Rural Godown Subsidy Scheme – ರೈತರಿಗೆ ಗೋದಾಮು ನಿರ್ಮಾಣಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ.!

Rural Godown Subsidy Scheme – ರೈತರಿಗೆ ಗೋದಾಮು ನಿರ್ಮಾಣಕ್ಕೆ ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ.!

ನಮಸ್ಕಾರ ಗೆಳೆಯರೇ ರೈತರಿಗೆ ಇದೀಗ ಸಿಹಿ ಸುದ್ದಿ.! ಪ್ರಕೃತಿ ವಿಕೋಪಗಳಿಂದ ಹಾಗೂ ಅತಿಯಾದ ಮಳೆ ಮತ್ತು ಇತರ ಕಾರಣಗಳಿಂದ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಲು ಗೋದಾಮು ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಯೋಜನೆಯ ಕುರಿತು ಮಾಹಿತಿ ತಿಳಿದುಕೊಳ್ಳೋಣ

ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮತ್ತು ನಬಾರ್ಡ್ ಸಹಯೋಗದಲ್ಲಿ ಗ್ರಾಮೀಣ ಭಂಡಾರಣ್ ಯೋಜನೆಯನ್ನು ಜಾರಿಗೆ ತರಲಾಗಿದೆ ಹಾಗಾಗಿ ಸಣ್ಣ ರೈತರು ಹಾಗೂ ರೈತ ಗುಂಪುಗಳು ಮತ್ತು ಸರಕಾರಿ ಸಂಘಗಳು ಹಾಗೂ ಇತರ ಸಂಸ್ಥೆಗಳು ಗೋದಾಮು ನಿರ್ಮಾಣಕ್ಕೆ ಸಹಾಯಧನ ಪಡೆಯಬಹುದು

 

ಏನಿದು ಗ್ರಾಮೀಣ ಭಂಡಾರಣ್ ಯೋಜನೆ ಸಬ್ಸಿಡಿ (Rural Godown Subsidy Scheme)…?

ಸ್ನೇಹಿತರೆ ಇದು ಗ್ರಾಮೀಣ ಭಾಗದಲ್ಲಿ ರೈತರು ಉತ್ಪತ್ತಿ ಮಾಡುವ ಕೃಷಿ ಉತ್ಪನ್ನಗಳನ್ನು ಅತಿಯಾದ ಮಳೆಯಿಂದ ಹಾಗೂ ಇತರ ಪ್ರಕೃತಿ ವಿಕೋಪಗಳಿಂದ ಸಂರಕ್ಷಣೆ ಮಾಡಲು ಸಣ್ಣ ಪ್ರಮಾಣದ ಅಥವಾ ಸಂಗ್ರಹಣೆ ಮಾಡಲು ಗೋದಾಮು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸಹಯೋಗದಲ್ಲಿ ಗ್ರಾಮೀಣ ಭಂಡಾರಣ್ ಯೋಜನೆಯನ್ನು ಜಾರಿಗೆ ತರಲಾಗಿದೆ..

Rural Godown Subsidy Scheme
Rural Godown Subsidy Scheme

 

WhatsApp Group Join Now
Telegram Group Join Now       

ಗೋದಾಮು ನಿರ್ಮಾಣಕ್ಕೆ ಯಾರು ಅರ್ಜಿ ಸಲ್ಲಿಸಬಹುದು..?

ಸ್ನೇಹಿತರೆ ಈ ಒಂದು ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಹಾಗಾಗಿ ಈ ಯೋಜನೆ ಮೂಲಕ ರೈತರು ಮತ್ತು ರೈತ ಗುಂಪುಗಳು ಹಾಗೂ ಸರಕಾರಿ ಸಂಘಗಳು ಮತ್ತು ಕೃಷಿ ಸಂರಕ್ಷಣಾ ನಿಗಮಗಳು ಹಾಗೂ ಇತರ ಸರಕಾರೇತರ ಸಂಸ್ಥೆಗಳು, ವ್ಯಕ್ತಿಗಳು, ಮಾರುಕಟ್ಟೆಯ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಗೋದಾಮು ನಿರ್ಮಾಣಕ್ಕೆ ಎಷ್ಟು ಸಹಾಯಧನ ಸಿಗುತ್ತೆ..?

