾಸಿರಿ ವಿದ್ಯಾರ್ಥಿ ಯೋಜನೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Vidyasiri Scholarship 2025-26 apply last date).?

ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಇರುವಂತ ವಿದ್ಯಾರ್ಥಿಗಳು ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದಾರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2025 ನಿಗದಿ ಮಾಡಲಾಗಿದೆ ಆಸಕ್ತಿ ಇರುವವರು ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಕೆ ಮಾಡಬೇಕು

WhatsApp Group Join Now
Telegram Group Join Now       

 

ಅರ್ಜಿ ಸಲ್ಲಿಸುವುದು ಹೇಗೆ (How To Apply online Vidyasiri Scholarship 2025-26).?

ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು SSP ಆನ್ಲೈನ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ನಾವು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ ಅದನ್ನು ಬಳಸಿಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮಗೆ ಹತ್ತಿರವಿರುವ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ಇದೇ ರೀತಿ ಪ್ರತಿದಿನ ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ತಕ್ಷಣ ನೀವು

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ನೇಮಕಾತಿ 2025 – ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

Leave a Comment

?>