PM Kisan Amount Credit – ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಯಾವಾಗ ಬಿಡುಗಡೆ
ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಹೊಸ ಮಾಹಿತಿ ಬಂದಿದೆ. ಹೌದು ಗೆಳೆಯರೇ ನಾವು ಈ ಒಂದು ಲೇಖನಯ ಮೂಲಕ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಹಣ ಪಡೆಯಲು ರೈತರ ಮಾಡಬೇಕಾದ ಕೆಲಸಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಆದಷ್ಟು ರೈತರಿಗೆ ಶೇರ್ ಮಾಡಿ
ಏನಿದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Amount Credit).?
ಸ್ನೇಹಿತರ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಇದು ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ 2019 ರಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಮೂಲಕ ರೈತರಿಗೆ ವರ್ಷಕ್ಕೆ ₹6,000/- ಹಣವನ್ನು ಮೂರು ಕಂತಿನ ರೂಪದಲ್ಲಿ ಅಂದರೆ ಪ್ರತಿ ಕಂತಿಗೆ ₹2,000 ಯಂತೆ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಗೆಳೆಯರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಮೂಲಕ ಇಲ್ಲಿವರೆಗೂ ರೈತರು 20 ಕಂತಿನ ಹಣ ಅಂದರೆ ಸರಿಸುಮಾರು 40,000 ಹಣವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗೂ 21ನೇ ಕಂತಿನ ಹಣ ಯಾವಾಗ ರೈತರ ಖಾತೆಗೆ ಜಮಾ ಆಗುತ್ತದೆ ಎಂದು ತುಂಬಾ ರೈತರು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ
ಪಿಎಂ ಕಿಸಾನ್ 21ನೇ ಕಂತಿನ ಹಣ ಯಾವಾಗ ಬಿಡುಗಡೆ (PM Kisan Amount Credit).?
ಹೌದು ಗೆಳೆಯರೇ ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಪ್ರಕೃತಿ ವಿಕೋಪಕ್ಕೆ ಒಳಗಾದ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಮತ್ತು ಪಂಜಾಬ್ ಹಾಗೂ ಉತ್ತರಖಂಡ್ ಪ್ರದೇಶದ ರೈತರ ಖಾತೆಗೆ ಹಣ ಜಮಾ ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದೆ.
ಹೌದು ಗೆಳೆಯರೇ ಈ ಮೇಲೆ ತಿಳಿಸಿದ ಎಲ್ಲಾ ರಾಜ್ಯದ ರೈತರಿಗೆ ಈಗಾಗಲೇ ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸುಮಾರು 170 ಕೋಟಿ ರೂಪಾಯಿ ಈ ಭಾಗದ ರೈತರಿಗೆ ಬಿಡುಗಡೆ ಮಾಡಿದೆ ಹಾಗೂ ಇಲ್ಲಿವರೆಗೂ ಸುಮಾರು 8.5 ಲಕ್ಷ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ.
ಹೌದು ಗೆಳೆಯರೆ ಪ್ರಕೃತಿ ವಿಕೋಪಕ್ಕೆ ಒಳಗಾದಂತ ರಾಜ್ಯದ ರೈತರಿಗೆ ಈ ಯೋಜನೆ ಮೂಲಕ ಹಣ ಬಿಡುಗಡೆ ಮಾಡಲು ಮೊದಲ ಆದ್ಯತೆ ನೀಡಲಾಗಿದೆ. ಈ ಹಿಂದೆ ದೇಶದ ಎಲ್ಲಾ ರೈತರ ಖಾತೆಗೆ ಒಂದೇ ದಿನ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಮಾಡಲಾಗಿತ್ತು ಆದರೆ ಇದೇ ಮೊದಲ ಬಾರಿಗೆ ಈ ಒಂದು ನಿಯಮ ಕೇಂದ್ರ ಸರ್ಕಾರ ಬ್ರೇಕ್ ಮಾಡಿದೆ. ಹಾಗಾಗಿ ಇನ್ನುಳಿದ ರಾಜ್ಯದ ರೈತರ ಖಾತೆಗೆ ಯಾವಾಗ ಹಣ ಬರುತ್ತೆ ಎಂದು ರೈತರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದ ಮಾಹಿತಿ ಈಗ ತಿಳಿದುಕೊಳ್ಳೋಣ
ಕರ್ನಾಟಕದ ರೈತರಿಗೆ ಯಾವಾಗ 2000 ಹಣ ಬಿಡುಗಡೆಯಾಗುತ್ತೆ (PM Kisan Amount Credit).?
ಸ್ನೇಹಿತರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕೆಲವೊಂದು ಮಾಧ್ಯಮಗಳ ಮಾಹಿತಿಯ ಪ್ರಕಾರ ಹಾಗೂ ಇತರೆ ಮಾಹಿತಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ರೈತರ ಖಾತೆಗೆ ರೂ.2000 ಹಣ ದೀಪಾವಳಿ ಹಬ್ಬದ ವೇಳೆಗೆ ಬಿಡುಗಡೆ ಮಾಡಬಹುದು ಎಂಬ ಮಾಹಿತಿ ತಿಳಿದು ಬಂದಿದೆ.
ಹೌದು ಗೆಳೆಯರೇ ಕಳೆದ ವರ್ಷ 16ನೇ ಕಂತಿನ ಅಕ್ಟೋಬರ್ 5 2024 ರಂದು ಬಿಡುಗಡೆ ಮಾಡಲಾಗಿತ್ತು ಅದೇ ರೀತಿ ಈ ವರ್ಷವೂ ಕೂಡ ಪ್ರಧಾನ ಮಂತ್ರಿ ಸನ್ಮಾನ ಕಿಸಾನ್ ನಿಧಿ ಯೋಜನೆಯ 21ನೇ ಕಂತಿನ 2000 ಇದೇ ತಿಂಗಳು 20ನೇ ತಾರೀಖಿನ ಒಳಗಡೆ ಅಂದರೆ ಅಕ್ಟೋಬರ್ 20 ನೇ ತಾರೀಖಿನ ಒಳಗಡೆ ರೈತರ ಖಾತೆಗೆ ಜಮಾ ಆಗಬಹುದೇ ಎಂಬ ಮಾಹಿತಿ ತಿಳಿದು ಬಂದಿದೆ
ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಆದ್ದರಿಂದ ನೀವು ಈ ಲೇಖನನ್ನು ಆದಷ್ಟು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು
ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
ಅನ್ನಭಾಗ್ಯ ಯೋಜನೆ: ಇನ್ಮುಂದೆ 5 ಕೆ.ಜಿ ಆಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ – ಕೆ. ಹೆಚ್. ಮುನಿಯಪ್ಪ