ಸ್ನೇಹಿತರ ಈ ಒಂದು ಯೋಜನೆಯ ಮೂಲಕ ಗೋದಾಮು ನಿರ್ಮಾಣ ಮಾಡಲು ಬಯಸುವಂಥವರಿಗೆ ಘಟಕದ ವೆಚ್ಚಕ್ಕೆ 15% ರಿಂದ 33.33% ರಷ್ಟು ಸಬ್ಸಿಡಿ ಈ ಒಂದು ಯೋಜನೆಯ ಮೂಲಕ ಪಡೆಯಬಹುದು ಹಾಗಾಗಿ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು ಹಾಗೂ ಸಹಕಾರಿ ಸಂಸ್ಥೆಗಳು ಗೋದಾಮು ನಿರ್ಮಾಣಕ್ಕೆ ಘಟಕದ ವೆಚ್ಚಕ್ಕೆ ಶೇಕಡ 33.33 ರಷ್ಟು ಅಥವಾ ಮೂರು ಕೋಟಿ ರೂಪಾಯಿವರೆಗೆ ಸಹಾಯಧನವನ್ನು ಪಡೆಯಬಹುದು

ಸಹಕಾರಿ ಸಂಸ್ಥೆಗಳು (Cooperatives), ರೈತರು ಮತ್ತು ಕೃಷಿ ಪದವಿದಾರರು ಗೋದಾಮು ನಿರ್ಮಾಣದ ಬಂಡವಾಳ ವೆಚ್ಚಕ್ಕೆ ಶೇಕಡ 25ರಷ್ಟು ಅಥವಾ 2.25 ಕೋಟಿ ರೂಪಾಯಿವರೆಗೆ ಸಬ್ಸಿಡಿ ಅಥವಾ ಸಹಾಯಧನ ಪಡೆಯಬಹುದು

ಕಂಪನಿಗಳು ಮತ್ತು ನಿಗಮಗಳು ಹಾಗೂ ವ್ಯಕ್ತಿಗಳು ಈ ಒಂದು ಯೋಜನೆಯ ಮೂಲಕ ಗೋದಾನು ನಿರ್ಮಾಣ ಮಾಡಲು ಬಂಡವಾಳ ವೆಚ್ಚಕ್ಕೆ 15% ರಷ್ಟು ಅಂದರೆ 1.35 ಕೋಟಿ ರೂಪಾಯಿವರೆಗೆ ಸಹಾಯಧನ ಪಡೆಯಬಹುದು

WhatsApp Group Join Now
Telegram Group Join Now       

 

ಅರ್ಜಿ ಸಲ್ಲಿಸುವುದು ಹೇಗೆ (How To Apply Rural Godown Subsidy Scheme).?

ಸ್ನೇಹಿತರೆ ನೀವು ಗೋಧಾಮು ನಿರ್ಮಾಣ ಮಾಡಲು ಬಯಸುತ್ತಿದ್ದೀರಾ ಹಾಗೂ ಸರ್ಕಾರದಿಂದ ಸಹಾಯಧನ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನೀವು ನಿಮ್ಮ ಹತ್ತಿರದ ಜಿಲ್ಲಾ ಕಚೇರಿಗಳಲ್ಲಿರುವ ನಬಾರ್ಡ್ ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿ ನೀಡಿ ಈ ಒಂದು ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಅಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು

ಹೌದು ಸ್ನೇಹಿತರೆ, ನೀವು ಗೋದಾಮು ನಿರ್ಮಾಣ ಮಾಡಲು ಬಯಸಿದರೆ ಗೋದಾಮು ಗಾತ್ರ ಹಾಗೂ ನಿರ್ಮಾಣದ ವೆಚ್ಚ ಮತ್ತು ಯೋಜನೆಯ ವಿವರ ಹಾಗೂ ನಿರ್ಮಾಣ ಮಾಡಲು ಬಯಸುವ ಭೂಮಿಯ ಮಾಲೀಕತ್ವದ ದಾಖಲಾತಿಗಳು ಮತ್ತು ಸಾಲ ಪಡೆಯಲು ಬೇಕಾಗುವ ಬ್ಯಾಂಕ್ ಖಾತೆಯ ವಿವರಗಳು ಮತ್ತು ಇತರ ಎಲ್ಲಾ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಭೇಟಿ ನೀಡಿ ಹಾಗೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ

 

ಗೋದಾಮು ನಿರ್ಮಾಣ ಮಾಡಲು ಇರುವ ಮಾರ್ಗ ಸೂಚಿಗಳು

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

https://t.me/Karnatakasamachara/1776

 

ಅಧಿಕೃತ ವೆಬ್ಸೈಟ್:- ಇಲ್ಲಿ ಕ್ಲಿಕ್ ಮಾಡಿ

https://dmi.gov.in/Schemegby.aspx

 

ಸ್ನೇಹಿತರೆ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಭೇಟಿ ನೀಡಿ

Leave a Comment

?>