Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ ವಿಸ್ತರಣೆ. ಕೊನೆಯ ದಿನಾಂಕ ಯಾವಾಗ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಆಹಾರ ಇಲಾಖೆ ಕಡೆಯಿಂದ ಕರ್ನಾಟಕದ ಜನತೆಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಆಹಾರ ಇಲಾಖೆಯು ದಿನಾಂಕ ವಿಸ್ತರಣೆ ಮಾಡಲಾಗಿದ್ದು ಈ ಒಂದು ಲೇಖನ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಇರುವ ಕೊನೆಯ ದಿನಾಂಕ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬೇಕು ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಇದೆಯಾ ಇತರ ಅನೇಕ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ 16ನೇ ಕಂತಿನ 2000 ಇಂಥ ಮಹಿಳೆಯರಿಗೆ ಜಮಾ ಆಗಿದೆ ಇಲ್ಲಿದೆ ಮಾಹಿತಿ
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ (Ration Card Application)..?
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಜನರು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಮ್ಮ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಸೇರ್ಪಡೆ ಹಾಗೂ ಹೆಸರು ಬದಲಾವಣೆ ಮತ್ತು ಇತರ ಅನೇಕ ತಿದ್ದುಪಡಿ ಮಾಡಲು ಬಯಸುತ್ತಿದ್ದಾರೆ ಅಂತವರಿಗೆ ಆಹಾರ ಇಲಾಖೆಯ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ನೀಡಿದೆ ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿಗೆ ಇರುವಂತ ಕೊನೆಯ ದಿನಾಂಕದ ವಿಸ್ತರಣೆ ಮಾಡಲಾಗಿದ್ದು ಇದಕ್ಕೆ ಸಮಾಜದ ವಿವರವನ್ನು ತಿಳಿದುಕೊಳ್ಳೋಣ

ಸ್ನೇಹಿತರೆ ಈ ಹಿಂದೆ ಅಂದರೆ 30/06/2025 ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಆಹಾರ ಇಲಾಖೆಯ ಮೂಲಕ ಕರ್ನಾಟಕದ ಜನರಿಗೆ ಅವಕಾಶ ಮಾಡಿಕೊಟ್ಟಿತ್ತು ಆದರೆ ಸರ್ವರ್ ಸಮಸ್ಯೆಯಿಂದ ಮತ್ತು ಇತರ ಅನೇಕ ಕಾರಣಗಳಿಂದ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ ಇದರಿಂದ ರಾಜ್ಯ ಸರ್ಕಾರ ಮತ್ತೆ ಕರ್ನಾಟಕದ ಜನತೆಗೆ ಆಹಾರ ಇಲಾಖೆಯ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಯ ದಿನಾಂಕ ವಿಸ್ತರಣೆ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರ ಕೆಳಗಡೆ ಇದೆ
ರೇಷನ್ ಕಾರ್ಡ್ ತಿದ್ದುಪಡಿ (Ration Card Application) ದಿನಾಂಕ ವಿಸ್ತರಣೆ..?
ಹೌದು ಸ್ನೇಹಿತರೆ, ಇದೀಗ ಆಹಾರ ಇಲಾಖೆ ಕರ್ನಾಟಕದ ಜನತೆಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ರೇಷನ್ ಕಾರ್ಡ್ ತಿದ್ದುಪಡಿಗೆ ಇದ್ದ ದಿನಾಂಕವನ್ನು ಇದೀಗ ವಿಸ್ತರಣೆ ಮಾಡಲಾಗಿತ್ತು ಆಸಕ್ತಿ ಇರುವಂತಹ ಕುಟುಂಬಗಳು ದಿನಾಂಕ 31 ಜುಲೈ 2025 ರವರೆಗೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.!
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇದೇ ತಿಂಗಳು ಅಂದರೆ ಜುಲೈ 31 2025 ರವರೆಗೆ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು ಆಸಕ್ತಿ ಇರುವಂತಹ ಕುಟುಂಬಗಳು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗುತ್ತದೆ ಮತ್ತು ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಶೀಘ್ರದಲ್ಲಿ ನಿಮ್ಮ ಹತ್ತಿರದಲ್ಲಿರುವಂತ ಮೇಲೆ ತಿಳಿಸಿದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಯಾವ ಬದಲಾವಣೆ ಮಾಡಲು ಅವಕಾಶವಿದೆ..?
- ಕುಟುಂಬದ ಮುಖ್ಯಸ್ಥರ ಬದಲಾವಣೆ
- ಹೊಸದಾಗಿ ಮಕ್ಕಳು ಅಥವಾ ಕುಟುಂಬದ ಸದಸ್ಯರ ಸೇರ್ಪಡೆ ಮಾಡಲು ಅವಕಾಶ
- ರೇಷನ್ ಕಾರ್ಡ್ ನಿಂದ ಕುಟುಂಬದ ಸದಸ್ಯರನ್ನು ತೆಗೆದುಹಾಕಲು ಅವಕಾಶ
- ರೇಷನ್ ಕಾರ್ಡ್ ವಿಳಾಸದ ಬದಲಾವಣೆ ಮಾಡಲು ಅವಕಾಶ
- ರೇಷನ್ ಕಾರ್ಡ್ ನಲ್ಲಿ ಇರುವ ನ್ಯಾಯಬೆಲೆ ಅಂಗಡಿಗಳ ಬದಲಾವಣೆ ಮಾಡಲು ಅವಕಾಶ
- ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ E-kyc & ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶ
- ರೇಷನ್ ಕಾರ್ಡ್ ನಲ್ಲಿ ತಪ್ಪಾದ ಹೆಸರನ್ನು ಸರಿಪಡಿಸಲು ಅವಕಾಶ
- ಹಾಗೂ ಇತರ ರೇಷನ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಇದೆಯಾ..?
ಪ್ರಸ್ತುತ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಮಾತ್ರ ಅವಕಾಶ ಮಾಡಿಕೊಡಲಾಗಿದ್ದು ಕೆಲವೊಂದು ಸಂದರ್ಭಗಳಲ್ಲಿ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಐಪಿಎಲ್ ರೇಷನ್ ಕಾರ್ಡ್ ಮತ್ತು ಅಂತೋದಯ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಆದರೆ ಈ ಬಗ್ಗೆ ಸರಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಹಾಗಾಗಿ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಸೆಂಟರ್ಗಳಿಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಾಗ ಮಾಹಿತಿ ತಿಳಿಸಿ ಎಂದು ಹೇಳಿ ಮತ್ತು ನಿಮ್ಮ ಮೊಬೈಲ್ ನಂಬರ್ ನೀಡಿ ಬನ್ನಿ ಹೊಸ ರೇಷನ್ ಕಾರ್ಡ್ ಅರ್ಜಿ ಬಿಟ್ಟಾಗ ಅವರು ನಿಮಗೆ ಮಾಹಿತಿ ನೀಡುತ್ತಾರೆ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಮಾಹಿತಿ ಪಡೆಯಲು ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು
1 thought on “Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ ವಿಸ್ತರಣೆ. ಕೊನೆಯ ದಿನಾಂಕ ಯಾವಾಗ”