Udyogini scheme: ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷ ಬಡ್ಡಿ ರಹಿತ ಸಾಲ.! ಶೆ.50% ಸಬ್ಸಿಡಿ

Udyogini scheme: ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷ ಬಡ್ಡಿ ರಹಿತ ಸಾಲ.! ಶೆ.50% ಸಬ್ಸಿಡಿ

ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗಾಗಿ ಹಾಗೂ ಸ್ವಂತ ಉದ್ಯೋಗ ಮಾಡಲು ಬಯಸುವಂತಹ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ನೀಡುವುದು ಹಾಗೂ 1,50,000 ರೂಪಾಯಿವರೆಗೆ ಸಾಲ ಮನ್ನಾ ಅಥವಾ ಸಬ್ಸಿಡಿ ಸಿಗುತ್ತದೆ ಹಾಗಾಗಿ ಈ ಒಂದು ಲೇಖನ ಮೂಲಕ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಯಾವ ವರ್ಗದ ಮಹಿಳೆಯರಿಗೆ ಎಷ್ಟು ಸಬ್ಸಿಡಿ ಸಿಗುತ್ತೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಮಹಿಳೆಯರಿಗೆ ಜಮಾ ಆಯ್ತು ಇವತ್ತು ರೂ.2000.! ಇಲ್ಲಿದೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣದ ಬಗ್ಗೆ ಮಾಹಿತಿ

 

ಉದ್ಯೋಗಿನಿ ಯೋಜನೆ (Udyogini scheme)..?

ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ಹಿಂದುಳಿದ ವರ್ಗದ ಮಹಿಳೆಯರಿಗೆ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವಂತ ಮಹಿಳೆಯರಿಗೆ ಮತ್ತು ಸ್ವಂತ ಉದ್ಯೋಗ ಮಾಡಲು ಬಯಸುವಂಥ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವುದು ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ ಮಾಡಲು ಈ ಒಂದು ಉದ್ಯೋಗಿನಿ ಯೋಜನೆಯನ್ನು ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿದೆ

Udyogini scheme
Udyogini scheme

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಸ್ವಂತ ಉದ್ಯೋಗ ಮಾಡಲು ಬಯಸುವ ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗದ ಮಹಿಳೆಯರಿಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವಂತ ವರ್ಗದ ಮಹಿಳೆಯರಿಗೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ವರೆಗೆ ಯಾವುದೇ ರೀತಿ ಬಡ್ಡಿ ದರ ಇಲ್ಲದೆ ಅಂದರೆ ಜೀರೋ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಈ ಯೋಜನೆ ಅಡಿಯಲ್ಲಿ ಒದಗಿಸಲಾಗುತ್ತದೆ ಮತ್ತು ಕೆಲ ವರ್ಗದ ಮಹಿಳೆಯರಿಗೆ ಶೇ.30 ರಿಂದ ಶೇ.50 ರಷ್ಟು ಸಬ್ಸಿಡಿ ಅಥವಾ ಸಾಲ ಮನ್ನಾ ಮಾಡಲಾಗುತ್ತದೆ.!

ಮೋದಿ ಸರಕಾರ ಕಡೆಯಿಂದ ಹೊಸ ಯೋಜನೆ.! ಅರ್ಜಿ ಸಲ್ಲಿಸಿದವರಿಗೆ (apply online scheme) ಸಿಗುತ್ತೆ ಪ್ರತಿ ತಿಂಗಳು (per month) 3000 ಹಣ (money ) ಇಲ್ಲಿದೆ ಮಾಹಿತಿ

 

ಉದ್ಯೋಗಿನಿ ಯೋಜನೆಯ ಪ್ರಯೋಜನಗಳು..?

  • ಸ್ವಂತ ಉದ್ಯೋಗ ಮಾಡಲು ಮಹಿಳೆಯರಿಗೆ 3 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.!
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡ 50ರಷ್ಟು ಸಹಾಯಧನ ಅಂದರೆ ಸುಮಾರು 1,50,000 ಸಾವಿರ ವರೆಗೆ ಸಾಲ ಮನ್ನಾ ಮಾಡಲಾಗುತ್ತದೆ
  • ಸಾಮಾನ್ಯ ವರ್ಗದ ಮಹಿಳೆಯರಿಗೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಂಡರೆ ಶೇ.30 ರಷ್ಟು ಅಂದರೆ 70 ಸಾವಿರ ರೂಪಾಯಿವರೆಗೆ ಸಾಲ ಮನ್ನಾ ಮಾಡಲಾಗುತ್ತದೆ
  • ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸ್ವಂತ ಉದ್ಯೋಗ ಮಾಡಲು 1 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಪಡೆಯಬಹುದು

 

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Udyogini scheme)..?

  • ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
  • ಅರ್ಜಿದಾರ ಮಹಿಳೆಯ ವಯಸ್ಸು 18 ರಿಂದ 55 ವರ್ಷದ ಒಳಗೆ ಇರಬೇಕು
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಒಳಗಡೆ ಇರಬೇಕು
  • ಸಾಮಾನ್ಯ ವರ್ಗದ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಒಳಗಡೆ ಇರಬೇಕು
  • ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಸಾಲ ಪಡೆದಿರಬಾರದು
  • ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ

 

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?

  • ಮಹಿಳೆಯ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಸತಿ ಪ್ರಮಾಣ ಪತ್ರ
  • ವೋಟರ್ ಐಡಿ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಇತ್ತೀಚಿನ ಫೋಟೋಗಳು
  • ಯೋಜನೆಯ ವರದಿ

 

WhatsApp Group Join Now
Telegram Group Join Now       
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ ಸುಮಾರು 3 ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿದರ ಇಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳಲು ಬಯಸಿದರೆ ನೀವು ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.! ಆದ್ದರಿಂದ ನೀವು ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಮಹಿಳಾ ಅಭಿವೃದ್ಧಿ ನಿಗಮಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಹತ್ತಿರವಿರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ

 

ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ

 

ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಈ ರೀತಿ ಪ್ರತಿದಿನ ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು

Leave a Comment