pm ujjwala yojana 2025: ಪಿಎಂ ಉಜ್ವಲ ಯೋಜನೆ ಅರ್ಜಿ ಪ್ರಾರಂಭ.! ರೂ.300 ಸಬ್ಸಿಡಿ ಸಿಗುತ್ತೆ ತಕ್ಷಣ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಡ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡುವುದರ ಜೊತೆಗೆ ಉಚಿತ ಸ್ಟವ್ ಒದಗಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.! ಇದೀಗ ಮತ್ತೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಪ್ರಾರಂಭವಾಯಿತು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಪ್ರಧಾನ ಮಂತ್ರಿ ಉಜ್ವಲ ಯೋಜನೆ..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಇರುವಂತ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಮಹಿಳೆಯರಿಗೆ ಈ ಒಂದು ಯೋಜನೆ ಅಡಿಯಲ್ಲಿ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ವಿತರಣೆ ಮಾಡಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.! ಇದೀಗ ಈ ಯೋಜನೆಯ ಮೂಲಕ ಮತ್ತೆ ಅರ್ಜಿ ಸಲ್ಲಿಸಲು 2025 ಮತ್ತು 26 ನೇ ಸಾಲಿನಲ್ಲಿ ಅವಕಾಶ ಮಾಡಿಕೊಡಲಾಗಿದೆ

ಹಾಗಾಗಿ ಆಸಕ್ತಿ ಇರುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆದುಕೊಳ್ಳಬಹುದು ಇದರ ಜೊತೆಗೆ ವರ್ಷಕ್ಕೆ ಒಂಬತ್ತು ಬಾರಿ ಗ್ಯಾಸ್ ಸಿಲಿಂಡರ್ ರೀಫಿಲ್ ಮಾಡಲು ರೂ.300 ಸಬ್ಸಿಡಿ ಹಣ ನೀಡಲಾಗುತ್ತಿದೆ ಹಾಗಾಗಿ ತಕ್ಷಣ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ
ಪಿಎಂ ಉಜ್ವಲ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಗುಡ್ ನ್ಯೂಸ್..?
ಹೌದು ಸ್ನೇಹಿತರೆ ಹೊಸದಾಗಿ ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಹಾಗೂ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದಂತ ಮಹಿಳೆಯರಿಗೆ ಇದೀಗ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ..!
ಕೇಂದ್ರ ಸರ್ಕಾರ ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಸುಮಾರು 12 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ ಇದರಿಂದ ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಒಂಬತ್ತು ಬಾರಿ ರೀ ಫೀಲಿಂಗ್ ಅಥವಾ ಸಿಲಿಂಡರ್ ಬದಲಿಸಿಕೊಂಡರೆ ರೂ.300 ಸಬ್ಸಿಡಿ ಹಣವನ್ನು ಇದೀಗ ಕೇಂದ್ರ ಸರಕಾರ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಿದೆ
ಪಿಎಂ ಉಜ್ವಲ ಯೋಜನೆಯ ಉಪಯೋಗಗಳು..?
ಉಚಿತ ಎಲ್ ಪಿ ಜಿ ಸಿಲಿಂಡರ್ ಮತ್ತು ಸ್ಟವ್:- ಹೌದು ಸ್ನೇಹಿತರೆ ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದಂತಹ ಮಹಿಳೆಯರಿಗೆ ಉಚಿತವಾಗಿ ಒಂದು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ (14.2KG) ನೀಡಲಾಗುತ್ತದೆ ಇದರ ಜೊತೆಗೆ ಅಡಿಗೆ ಮಾಡಲು ಬೇಕಾಗುವ ಅಡಿಗೆ ಸ್ಟವ್ ಉಚಿತವಾಗಿ ನೀಡಲಾಗುತ್ತದೆ
ರೂ.300 ಸಬ್ಸಿಡಿ ಹಣ ಸಿಗುತ್ತೆ:- ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ ವರ್ಷಕ್ಕೆ 9 ಬಾರಿ ರೀ ಫಿಲಂ ಮಾಡಿಸಿದರೆ ಪ್ರತಿ ಸಲವು 300 ಸಬ್ಸಿಡಿ ಗ್ಯಾಸ್ ಸಿಲಿಂಡರ್ ಖರೀದಿಗೆ ನೀಡಲಾಗುತ್ತದೆ
ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?
- ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶ
- ಅರ್ಜಿದಾರರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು
- ಅರ್ಜಿದಾರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು
- ಅರ್ಜಿದಾರರು ಭಾರತದ ನಿವಾಸಿಗಳಾಗಿರಬೇಕು
- ಅರ್ಜಿದಾರ ವಾರ್ಷಿಕ ಆದಾಯ ಮಿತಿ 1.50 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕಾಗುತ್ತದೆ
- ಅರ್ಜಿದಾರರು ಬ್ಯಾಂಕ್ ಖಾತೆ ಹೊಂದಿರಬೇಕು
ಪಿಎಂ ಉಜ್ವಲ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು..?
ನೀವು ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದಾರೆ ನಾವು ಕೆಳಗಡೆ ಒಂದು ಲಿಂಕ್ ನೀಡುತ್ತೇವೆ ಅದನ್ನು ಬಳಸಿಕೊಂಡು ಈ ಒಂದು ಯೋಜನೆಗೆ ತುಂಬಾ ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮಗೆ ಹತ್ತಿರವಿರುವ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ಗಳಿಗೆ ನೀವು ಸೇರಿಕೊಳ್ಳಬಹುದು